ಮಹಾನಗರ ಪಾಲಿಕೆ ಶಿವಮೊಗ್ಗ, ಕೌಶಲ್ಯಾಭಿವೃದ್ಧಿ ಇಲಾಖೆ, ಶಿವಮೊಗ್ಗ ಹಾಗೂ ನೇಸರ ಸೆಂಟರ್ ಫಾರ್ ರೂರಲ್ ಆಡ್ವನ್ಸ್ ಮೆಂಟ್ ಸಹಯೋಗದೊಂದಿಗೆ 10ರಂದು ವಿಶ್ವ ವಸತಿ ರಹಿತರ ದಿನಾಚರಣೆಯನ್ನು ಗಿಡ ನೇಡುವ ಮೂಲಕ ಆಚರಿಸಲಾಯಿತು.
ಆಶ್ರಯ ಕೇಂದ್ರದಲ್ಲಿ ತಂಗಿರುವ ಫಲಾನುಭವಿಗಳಿಗೆ ಆರೋಗ್ಯ ತಪಾಸಣೆ, ಸಾಮಾಜಿಕ ಭದ್ರತೆಯಡಿ ಆಯುಷ್ಮಾನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕವನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪುರುಷ ಮತ್ತು ಮಹಿಳಾ ಆಶ್ರಯ ಕೇಂದ್ರದ ಫಲಾನುಭವಿಗಳು, ಶಿವಮೊಗ್ಗ ನಗರದ ವಿವಿಧ NGO ಗಳು, ಮಹಿಳಾ ಸ್ವ-ಸಹಾಯ ಸಂಘ, ಬೀದಿ ಬದಿ ವ್ಯಾಪಾರಸ್ಥರಿಗೆ ಕೇಂದ್ರದ ಬಗ್ಗೆ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ಅಧಿಕಾರಿ ಸುರೇಶ್, ಅಭಿಯಾನ ವ್ಯವಸ್ಥಾಪಕರಾದ ಕಾಶಿನಾಥ, ದೇವೇಂದ್ರನಾಯ್ಕ, ಮಹಾನಗರ ಪಾಲಿಕೆಯ ನಲ್ಮ್ ಯೋಜನೆಯ C.A.O, ರವರಾದ ಶ್ರೀಮತಿ ಅನುಪಮ.T.R, ಮತ್ತು ಅಧಿಕಾರಿ ಸಿಬ್ಬಂಧಿಗಳು, ನೇಸರ ಸಂಸ್ಥೆಯ ಕಾರ್ಯದರ್ಶಿಯಾದ ಮಂಜುನಾಥ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.