ಅಭಯ ಸೇವಾ ಫೌಂಡೇಶನ್ (ರಿ.)
Helping Hands , Caring Hearts ಎದೆಯ ಹಣತೆಯಲ್ಲಿ ಸೇವೆ ಎಂಬ ದೀಪ ವಿಶೇಷ ವಾಕ್ಯದೊಂದಿಗೆ ಉಮೇಶ್ ಶೆಟ್ಟಿ ನೇತೃತ್ವದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ಸಮಾಜಮುಖಿ ಕೆಲಸಗಳನ್ನು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗಣಪತಿ ಪೂಜೆ , ಸೇವಾ ಸಂಕಲ್ಪ ಪ್ರಾರಂಭ ,ನೆರವು ,ವಿಶೇಷ ಆಕರ್ಷಣೆ ಸಂಕಲ್ಪ ಜಾತ , ಹುಲಿಗಳ ಆರ್ಭಟ , ಗಾನ ಗಾಯನ , ವಿವಿಧ ತಂಡಗಳಿಂದ ಭಜನೆ , ಪಂಜಿನ ಮೆರವಣಿಗೆ , ಚಂಡಿಗಳ ವಾದನ , ಹುಲಿವೇಷ ನರ್ತನ , ಮಹಿಷಾಸುರನ ಅಬರ, ಮಾತೆಯರ ಭಕ್ತಿ ಭಾವದೊಂದಿಗೆ ಸಿಂಹ ವಾಹಿನಿಯಾಗಿ ದೇವಿ ಸಾಕ್ಷಾತ್ಕಾರ , ಮಾತೆಯರ ದುರ್ಗಾ ದೀಪ ನಮಸ್ಕಾರ , ಮೇಕೆಕಟ್ಟು ಮೇಳದವರಿಂದ ಚಕ್ರ ಚಂಡಿಕಾ ಯಕ್ಷಗಾನ ಎಂಬ ವಿನೂತನ ಕಾರ್ಯಕ್ರಮಗಳು ನಡೆದವು.

ಹನಿ ಹನಿಗೂಡಿದರೆ ಹಳ್ಳ , ತೆನೆ ತೆನೆಗೂಡಿದರೆ ಬಳ್ಳ ಎಂಬ‌ ಮಾತಿನಂತೆ , ಒಗ್ಗಟ್ಟನ್ನು ಬಲಪಡಿಸಿ ಬರವಸೆಯ ನಾಳೆಗೆ ಸ್ನೇಹ ಸೌಹಾರ್ದತೆಯೊಂದಿಗೆ ಸೇವೆಯ ಸಂಕಲ್ಪ ಮಾಡಲು ಹೊರಟ ನನ್ನಂತ ವ್ಯಕ್ತಿಗೆ ಕೈಜೋಡಿಸಿದ್ದು‌ ಮಾತ್ರವಲ್ಲದೆ , ಒಗ್ಗಟ್ಟಿನಲ್ಲಿ ಬಲವಿದೆ ಎನ್ನುದು ಸಾಭೀತುಪಡಿಸಿದ್ದೀರಿ . ಕಾರ್ಯಕ್ರಮ ಪ್ರಾರಂಭದಿಂದ ಕೊನೆಯವರೆಗೂ ನಿಮ್ಮ ಸಹಕಾರ ಅಭೂತಪೂರ್ವ ಯಶಸ್ಸಿಗೆ ಕಾರಣವಾಯಿತು. ಯಾಕೆಂದರೆ ಇದು ನನ್ನೊಬ್ಬನ ಗೆಲುವಲ್ಲ ನಿಮ್ಮ ಗೆಲುವೆಂದು ಸಂಭ್ರಮಿಸಿ. ಅಭಯ ಸೇವಾ ಫೌಂಡೇಶನ್ ಗೆ ನಮ್ಮೆಲ್ಲರ ಹಾರೈಕೆಯೊಂದಿಗೆ ಭದ್ರ ಬುನಾದಿಯನ್ನು ಹುಟ್ಟು ಹಾಕಿದೆ.


ಒಂದು ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಅದರ ತಯಾರಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ . ಹಗಲು ರಾತ್ರಿಯೆನ್ನದೇ ನಿಮ್ಮ ಬೆವರ ಹನಿಯಲ್ಲಿ ಸಮಾಜ ಸೇವೆ ಮಾಡಿ ಸಮಾಜದ ಋಣ ತೀರಿಸಿದಿರಿ.ನಿಮ್ಮ ಋಣ ನನ್ನಮೇಲಿದೆ ಅದನ್ನು ನಿಮ್ಮ ಜೊತೆಗಿದ್ದು ತೀರಿಸುವೆ. ಪ್ರತಿಯೊಂದು ಕಾರ್ಯಕ್ರಮವು ಜನರನ್ನು ಆಕರ್ಷಿಸಿ ವಾವ್ ಎಂದು ವ್ಯಾಪಕ ಪ್ರಶಂಸೆಗಳಿಸಲು ಸಹಕಾರವಾಯಿತು. ದುರ್ಗಾದೀಪ ನಮಸ್ಕಾರ ದ ಮಂಗಳಾರತಿಯ ಸಮಯದಲ್ಲಿ ಶ್ರೀದೇವಿಯು ವರುಣನ ರೂಪದಲ್ಲಿ ಬಂದು ಆಶೀರ್ವದಿಸಿದ್ದು ಸೇವೆಯ ಪುಣ್ಯ ತೀರ್ಥ ನಮ್ಮೆಲ್ಲರನ್ನು ಸ್ಪರ್ಶಿಸಿದಂತಾಗಿದೆ.

ನಿಮ್ಮ ಅತ್ಯಮೂಲ್ಯ ಸಹಕಾರವನ್ನ ನೋಡಿ ನಾನು ಭಾವಪರವಶನಾದೆ . ನಿಮ್ಮೆಲ್ಲರ ಈ ಸಹಕಾರಕ್ಕೆ ಧನ್ಯವಾದಗಳು ಎಂದು ಒಂದು ಪದದಲ್ಲಿ ಹೇಳಿದರೆ ಕಡಿಮೆಯಾಗಬಹುದು.ಆದರೆ ಅದು ಯಾವಾಗಲೂ ನನ್ನ ಮನದಲ್ಲಿ ಅಚ್ಚಳಿಯುವಂತೆ ಮಾಡಿದೆ. ಅಭಯ ಸೇವಾ ಫೌಂಡೇಶನ್ ಇನ್ನಷ್ಟು ಹತ್ತು ಹಲವಾರು ಸೇವೆಯೊಂದಿಗೆ ರಾರಾಜಿಸಲಿದೆ. ಕಾರ್ಯಕ್ರಮಕ್ಕೆ ಸಹಕರಿಸಿದ ಸರ್ವರಿಗೂ , ಕಾರ್ಯಕ್ರಮ ನೀಡಿ ಮೆರುಗು ಹೆಚ್ಚಿಸಿದ ಎಲ್ಲಾ ತಂಡಗಳಿಗೆ ಅನಂತ ಅನಂತ ಶತಕೋಟಿ ಪ್ರಣಾಮಗಳನ್ನು ಅರ್ಪಿಸುತ್ತೇನೆ ಎಂದರು.

ವರದಿ ಪ್ರಜಾ ಶಕ್ತಿ