ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಬ್ಯಾಂಕ್ ಗಳ ಸುರಕ್ಷತೆಯ ದೃಷ್ಠಿಯಿಂದ ಕೈಗೊಳ್ಳ ಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಲು ಶಿವಮೊಗ್ಗದ ಬ್ಯಾಂಕ್ ಅಧಿಕಾರಿಗಳ ಸಭೆಯನ್ನು ಹಮ್ಮಿಕೊಂಡಿದ್ದು, ಶ್ರೀ ಮಿಥುನ್ ಕುಮಾರ್ ಜಿ. ಕೆ. ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಸದರಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದು, ಸಭೆಯಲ್ಲಿ ಉಪಸ್ಥಿತರಿದ್ದ ಬ್ಯಾಂಕ್ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ ಈ ಕೆಳಕಂಡ ಸಲಹೆ ಸೂಚನೆಗಳನ್ನು ನೀಡಿದರು.
1) ಬ್ಯಾಂಕ್ ಗಳ ಸುರಕ್ಷತೆ ದೃಷ್ಠಿಯಿಂದ ಎಲ್ಲಾ ಬ್ಯಾಂಕ್ ಗಳ ಬ್ರಾಂಚ್ ಗಳನ್ನು ಸೆಕ್ಯುರಿಟಿ ಆಡಿಟ್ ತಂಡದಿಂದ ಕಾಲಕಾಲಕ್ಕೆ ಆಡಿಟ್ ಮಾಡಲಿದ್ದು, ಆಡಿಟ್ ತಂಡದವರು ಸೂಚಿಸುವ ಸುರಕ್ಷತಾ ನ್ಯೂನ್ಯತೆಗಳನ್ನು, ಸಂಬಂಧ ಪಟ್ಟ ಬ್ಯಾಂಕ್ ನ ಅಧಿಕಾರಿಗಳು ಸೂಕ್ತ ಕಾಲಮಿತಿಯೊಳಗೆ ಸರಿಪಡಿಸಿ, ಸುರಕ್ಷತಾ ಕ್ರಮಗಳನ್ನು ಪಾಲನೆ ಮಾಡುವುದು.
2) ಬ್ಯಾಂಕ್ ಬ್ರಾಂಚ್ ಗಳ ಕಟ್ಟಡ, ಕಿಟಕಿ, ಬಾಗಿಲು, ವೆಂಟಿಲೇಷನ್ ವಿಂಡೋ ಹಾಗೂ ಕಾಂಪೌಂಡ್ಗಳನ್ನು ಪರೀಶೀಲನೆ ಮಾಡಿ, ಸದೃಡವಾದ ಗೋಡೆ ಇಲ್ಲದೆ ಇರುವುದು, ಮರದ ಮತ್ತು ಗಾಜಿನ ಬಾಗಿಲುಗಳನ್ನು ಅಳವಡಿಸಿರುವುದು, ದುರ್ಬಲವಾದ ಕಿಟಕಿ ಸರಳುಗಳನ್ನು ಅಳವಡಿಸಿರುವುದು, ಕೊಲ್ಯಾಪ್ಸ್ ಗೇಟ್ ಮತ್ತು ಇಂಟರ್ ಲಾಕ್ ಗೇಟ್ ಗಳು ಇಲ್ಲದೇ ಇರುವುದು, ಸೈರನ್ / ಸಿಸಿಟಿವಿ ಕ್ಯಾಮೆರಾ ಅಳವಡಿಸದೇ ಇರುವುದು ಹಾಗೂ ಇನ್ನಿತರೇ ನ್ಯೂನ್ಯತೆಗಳು ಕಂಡು ಬಂದಲ್ಲಿ, ಸಣ್ಣ ಪುಟ್ಟ ವಿಚಾರಗಳೆಂದು ನಿರ್ಲಕ್ಷತನ ತೋರದೇ, ಬ್ಯಾಂಕ್ ಸುರಕ್ಷತಾ ಮಾರ್ಗಸೂಚಿಗಳನ್ವಯ ಕೂಡಲೇ ಸರಿಪಡಿಸಿಕೊಳ್ಳಿ.
3) ಬ್ಯಾಂಕ್ ಕಟ್ಟಡದ ಹೊರಭಾಗದಲ್ಲಿ ಸ್ವಚ್ಚತೆಯನ್ನು ಕಾಪಾಡಿ ಮತ್ತು ಬ್ಯಾಂಕ್ ನ ಸುತ್ತ ಮುತ್ತಲು ನಡೆಯುವ ಒಡನಾಟಗಳ ಸ್ಪಷ್ಟ ಗೋಚರತೆ ಕಾಣುವ ರೀತಿಯಲ್ಲಿ, ನಿರ್ವಹಣೆ ಮಾಡಿ ಮತ್ತು ಹೊರ ಭಾಗವು ಸಂಪೂರ್ಣವಾಗಿ ಚಿತ್ರೀಕರಣವಾಗುವ ರೀತಿಯಲ್ಲಿ ಸಿಸಿ ಟಿವಿಗಳನ್ನು ಅಳವಡಿಸುವುದು ಮತ್ತು ಬೆಳಕಿನ ವ್ಯವಸ್ಥೆ ಮಾಡುವುದು.
4) ಬ್ಯಾಂಕ್ ಗಳ ಸುರಕ್ಷತಾ ದೃಷ್ಠಿಯಿಂದ ಹಾಗೂ ಅಪರಾಧಗಳ ತಡೆಗಟ್ಟುವ ಮತ್ತು ಪತ್ತೆ ಮಾಡುವ ಉದ್ದೇಶದಿಂದ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು ಕಡ್ಡಾಯವಾಗಿದ್ದು, ಬ್ಯಾಂಕ್ ನ ಒಳಭಾಗ, ಹೊರ ಭಾಗ, ಲಾಕರ್ ರೂಂ, ಕ್ಯಾಶ್ ರೂಂ, ಬ್ಯಾಂಕ್ ನ ಆವರಣ, ಪ್ರವೇಶ ದ್ವಾರ, ಹಿಂಭಾಗ ಹಾಗೂ ಸುತ್ತ ಮುತ್ತಲಿನ ಎಲ್ಲಾ ಪ್ರದೇಶವು ದಿನದ 24 ಗಂಟೆಯೂ ಚಿತ್ರೀಕರಣ ವಾಗುವ ರೀತಿಯಲ್ಲಿ ಹಾಗೂ ಸ್ಪಷ್ಟ ಗೋಚರತೆ ಇರುವ ಸುಧಾರಿತ ತಂತ್ರಜ್ಞಾನವನ್ನು ಹೊಂದಿರುವ ಮೋಷನ್ ಸೆನ್ಸಾರ್ ಹಾಗೂ ನೈಟ್ ವಿಷನ್ ಕ್ಯಾಮೆರಾಗಳನ್ನು ಅಳವಡಿಸುವುದು. ಒಂದು ವೇಳೆ ಸಿಸಿ ಟಿವಿ ಕ್ಯಾಮೆರಾಗಳ ಅಳವಡಿಕೆ ಮತ್ತು ದುರಸ್ತಿ ಇನ್ನೂ ಬಾಕಿ ಇದ್ದಲ್ಲಿ ಮುಂದಿನ 15 ದಿನಗಳಲ್ಲಿ ಸರಿಪಡಿಸುವುದು. ಆ ನಂತರ ಸಂಬಂಧಪಟ್ಟ ಕಾರ್ಯವ್ಯಾಪ್ತಿಯ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.
5) ಸಿಸಿ ಟಿವಿ ಕ್ಯಾಮೆರಾದ ದೃಷ್ಯಾವಳಿಗಳು ಕನಿಷ್ಠ 90 ದಿನಗಳ ವರೆಗೆ ಸಂಗ್ರಹಣೆ ಸಾಮರ್ಥ್ಯ ಇರುವಂತಹ NVR / DVR ಗಳನ್ನು ಅಳವಡಿಸುವುದು ಮತ್ತು NVR / DVR ಗಳನ್ನು ಇತರರಿಗೆ ಸುಲಭವಾಗಿ ಗೋಚರಕ್ಕೆ ಬಾರದಂತಹ ಜಾಗದಲ್ಲಿ ಸುರಕ್ಷಿತವಾಗಿ ಇರಿಸುವುದು ಹಾಗೂ ಬ್ಯಾಕ್ ಅಪ್ ಗಾಗಿ ಮತ್ತೊಂದು Alternative ಸಂಗ್ರಹಣೆಯನ್ನು ಕಡ್ಡದಿಂದ ಹೊರಗೆ / Online Cloud ಸಂಗ್ರಹಣೆಯನ್ನು ಮಾಡುವುದು ಸೂಕ್ತ.
6) ಹೊಸ ತಂತ್ರಜ್ಞಾವುಳ್ಳ ಸುಧಾರಿತ Motion Detection, Security Equipment ಮತ್ತು ಸೈರನ್ ಗಳನ್ನು ಅಳವಡಿಸುವುದು, ಒಂದು ವೇಳೆ ಹಳೆಯ ತಂತ್ರಜ್ಞಾನದ ಉಪಕರಣಗಳಿದ್ದಲ್ಲಿ, ಕೂಡಲೇ ಆಧುನಿಕ ತಂತ್ರಜ್ಞಾನದ ಉಪಕರಣಗಳನ್ನು ಅಳವಡಿಸಿ ಉನ್ನತೀಕರಿಸುವುದು (Upgrade) ಮತ್ತು ಬ್ಯಾಂಕ್ ನಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಮೊಬೈಲ್ ನಂಬರ್ ಗೆ Alert Message ಬರುವ ರೀತಿ ವ್ಯವಸ್ಥೆ ಮಾಡಿಕೊಳ್ಳುವುದು. Security Equipment ಹಾಗೂ ಸಿಸಿ ಟಿವಿ ಕ್ಯಾಮೆರಾಗಳು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವಂತೆ ಯುಪಿಎಸ್ ಗಳನ್ನು ಕಡ್ಡಾಯವಾಗಿ ಅಳವಡಿಸಿ.
7) ಬ್ಯಾಂಕ್, ಎಟಿಎಂ, ಕರೆನ್ಸಿ ಚೆಸ್ಟ್ ಗಳ ಸೂಕ್ಷ್ಮತೆಯನ್ನು ಗಮದಲ್ಲಿಟ್ಟುಕೊಂಡು, ತರಬೇತಿ ಪಡೆದ, ಪ್ರಮಾಣೀಕೃತ ಹಾಗೂ ನೋಂದಾಯಿತ ಸಂಸ್ಥೆಗಳಿಂದ ಮಾತ್ರ ನುರಿತ ಸೆಕ್ಯುರಿಟಿ ಗಾರ್ಡ್ ಗಳನ್ನು ನೇಮಕ ಮಾಡಿಕೊಳ್ಳುವುದು ಹಾಗೂ ನೇಮಕ ಮಾಡುವ ಸಮಯದಲ್ಲಿ ಸೆಕ್ಯುರಿಟಿ ಗಾರ್ಡ್ ಗಳ ಪೂರ್ವಾಪರವನ್ನು ಕಡ್ಡಾಯವಾಗಿ ಪರಿಶೀಲಿಸಿ ನಂತರವೇ ನೇಮಕ ಮಾಡಿಕೊಳ್ಳುವುದು ಹಾಗೂ ಕರ್ತವ್ಯ ನಿರ್ವಹಿಸುವಾಗ ಕಡ್ಡಾಯವಾಗಿ ಬಂದೂಕನ್ನು ಇಟ್ಟುಕೊಂಡಿರಲು ಸೂಚಿಸುವುದು.
8) ಬ್ಯಾಂಕ್ ನಲ್ಲಿರುವ ಗಣಕ ಯಂತ್ರಗಳು, ಸಿಸಿ ಟಿವಿ ಕ್ಯಾಮೆರಾಗಳ ಸರ್ವೀಸ್ ಹಾಗೂ ಇತರೆ ಸೇವೆಗಳಿಗಾಗಿ ಬ್ಯಾಂಕ್ ಗಳಿಗೆ ಭೇಟಿ ನೀಡುವ ತಾತ್ಕಾಲಿಕ ಸಿಬ್ಬಂಧಿಗಳ ಮಾಹಿತಿಗಾಗಿ ರಿಜಿಸ್ಟರ್ ಅನ್ನು ನಿರ್ವಹಣೆ ಮಾಡುವುದು ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ಕೆಲಸ ಮಾಡುವಾಗ ಬ್ಯಾಂಕ್ ನ ವ್ಯವಸ್ಥಾಪಕರು ಅಥವಾ ಮುಖ್ಯ ಅಧಿಕಾರಿಗಳ ಸಮಕ್ಷಮದಲ್ಲಿಯೇ ಕಾರ್ಯ ನಿರ್ವಹಿಸುವುದು.
9) ಬೀಟ್ ಸಿಬ್ಬಂಧಿಗಳು ಕಡ್ಡಾಯವಾಗಿ ಬ್ಯಾಂಕ್ ಗಳಿಗೆ ಭೇಟಿ ನೀಡಿ ಬೀಟ್ ಬುಕ್ ಗೆ ಸಹಿ ಮಾಡುವಂತೆ ಸೂಚಿಸಲಾಗಿದ್ದು ಆದ್ದರಿಂದ ಎಲ್ಲಾ ಬ್ಯಾಂಕ್ ಹಾಗೂ ಬ್ರಾಂಚ್ ಗಳಲ್ಲಿ ಕಡ್ಡಾಯವಾಗಿ ಬೀಟ್ ಬುಕ್ ಅನ್ನು ನಿರ್ವಹಣೆ ಮಾಡುವುದು ಮತ್ತು ಬೀಟ್ ಸಿಬ್ಬಂಧಿಗಳು ಬೀಟ್ ಪುಸ್ತಕದಲ್ಲಿ ಸಹಿ ಮಾಡಿರುವ ಬಗ್ಗೆ ಪರಿಶೀಲಿಸುವುದು.
10) ಶಿವಮೊಗ್ಗ ನಗರದ ಎಲ್ಲಾ ಬ್ಯಾಂಕ್ ಗಳ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂಧಿಗಳನ್ನೊಳಗೊಂಡ ವಾಟ್ಸ್ ಅಪ್ ಗ್ರೂಪ್ ಅನ್ನು ಸೃಜಿಸಲಿದ್ದು, ಯಾವದೇ ಮುಖ್ಯ ವಿಷಯ / ಘಟನೆ ಗಳ ಕುರಿತು ಹಾಗೂ ಪೊಲೀಸ್ ಸಹಾಯ ಬೇಕಾದ ಸಂದರ್ಭದಲ್ಲಿ ಸದರಿ ಗ್ರೂಪ್ ನಲ್ಲಿ ಮಾಹಿತಿ ನೀಡಬಹುದಾಗಿರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಅನಿಲ್ ಕುಮಾರ್ ಭೂಮಾರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಕಾರಿಯಪ್ಪ ಎ.ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ, ಶ್ರೀ ಚಂದ್ರಶೇಖರ್, ಲೀಡ್ ಬ್ಯಾಂಕ್ ನ ಅಧಿಕಾರಿ, ಶಿವಮೊಗ್ಗ ನಗರದ ಎಲ್ಲಾ ಬ್ಯಾಂಕ್ ಗಳ ಅಧಿಕಾರಿಗಳು, ಶಿವಮೊಗ್ಗ ನಗರದ ಪೊಲೀಸ್ ಉಪಾಧಿಕ್ಷಕರು ಮತ್ತು ಪೊಲೀಸ್ ನಿರೀಕ್ಷಕರು ಉಪಸ್ಥಿತರಿದ್ದರು.