ಅಕ್ಟೋಬರ್ ತಿಂಗಳಿನ ಅಕಾಲಿಕ ಮಳೆಯಿಂದಾಗಿ ಶಿವಮೊಗ್ಗ ತಾಲ್ಲೂಕಿನ ಪುರದಾಳು, ಹಿಟ್ಟೂರು, ಅಡಿನಕೊಟ್ಟಿಗೆ, ಮಂಜರಿಕೊಪ್ಪ ಮತ್ತು ಸಿರಿಗೆರೆ ಗ್ರಾವiಗಳಲ್ಲಿ ರೈತರು ಬೆಳೆದ ಶುಂಠಿ ಮತ್ತು ತರಕಾರಿ ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆ ನಡೆಸಿದ್ದು ನಷ್ಟ ಪರಿಹಾರ ಕೊಡಲು ಸಕ್ಷಮ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗಿರುವುದರಿಂದ ಸಾರ್ವಜನಿಕರು ಆಕ್ಷೇಪಣೆಗಳನ್ನು ನ. 11 ರಂದು ಲಿಖಿತವಾಗಿ ಸಲ್ಲಿಸಬಹುದು.


ಆಕ್ಷೇಪಣೆಗಳನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ಶಿವಮೊಗ್ಗ ಇಲ್ಲಿಗೆ ಸಲ್ಲಿಸಬೇಕು.
ಪುರದಾಳು ಗ್ರಾಂ.ಪA ವ್ಯಾಪ್ತಿಯ ಪುರದಾಳಿನ ಕೆ.ಷಣ್ಮುಖ ಸರ್ವೆ ನಂ. 1 ರ 1.20 ಹೆಕ್ಟೆರ್‌ನಲ್ಲಿ ಬೆಳೆದ ಶುಂಠಿಯಲ್ಲಿ 0.40 ಹಾನಿಯಾಗಿದೆ. ರಾಮನಗರ ಗ್ರಾಂ.ಪA. ಹಿಟ್ಟೂರಿನ ಕಾಮನಾಯ್ಕ ಸರ್ವೆ ನಂ. 27ರ 0.40 ಹೆಕ್ಟೆರ್‌ನಲ್ಲಿ ಬೆಳೆದ ಸೌತೆಕಾಯಿ 0.40 ಹಾನಿಯಾಗಿದೆ.

ತಮ್ಮಡಿಹಳ್ಳಿ ಗ್ರಾಂ.ಪA. ಅಡಿನಕೊಟ್ಟಿಗೆಯ ಸಿ.ಎಂ ಸತ್ಯನಾರಯಣ 1.20 ಹೆಕ್ಟೆರ್‌ನಲ್ಲಿ ಬೆಳೆದ ಶುಂಠಿ 0.40 ಹಾನಿಯಾಗಿದೆ. ಸಿರಿಗೆರೆ ಗ್ರಾಂ.ಪA. ಮಂಜರಿಕೊಪ್ಪದ ಜಗದೀಶ್ ಸರ್ವೆ ನಂ. 26ರ 1.98 ಹೆಕ್ಟೆರ್‌ನಲ್ಲಿ ಬೆಳೆದ ಶುಂಠಿ 0.60 ಹಾನಿಯಾಗಿದೆ. ಸಿರಿಗೆರೆ ಗ್ರಾಂ.ಪA. ಮಂಜರಿಕೊಪ್ಪದ ಕಮಲಮ್ಮ ಸರ್ವೆ ನಂ. 26ರ 1.38 ಹೆಕ್ಟೆರ್‌ನಲ್ಲಿ ಬೆಳೆದ ಶುಂಠಿ 0.60 ಹಾನಿಯಾಗಿದೆ. ಸಿರಿಗೆರೆ ಗ್ರಾಂ.ಪA ಸಿರಿಗೆರೆಯ ರಘುವಿಠಲ ಸರ್ವೆ ನಂ. 59ರ 1.98 ಹೆಕ್ಟೆರ್‌ನಲ್ಲಿ ಬೆಳೆದ ಶುಂಠಿ 0.30 ಹಾನಿಯಾಗಿದೆ. ಸಿರಿಗೆರೆ ಗ್ರಾಂ.ಪA ಸಿರಿಗೆರೆಯ ಹಾಲಮ್ಮ ಸರ್ವೆ ನಂ. 59ರ 0.98 ಹೆಕ್ಟೆರ್‌ನಲ್ಲಿ ಬೆಳೆದ ಶುಂಠಿ 0.30 ಹಾನಿಯಾಗಿರುತ್ತದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *