ಶ್ರೀ ಕೃಷ್ಣಮೂರ್ತಿ ಪೋಲಿಸ್ ಉಪಾಧೀಕ್ಷಕರು, ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆ ಶಿವಮೊಗ್ಗ ರವರು ಭದ್ರಾವತಿಯ VISL ಕಾರ್ಖಾನೆಯಲ್ಲಿ ಸೈಬರ್ ಕ್ರೈಂ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು, ಕಾರ್ಖಾನೆಯ ಉದ್ಯೋಗಿಗಳಿಗೆ ಇತ್ತೀಚಿನ ದಿನಗಳಲ್ಲಿ ನೆಡೆಯುತ್ತಿರುವರ ಸೈಬರ್ ಅಪರಾಧಗಳ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತಂತೆ ಈ ಕೆಳಕಂಡ ಮಾಹಿತಿ ನೀಡಿರುತ್ತಾರೆ.

1) ಸೈಬರ್ ವಂಚಕರು ಆನ್ ಲೈನ್ ಮುಖಾಂತರ ನಿಮ್ಮನ್ನು ಸಂಪರ್ಕಿಸಿ, ಹಣ ಹೂಡಿಕೆ ಮಾಡಿದ್ದಲ್ಲಿ, ಕಡಿಮೆ ಅವಧಿಗೆ ಅಧಿಕ ಲಾಭ ಮಾಡಿಕೊಡುವುದಾಗಿ ನಂಬಿಸಿ ನಿಮ್ಮಿಂದ ಹಣ ಪಡೆದುಕೊಂಡ ನಂತರ ನೀವು ಹೂಡಿಕೆ ಮಾಡಿದ ಹಣ ಹಿಂದಿರುಗಿಸದೇ ಮೋಸ ಮಾಡುತ್ತಾರೆ, ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಂಭಾಂಶದ ಆಸೆಗೆ ಬಿದ್ದು ಮೋಸ ಹೋಗಬೇಡಿ ಮತ್ತು ಆನ್ ಲೈನ್ ಮುಖಾಂತರ ಅಪರಿಚಿತರೊಂದಿಗೆ ಹಣಕಾಸಿನ ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದಿರಿ.

2) ಫೇಸ್ ಬುಕ್, ಇನ್ ಸ್ಟಾಗ್ರಾಮ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುವಾಗ ಎಚ್ಚರಿಕೆಯಿಂದಿರಿ ಮತ್ತು ನಿಮ್ಮ ಖಾಸಗೀ ಹಾಗೂ ಮೌಲ್ಯಯುತ ಮಾಹಿತಿಗಳು, ವಿಡಿಯೋ, ಫೋಟೋ ಹಾಗೂ ಬ್ಯಾಂಕ್ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ, ಸೈಬರ್ ವಂಚಕರು ಈ ಮಾಹಿತಿಗಳನ್ನು ದುರುಪಯೋಗ ಪಡಿಸಿಕೊಂಡು ನಿಮ್ಮ ವಿರುದ್ಧವೇ ಅಸ್ತ್ರವಾಗಿ ಬಳಸಿ ನಿಮ್ಮನ್ನು ವಂಚಿಸುವ ಸಾಧ್ಯತೆ ಇರುತ್ತದೆ.

3) ಕೇಂದ್ರ ಸರ್ಕಾರವು ದೂರಸಂಪರ್ಕ ಇಲಾಖೆಯ ಸಹಯೋಗದಲ್ಲಿ ಕಳೆದು ಹೋದ ಮೊಬೈಲನ್ನು ಪತ್ತೆ ಮಾಡುವ ಉದ್ದೇಶದಿಂದ CEIR (Central Equipment Identity Register) ಪೊರ್ಟಲ್ ನ್ನು ಜಾರಿಗೆ ತಂದಿದ್ದು, ಸಾರ್ವಜನಿಕರು ತಮ್ಮ ಕಳೆದು ಹೋದ ಮೊಬೈಲ್ ಮಾಹಿತಿಯನ್ನು CEIR ಪೊರ್ಟಲ್ ನಲ್ಲಿ ನೋಂದಾಯಿಸುವ ಮೂಲಕ ಬ್ಲಾಕ್ ಮಾಡುವ ಅವಕಾಶವಿರುತ್ತದೆ ಹಾಗೂ ಕಳೆದು ಹೋದ ನಿಮ್ಮ ಮೊಬೈಲ್ ಅನ್ನು ಬೇರೆಯವರು ಬಳಕೆ ಮಾಡಲು ಪ್ರಯತ್ನಿಸಿದಾಗ ನಿಮಗೆ ನೋಟಿಫಿಕೇಷನ್ ಸಹಾ ಬರಲಿದ್ದು ಈ ಮೂಲಕ ನಿಮ್ಮ ಮೊಬೈಲ್ ಗಳನ್ನು ಪತ್ತೆ ಮಾಡಲು ಸಾಧ್ಯವಿರುತ್ತದೆ. ಆದ್ದರಿಂದ ನಿಮ್ಮ ಮೊಬೈಲ್ ಫೊನ್ ಕಳೆದು ಹೋದ ಕೂಡಲೇ KSP – Application ನಲ್ಲಿನ Mobile Lost ನಲ್ಲಿ ದೂರು ದಾಖಲಿಸಿ ನಂತರ CEIR (Central Equipment Identity Register) ಪೊರ್ಟಲ್ ನಲ್ಲಿ ದೂರು ನಮೂದು ಮಾಡಿ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ VISL ಕಾರ್ಖಾನೆಯ ಉದ್ಯೋಗಿಗಳು ಹಾಗೂ ಸಿಇಎನ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *