ಕಾನೂನಿನಡಿ ಪಡೆದ ದತ್ತು-ಜೀವನವಿಡಿ ಸುಖದ ಸಂಪತ್ತು
ಮಕ್ಕಳಿಲ್ಲದವರಿಗೆ ತಂದೆ-ತಾಯಿಯಾಗುವ ಸುಯೋಗವನ್ನು ಮತ್ತು ತಂದೆತಾಯಿ ಇಲ್ಲದ ಮಕ್ಕಳಿಗೆ ತಂದೆತಾಯಿ, ಕುಟುಂಬ ಹೊಂದುವ ಪ್ರಯೋಜನವನ್ನು ಒದಗಿಸುವ ವಿಧಾನವೇ ದತ್ತು.


ಪ್ರಾಚೀನ ಕಾಲದಿಂದಲೂ ದತ್ತು ಸ್ವೀಕಾರ ಇತ್ತೆಂಬ ಆಧಾರಗಳಿವೆ. ಆದರೆ ಪ್ರಾಚೀನ ಕಾಲದಲ್ಲಿ ದತ್ತು ಸ್ವೀಕಾರದ ಉದ್ದೇಶಗಳು ಈಗ ಇರುವುದಕ್ಕಿಂತ ಭಿನ್ನವಾಗಿದ್ದವು. ಆಧುನಿಕ ಸಮಾಜಗಳಲ್ಲಿ ಶಿಶು ಕಲ್ಯಾಣ ಸಾಧನೆಯ ದೃಷ್ಟಿಯಿಂದ ದತ್ತು ಸ್ವೀಕಾರಕ್ಕೆ ಪ್ರಾಮುಖ್ಯತೆ ಲಭ್ಯವಾಗುತ್ತಿದೆ.
ಪ್ರತಿ ವರ್ಷ ನವೆಂಬರ್ ತಿಂAಗಳನ್ನು ರಾಷ್ಟಿçÃಯ ದತ್ತು ಮಾಸಾಚರಣೆಯನ್ನಾಗಿ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಸಾರ್ವಜನಿಕರಲ್ಲಿ ಕಾನೂನು ಬದ್ದ ದತ್ತು ಮತ್ತು ಕಾನೂನು ಬಾಹಿರವಾಗಿ ಮಕ್ಕಳನ್ನು ದತ್ತು ಪಡೆದಲ್ಲಿ ವಿಧಿಸಬಹುದಾದ ಶಿಕ್ಷೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವ್ಯಾಪಕವಾದ ಪ್ರಚಾರ ಕೈಗೊಳ್ಳುವ ನಿಟ್ಟಿನಲ್ಲಿ ರಾಷ್ಟಿçÃಯ ದತ್ತು ಮಾಚಾಚರಣೆ 2024 ರ
‘ಪೋಷಕತ್ವ ಕಾರ್ಯಕ್ರಮದಡಿ ಮಕ್ಕಳನ್ನು ದತ್ತು ತೆಗೆದುಕೊಳ್ಳುವುದನ್ನು ಉತ್ತೇಜಿಸಲು ಮೀಸಲಾದ ವಿಶೇಷ ದಿನವಾಗಿದೆ.

ಶಾಶ್ವತ ಕುಟುಂಬದ ಅಗತ್ಯವಿರುವ ಮಕ್ಕಳಿಗೆ ಶಾಶ್ವತ, ಸ್ಥಿರ ಮತ್ತು ಕಾಳಜಿಯುಳ್ಳ ವಾತಾವರಣ ಒದಗಿಸಲು ತಮ್ಮ ಹೃದಯ ಮತ್ತ ಮನೆಗಳನ್ನು ತೆರೆಯುವ ಪ್ರೀತಿಯ ಕುಟುಂಬಗಳನ್ನು ಗುರುತಿಸುವ ಸಂದರ್ಭವಾಗಿದೆ’ ಎಂಬ ಘೋಷವಾಕ್ಯದೊಂದಿಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ.
ದತ್ತು ಯಾರು ತೆಗೆದುಕೊಳ್ಳಬಹುದು?
ಮಗುವನ್ನು ಕುಟುಂಬದಲ್ಲಿ ಇಟ್ಟುಕೊಳ್ಳಲು ಆಸಕ್ತಿ ಇರುವ ದಂಪತಿಗಳು ದತ್ತು ತೆಗೆದುಕೊಳ್ಳಬಹುದು. ದತ್ತು ಸ್ವೀಕಾರ ಮಾಡಲು ಇಚ್ಛಿಸುವ ದಂಪತಿಗಳಿಗೆ ಮಗುವಿಗೆ ಅಗತ್ಯಗಳನ್ನು ಪೂರೈಸಬೇಕಾದ ಆದಾಯ ಇರತಕ್ಕದ್ದು, ಮಗುವಿನ ಆರೈಕೆ ಮಾಡಲು ತೊಂದರೆ ನೀಡಬಲ್ಲಂತಹ ಸುದೀರ್ಘ ಕಾಲದ ಕಾಯಿಲೆಗಳು ದಂಪತಿಗಳಿಗೆ ಇರಬಾರದು. ತಂದೆ-ತಾಯಿಗೆ ಯಾವುದೇ ಅಪರಾಧದ ದಾಖಲೆಗಳಿರಬಾರದು.


ದತ್ತು ಪೋಷಕರು ನೋಂದಣಿ ಮಾಡಿದ ದಿನದಿಂದ ಅನ್ವಯಿಸುವಂತೆ ಅವರ ವಯಸ್ಸಿಗನುಗುಣವಾಗಿ ವಿವಿಧ ವಯೋಮಾನದ ಮಕ್ಕಳನ್ನು ದತ್ತು ಪಡೆಯಲು ಅರ್ಹರಾಗಿರುತ್ತಾರೆ.
ನಿರೀಕ್ಷಿತ ದತ್ತು ಪೋಷಕ ಗರಿಷ್ಟ ಸಂಯೋಜಿತ(ಗAಡ-ಹೆAಡತಿ ಸೇರಿ) ವಯಸ್ಸು 85 ವರ್ಷದ ಪೋಷಕರು ಮತ್ತು 40 ವರ್ಷ ವಯಸ್ಸಿನ ಏಕ ಪೋಷಕರು 0 ಯಿಂದ 2 ವರ್ಷ ವಯಸ್ಸಿನ ಮಕ್ಕಳನ್ನು ದತ್ತು ಪಡೆಯಬಹುದು. 90 ವರ್ಷ ವಯಸ್ಸಿನ ಪೋಷಕರು ಮತ್ತು 45 ವರ್ಷ ವಯಸ್ಸಿನ ಏಕ ಪೋಷಕರು 2 ವರ್ಷ ಮೇಲ್ಪಟ್ಟು ಮತ್ತು 4 ವರ್ಷಗಳವರೆಗಿನ ಮಕ್ಕಳನ್ನು ದತ್ತು ಪಡೆಯಬಹುದು. 100 ವರ್ಷ ವಯಸ್ಸಿನ ಪೋಷಕರು ಮತ್ತು 50 ವರ್ಷ ವಯಸ್ಸಿನ ಏಕ ಪೋಷಕರು 4 ವರ್ಷ ಮೇಲ್ಪಟ್ಟು ಮತ್ತು 8 ವರ್ಷ ವಯಸ್ಸಿನ ಮಕ್ಕಳನ್ನು ದತ್ತು ಪಡೆಯಬಹುದು.

110 ವರ್ಷ ವಯಸ್ಸಿನ ಪೋಷಕರು ಮತ್ತು 55 ವರ್ಷ ವಯಸ್ಸಿನ ಏಕ ಪೋಷಕರು 8 ವರ್ಷ ಮೇಲ್ಪಟ್ಟು ಮತ್ತು 18 ವರ್ಷ ವಯಸ್ಸಿನ ಮಕ್ಕಳನ್ನು ದತ್ತು ಪಡೆಯಬಹುದಾಗಿದೆ.
ಮಗುವನ್ನು ಎಲ್ಲಿ ದತ್ತು ತೆಗೆದುಕೊಳ್ಳಬಹುದು?
ಅರ್ಹತೆಗಳನ್ನು ಪಡೆದ ದಂಪತಿಗಳು ಸರ್ಕಾರವು ಸೂಚಿಸಿದ ದತ್ತು ಸ್ವೀಕಾರ ಕೇಂದ್ರದಲ್ಲಿ ಮಗುವನ್ನು ದತ್ತು ತೆಗೆದುಕೊಳ್ಳಬಹುದಾಗುದೆ.

ಆಸಕ್ತ ದಂಪತಿಗಳು ಅಥವಾ ಏಕ ಪೋಷಕರು ದತ್ತು ಸ್ವೀಕಾರವನ್ನು www.cara.wcd.gov.in ವೆಬ್‌ಸೈಟ್ ಮೂಲಕ ನೋಂದಾವಣಿ ಮಾಡಿಕೊಳ್ಳಬಹುದು. ಹಾಗೂ
ಈ ಕುರಿತು ಇದೇ ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಪಡೆಯಬಹುದಾಗಿದೆ.


ಕಾನೂನುಬಾಹಿರ ದತ್ತು ಎಂದರೇನು…


ನರ್ಸಿಂಗ್ ಹೋಂಗಳಿAದ ಸಿಕ್ಕಿರುವ ಮಗು ಹಾಗೂ ರಸ್ತೆಯಲ್ಲಿ ಯಾರೋ ಬಿಟ್ಟು ಹೋದ ಮಕ್ಕಳನ್ನು ಸಾಕಿಕೊಳ್ಳುವುದು. ಪಾಲಕರಿಗೆ ಬೇಡವಾದ ಮಗುವನ್ನು ಸಾಕಿಕೊಳ್ಳುವುದು, ಮಗುವನ್ನು ಕಳ್ಳತನ ಮಾಡಿ ಸಾಕಿಕೊಳ್ಳುವುವು, ಯಾವುದೇ ಕಾನೂನು ಕ್ರಮವಿಲ್ಲದೇ ದತ್ತು ತೆಗೆದುಕೊಳ್ಳುವುದು ಕಾನೂನು ಬಾಹಿರ.
ಈ ರೀತಿ ಕಾನೂನು ಬಾಹಿರವಾಗಿ ದತ್ತು ಪಡೆದ ಅಥವಾ ಅನಾಥ ಮಗುವನ್ನು ಪೋಷಿಸಿದಾಗ ಭವಿಷ್ಯದಲ್ಲಿ ಮಗುವಿಗೆ ನೈಜಸ್ಥಿತಿ ಅರಿವಾಗಿ ಮಗು ಕಾನೂನಿನ ಮೊರೆ ಹೋಗುವ ಸಾಧ್ಯತೆ ಇದೆ. ಪೋಷಕರು ತೀವ್ರ ಸಂಕಷ್ಟಕ್ಕೆ ಒಳಗಾಗಿ ಮಾನಸಿಕ ಹಿಂಸೆಗೆ ಒಳಗಾಗಬಹುದು. ಅಲ್ಲದೇ ಸೂಕ್ತ ದಾಖಲೆಗಳಿಲ್ಲದಿರುವುದರಿಂದ ಪೋಷಕರು ಹಾಗೂ ಮಗು ಸಮಸ್ಯೆಯ ಸುಳಿಗೆ ಸಿಲುಕಬಹುದು.

ಮಗು ಬೆಳೆಯುತ್ತಿರುವಾಗ ಅಂಗವಿಕಲತೆ, ಮಂದಮತಿ ಅಥವಾ ಭಯಂಕರ ರೋಗಗು ಬಂದಾಗ, ಪೋಷಕರು ಸೂಕ್ತ ದಾಖಲೆ ಪಡೆಯದೇ ಸಾಕಲು ಪಡೆದುಕೊಂಡ ಮಗುವನ್ನು ಬೀದಿಗೆಸೆಯುವ ಸಾಧ್ಯತೆ ಇದೆ. ಹಾಗೂ ಮಗುವನ್ನು ಸಾಕಲು ಪಡೆದುಕೊಂಡ ಕೆಲ ಕಾಲದ ನಂತರ ಸ್ವಂತ ಮಗು ಹುಟ್ಟಿದಾಗ ಸಾಕಲು ಪಡೆದುಕೊಂಡ ಮಗುವನ್ನು ನಿರ್ಲಕ್ಷಿಸಬಹುದು.


ದತ್ತು ತೆಗೆದುಕೊಳ್ಳಲು ಬೇಕಾಗುವ ಮುಖ್ಯ ದಾಖಲಾತಿಗಳು…


ವಯಸ್ಸಿನ ದೃಢೀಕರಣ ಪತ್ರ,ವಿವಾಹ ದೃಢೀಕರಣ ಪತ್ರ, ಆದಾಯ ದೃಢೀಕರಣ ಪತ್ರ, ವೇತನ ಪ್ರಮಾಣ ಪತ್ರ, ಬ್ಯಾಂಕಿನ ಸ್ಟೇಟ್ ಮೆಂಟ್, ಯಾವುದೇ ಅನುವಂಶಿಕ ಕಾಯಿಲೆಗಳು ಇರದೆ ಇರುವ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ, ಉದ್ಯೋಗ ದೃಢೀಕರಣ ಪತ್ರ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ತಮ್ಮ ಸ್ವಂತ ಮಗುವಂತೆ ದತ್ತು ಪಡೆದು ಮಗುವನ್ನು ಪೋಷಿಸುತ್ತೇವೆ ಎಂಬ ಮುಚ್ಚಳಿಕೆ ಪತ್ರವನ್ನು ರೂ.100/- ಗಳ ಬಾಂಡ್ ಪೇಪರ್ ನಲ್ಲಿ ಬರೆದುಕೊಡಬೇಕು. ಹಾಗೂ ದತ್ತು ತೆಗೆದುಕೊಳ್ಳಲು ಇಚ್ಛಿಸುವ ದಂಪತಿಗಳ ನೆರೆ-ಹೊರೆಯವರಿಂದ ಪರಿಚಯದ ದೃಢೀಕರಣ ಪತ್ರ (ಇಬ್ಬರು ಜಾಮೀನುದಾರರ ದೃಢೀಕರಣ ಪತ್ರ) ದಾಖಲೆಗಳನ್ನು ನೀಡಬೇಕಾಗುತ್ತದೆ.


ದತ್ತು ಕೇಂದ್ರದಲ್ಲಿ ನೀಡಲಾಗುವ ಸೇವೆಗಳು…


ಬೇಡವಾದ ಮಕ್ಕಳಿಗೆ ಮಕ್ಕಳ ಕಲ್ಯಾಣ ಸಮಿತಿಯ ಮಾರ್ಗದರ್ಶನ ಮೇರೆಗೆ ದತ್ತು ಕೇಂದ್ರಕ್ಕೆ ಸ್ವೀಕರಿಸುವುದು. ಪ್ರೀತಿ, ಮಮತೆ ಹಾಗೂ ಆರೋಗ್ಯ ಭರಿತವಾಗಿ ಮಗು ಬೆಳೆಯಲು ವಾತಾವರಣ ಕಲ್ಪಿಸುವುದು. ಅನುಭವಿ ಮಕ್ಕಳ ತಜ್ಞರಿಂದ ಸಲಹೆ ಮತ್ತು ಚಿಕಿತ್ಸೆ ನೀಡುವುದು, ಮಗುವಿಗೆ ಪೌಷ್ಠಿಕ ಹಾಗೂ ಉತ್ತಮ ಗುಣಮಟ್ಟದ ಆಹಾರ ವಿತರಣೆ, ಪೋಷಕರಿಗೆ ದತ್ತು ಸ್ವೀಕಾರಕ್ಕೆ ಸಂಬAಧಿಸಿದ ಸ್ಪಷ್ಟ ಮಾಹಿತಿ ಒದಗಿಸುವುದುಮ, ಮಗು ಬೇಡವಾದ ಪಾಲಕರಿಗೆ ಹಾಗೂ ಮಗುವನ್ನು ದತ್ತು ಪಡೆಯುವ ದಂಪತಿಗಳಿಗೆ ಅಗತ್ಯವಾದ ಕಾನೂನು ನೆರವನ್ನು ಒದಗಿಸುವುದು. ಮಗುವಿನ ದೈನಂದಿನ ಪ್ರಗತಿ ಗಮನಿಸಿ, ಬೇಕು-ಬೇಡಗಳನ್ನು ನೋಡಿಕೊಳ್ಳುವುದು, ಸುವ್ಯವಸ್ಥಿತ ಕೊಠಡಿಯಲ್ಲಿ ಆಟಿಕೆ ಮತ್ತು ಮನೋರಂಜನೆ ನೀಡುವುದು ಕುಟುಂಬದ ವಾತಾವರಣ ನೀಡಲಾಗುವುದು, ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅವಶ್ಯಕವಿರುವ ಪೂರಕ ಕಲ್ಪಿಸಲಾಗುವುದು.


ಪೋಷಕತ್ವ…


ಮಾರಣಾಂತಿಕ ಕಾಯಿಲೆ, ತೀವ್ರ ಅನಾರೋಗ್ಯ, ಸಾವು ಅಥವಾ ಇನ್ನಿತರ ಕಾರಣಗಳಿಂದ ಪೋಷಕರ ಆರೈಕೆಯಿಂದ ವಂಚಿತರಾದ ಮಕ್ಕಳನ್ನು ವಿಸ್ತೃತ ಕುಟುಂಬ ಸದಸ್ಯರು ಅಥವಾ ಅಸಂಬAಧಿತ ವ್ಯಕ್ತಿ/ಕುಟುಂಬದಲ್ಲಿ ತಾತ್ಕಾಲಿಕ ಆರೈಕೆ ನೀಡುವ ಹಾಗೂ ಕಾರಣಾಂತರಗಳಿAದ ದತ್ತು ಸ್ವೀಕಾರಕ್ಕೆ ಒಳಪಡಲು ಸಾಧ್ಯವಿಲ್ಲದ ಮಕ್ಕಳಿಗೆ ತಾತ್ಕಾಲಿಕ ಪೋಷಕರನ್ನು ನೀಡುವ ಪರ್ಯಾಯ ವ್ಯವಸ್ಥೆಯೇ ಪೋಷಕತ್ವ.
ಬಾಲ ನ್ಯಾಯ(ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015 ಸೆಕ್ಷನ್ 44 ಹಾಗೂ ನಿಯಮದಲ್ಲಿ ಪೋಷಕತ್ವವನ್ನು ಉಲ್ಲೇಖಿಸಲಾಗಿದೆ. ಮಕ್ಕಳನ್ನು ಪುನರ್ವಸತಿ ಮಾಡುವುದು ಹಾಗೂ ಮಕ್ಕಳನ್ನು ಸಾಂಸ್ಥಿಕ ಸೇವೆಗೆ ಒಳಪಡಿಸುವುದನ್ನು ತಪ್ಪಿಸುವುದು ಪೋಷಕತ್ವ ಕಾರ್ಯಕ್ರಮದ ಗುರಿ.


ಮಕ್ಕಳ ಕಲ್ಯಾಣ ಸಮಿತಿ ಮುಖಾಂತರ ಒಂದು ವರ್ಷಕ್ಕೆ ಮಾತ್ರ ಪೋಷಕತ್ವಕ್ಕೆ ಅನುಮತಿ ಕೊಡಬಹುದು. ಮಗುವಿಗೆ ಪೋಷಕರೊಮದಿಗೆ ಇರಲು ಇಚ್ಚೆ ಇದ್ದಲ್ಲಿ ಮತ್ತು 18 ವರ್ಷದವರೆಗೆ ಪ್ರತಿ ವರ್ಷ ನವೀಕರಣ ಮಾಡಿ ಕೊಡಲಾಗುತ್ತದೆ. ಎರಡು ವರ್ಷಗಳ ಕಾಲ ಮಗು ಪೋಷಕರೊಂದಿಗೆ ಹೊಂದಾಣಿಕೆ ಇತ್ತು, ಮಗುವಿಗೂ ಒಪ್ಪಿಗೆ ಇದೆ ಮತ್ತು ಪೋಷಕರಿಗೂ ಒಪ್ಪಿಗೆ ಇದ್ದಾಗ ಕಾನೂನುಬದ್ದ ದತ್ತು ಪಡೆಯಬಹುದು.


ದತ್ತು ಕೊಟ್ಟಂತಹ ಮಕ್ಕಳನ್ನು 2 ವರ್ಷದವರೆಗೆ ಅನುಪಾಲನೆ ಮಾಡಲಾಗುತ್ತದೆ. 6 ತಿಂಗಳಿಗೊಮ್ಮೆ ಮನೆ ಭೇಟಿ ಮಾಡಿ ಮಗು ಮತ್ತು ಪೋಷಕರ ನಡುವೆ ಹೊಂದಾಣಿಕೆ ಇದೆಯಾ ಅಂತ ನೋಡಲಾಗುತ್ತದೆ. ಫಾಸ್ಟರ್ ಕೇರ್‌ನಲ್ಲಿ ಪ್ರತಿ ತಿಂಗಳು ಮಕ್ಕಳ ಕಲ್ಯಾಣ ಸಮಿತಿಯವರು ಮನೆ ಭೇಟಿ ಮಾಡಿ ಮಗು ಮತ್ತು ಪೋಷಕರಿಗೆ ಹೊಂದಾಣಿಕೆ ಇದೆಯಾ ಅನ್ನೋದನ್ನು ಚೆಕ್ ಮಾಡುತ್ತಾರೆ.
ಶಿವಮೊಗ್ಗ ಜಿಲ್ಲೆಯ ದತ್ತು ಕೇಂದ್ರದಲ್ಲಿ ಇಲ್ಲಿವರೆಗೆ ಪೋಷಕರು 300 ಪೋಷಕರ ನೋಂದಣಿಯಾಗಿದ್ದಾರೆ. ಕಳೆದ ಸಾಲಿನಲ್ಲಿ 14 ಮಕ್ಕಳು ದಾಖಲಾಗಿದ್ದು 6 ಮಕ್ಕಳನ್ನು ಅರ್ಹ ಪೋಷಕರಿಗೆ ದತ್ತು ನೀಡಲಾಗಿದೆ. ಈ ವರ್ಷವೂ 14 ಮಕ್ಕಳು ದಾಖಲಾಗಿದ್ದು ಈವರೆಗೆ 04 ಮಕ್ಕಳನ್ನು ದತ್ತು ನೀಡಲಾಗಿದ್ದು, ಈವರೆಗೆ 12 ಮಕ್ಕಳನ್ನು ದತ್ತು ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಛೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, 100 ಅಡಿ ರಸ್ತೆ, ಆಲ್ಕೊಳ, ಶಿವಮೊಗ್ಗ, ದೂರವಾಣಿ ಸಂಖ್ಯೆ: 08182-295709 ಮತ್ತು https://icps.karnataka.gov.in ವೈಬ್‌ಸೈಟ್‌ಗೆ ಭೇಟಿ ಕೊಡಿ ಮಾಹಿತಿ ಪಡೆಯಬಹುದಾಗಿದೆ.

  • ಭಾಗ್ಯ ಎಂ.ಟಿ, ವಾರ್ತಾ ಇಲಾಖೆ