ಕನ್ನಡಪರ ಸಂಘಟನೆ ರಸ್ತೆ ಬಂದು ಮಾಡಿ ಪ್ರತಿಭಟನೆ ನಡೆಸಿದರು.ನಗರದ ಶೇಷಾದ್ರಿಪುರಂ ರೈಲ್ವೆ ಮೇಲು ಸೇತುವೆ ಮತ್ತು ರಾಗಿಗುಡ್ಡಕ್ಕೆ ಹೋಗುವ ರಸ್ತೆ ಸರಿಪಡಿಸದೆ ಅನೇಕ ದಿನಗಳು ಕಳೆದಿದ್ದು ಇದರ ವಿರುದ್ಧ ಕನ್ನಡ ಹೋರಾಟಗಾರರ ಸಂಘಟನೆ ರಸ್ತೆ ತಡೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರು ರಸ್ತೆಯನ್ನ ಕಾಲಕಾಲಕ್ಕೆ ಸರಿಯಾಗಿ ನಿರ್ವಾಹಣೆಯನ್ನು ಮಾಡದೇ ರಸ್ತೆಯ ಸ್ಥಿತಿಯು ಹದಗೆಟ್ಟಿದ್ದು ಸಂಗೋಳ್ಳಿ ರಾಯಣ್ಣ ವೃತ್ತದಿಂದ ಮೇಲು ಸೇತುವೆಯು ಒಳಗೊಂಡಂತೆ ರಾಗಿಗುಡ್ಡಕ್ಕೆ ಹಾದು ಹೋಗುವ ರಸ್ತೆಯು ಹಳ್ಳ ಗುಂಡಿಗಳಿಂದ ಕೂಡಿದೆ ಎಂದರು.
ಇದರಿಂದ ಬಸ್ ಲಾರಿಗಳು ಚಲಿಸುವುದರಿಂದ ವಾಹನ ಸವಾರರು ಮತ್ತು ಅಲ್ಲಿನ ಸ್ಥಳೀಯ ನಿವಾಸಿಗಳಿಗೆ ಧೂಳಿ ಕುಡಿಯುವ ಹಾಗೆ ಆಗಿದೆ. ತೀವ್ರವಾದ ದೂಳಿನಿಂದಾಗಿ ದುಷ್ಪಪರಿಣಾಮಗಳು ಪರಿಣಾಮ ಬೀರಿದೆ. ಇಷ್ಟೆಲ್ಲಾ ಅನಾನುಕೂಲವಿದ್ದರೂ ಪಿಡಬ್ಲೂಡಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದಾಗಿ ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಇಲಾಖೆಯು ಇದಕ್ಕೆ ಗುಂಡಿ ಮುಚ್ಚುವ ಡಾಂಬರಿಕರಣ ಹಾಗೂ ತೇಪೆ ಹಾಕುವ ಕೆಲಸ ನಡೆಯುತ್ತಿದೆ. ಆದರೆ ಇಲಾಖೆ ಶಾಶ್ವತ ಪರಿಹಾರ ಒದಗಿಸಬೇಕು. ಸೇತುವೆ ತುದಿಯಿಂದ ಅರ್ಧ ಕಿಲೋಮಿಟರ್‌ಕ್ಕಿಂತ ಕಡಿಮೆ ದೂರದವರೆಗೆ ಕಾಂಕ್ರಿಟ್ ರಸ್ತೆಯನ್ನು ನಿರ್ಮಿಸಬೇಕು ಶಾಸಕರ ನಿಧಿಯನ್ನು ಬಳಸಿಕೊಂಡು ಶಾಶ್ವತ ಪರಿಹಾರ ಮಾಡಿಕೊಡಬೇಕೆಂದು ಆಗ್ರಹಿಸಿದರು. ಇದು ಸಾಕೇತಿಕ ಹೋರಾಟವಾಗಿದ್ದು ತಪ್ಪಿದಲ್ಲಿ ಹೋರಾಟವನ್ನ ತೀವ್ಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಕನ್ನಡ ಪರ ಸಂಘಟನೆ ಮುಖಂಡರಾದ ರವಿಪ್ರಸಾದ್ ಎಂ. (ಮಧುಸುದನ್ ಎಸ್.ಎಂ)ನಯಾಜ್ ಎಂ., ಇದ್ರೇಶ್, ಕಿಶೋರ್, ನೂರುಲ್ಲ, ರಘು, ಅನಿಲ್ ಕುಮಾರ್, ರಫೀಕ್ ಖಾನ್, ಲೋಕೇಶ್, ಶಿವಕುಮಾರ್, ಕೌಶಿಕ್, ಕಿರಣ್, ಹೆಚ್. ಭರತ್, ಸಂಪ್ರಿಕ್. ಅಭಿಷೇಕ, ರಾಹುಲ್, ಅಶೋಕ, ರವಿಕುಮಾರ್ ಶರತ್ ಉಪಸ್ತರಿದ್ದರು.