ಶಿವಮೊಗ್ಗ ನಗರದ ನವಲೆಯಲ್ಲಿರುವ ಈಶ್ವರ ವನ ಚಾರಿಟಬಲ್ ಟ್ರಸ್ಟ್ ಬೆಳೆಸಿರುವ ಮರಗಳನ್ನ ಮೆಸ್ಕಾಂ ನವರು  ಕಡಿತಲೆ ಮಾಡಿರುವ ಬಗ್ಗೆ ಟ್ರಸ್ಟ್ ನ ಮಾಲೀಕ ನವ್ಯ ಶ್ರೀ  ನಾಗೇಶ್ ಆಕ್ಷೇಪಿಸಿದ್ದಾರೆ. 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎರಡು ಎಕರೆಯ ಈಶ್ವರ ವನದಲ್ಲಿ 1000 ಮರಗಳಿವೆ. 150ಕ್ಕೂ ಹೆಚ್ಚು ವಿವಿಧ ಗಿಡಗಳನ್ನ  ಬೆಳೆಸಲಾಗಿದೆ. ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ಜಾಗೃತಿ ನೀಡಲಾಗಿದೆ. ನ.11 ರಂದು ಮೆಸ್ಕಾಂ ಯಾವುದೇ ನೋಟೀಸ್ ನೀಡದೆ ವನದ  30 ಕ್ಕೂ ಹೆಚ್ಚು ಗಿಡಗಳನ್ನ ಕಡಿತಲೆ ಮಾಡಿದ್ದಾರೆ‌ ಎಂದು ದೂರಿದರು. 

ಯಾವುದೇ ಲಾಭ ನಷ್ಟದ ಉದ್ದೇಶವಿಲ್ಲದೆ ಈಶ್ವರ ವನ ಬೆಳೆಸಿದ್ದೇವೆ. ಖಂಡನೀಯ ಕೃತ್ಯವಾಗಿದೆ. ಮೆಸ್ಕಾಂ ನವರಿಗೆ ಗಮನಕ್ಕೆ ತರಲಾಗಿದೆ. ವನಗಳಿಗೆ ಅತಿಕ್ರಮಣ ಪ್ರವೇಶ ಮಾಡಿ ಕಟಾವ್ ಮಾಡಿದ್ದಾರೆ. ಪೊಲೀಸರಿಗೂ ದೂರು ನೀಡಿದ್ದಾರೆ. ಮೆಸ್ಕಾಂ ಸಿಬ್ಬಂದಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದರು. 

ಕಟಾವ್ ಆದ ಐದಾರು ವರ್ಷದ ಗಿಡಗಳಾಗಿದ್ದು ಇದಕ್ಕೆ ಕೊಡಲಿ ಪೆಟ್ಟು ನೀಡಲಾಗಿದೆ. ನಮ್ಮ ಅರಣ್ಯ ಹೊರಗಡೆ ಈ ಗಿಡಗಳನ್ನ ನೆಡಲಾಗಿದೆ ಆದರೂ ಮರಗಳನ್ನ ಟ್ರಿಮ್ ಮಾಡುವ ಬದಲು ಬುಡದ ವರೆಗೆ ಕಟ್ ಮಾಡಿರುವುದು ದುರಂತ ಎಂದರು. ಈ ಸಂದರ್ಭದಲ್ಲಿ ಜನಾರ್ದನ್ ಪೈ ಮುಂತಾದವರು ಉಪಸ್ಥರಿದ್ದರು.

Leave a Reply

Your email address will not be published. Required fields are marked *