ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಹೊನ್ನವಿಲೆ, ಕೃಷಿ ವಿಜ್ಞಾನ ಕೇಂದ್ರ, ಮತ್ತು ಕೃಷಿ ತಂತ್ರಜ್ಞರ ಸಂಸ್ಥೆ, ಶಿವಮೊಗ್ಗ ಇವರ ಸಹಯೋಗದೊಂದಿಗೆ “ಎಂ.ಓ-೪ (ಭದ್ರಾ) ಭತ್ತದ ತಳಿಯಲ್ಲಿ ಕ್ಷೇತ್ರೋತ್ಸವ” ಕಾರ್ಯಕ್ರಮವನ್ನು ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಹೊನ್ನವಿಲೆ,ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಲಪತಿಗಳಾದ ಡಾ. ಆರ್.ಸಿ. ಜಗದೀಶ. ಕೆ.ಶಿ.ನಾ.ಕೃ.ತೋ.ವಿ.ವಿ. ಇರುವಕ್ಕಿ, ಶಿವಮೊಗ್ಗ ಇವರು ರೈತರನ್ನು ಉದ್ದೇಶಿಸಿ ಮಾತನಾಡುತ್ತಾ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಹೊನ್ನವಿಲೆ, ಕೇಂದ್ರದಲ್ಲಿ ಕೈಗೊಂಡಿರುವ ಭತ್ತದ ಬೀಜೋತ್ಪಾದನೆ ತಳಿಗಳಾದ ಎಂ.ಓ-೪ (ಭದ್ರಾ), ಸಹ್ಯಾದ್ರಿ ಕೆಂಪುಮುಕ್ತಿ, ಆರ್.ಎನ್.ಆರ್, ಜ್ಯೋತಿ ತಳಿ ಪ್ರಾಯೋಗಗಳು ಮತ್ತು ಕೀಟನಾಶಕ ಪ್ರಾಯೋಗ, ಡ್ರೋನ್ ಬಳಸಿ ಗೊಬ್ಬರದ ಸಿಂಪರಣೆ, ಸಮಗ್ರ ಕೃಷಿ ಪದ್ದತಿಗಳ ಮಾಹಿತಿಯನ್ನು ನೀಡಿದರು ಹಾಗೂ ಎಂ.ಓ-೪ ತಳಿ (ಭದ್ರಾ) ಮತ್ತು ಸಹ್ಯಾದ್ರಿ ಕೆಂಪುಮುಕ್ತಿ ತಳಿಗಳು ಕರಾವಳಿ ಭಾಗದ ರೈತರು ಹೆಚ್ಚಾಗಿ ಬೆಳೆಯುತ್ತಿದ್ದು, ಈ ತಳಿಗಳು ಆಧಿಕ ಪೋಷಕಾಂಶಗಳನ್ನು ಹೊಂದಿದ್ದು, ಮಧುಮೇಹ ರೋಗಿಗಳಿಗೆ ಉತ್ತಮ ಆಹಾರವಾಗಿದೆ.
ಆದರೆ ಸಾಮಾನ್ಯವಾಗಿ ಜನರು ಕಡಿಮೆ ಪೋಷಕಾಂಶವನ್ನು ಹೊಂದಿರುವ ಬಿಳಿ ತಳಿಯ ಅಕ್ಕಿಯನ್ನು ಹೆಚ್ಚಾಗಿ ಆಹಾರವಾಗಿ ಬಳಸುತ್ತಿದ್ದಾರೆ ಇದರ ಬದಲಾಗಿ ಕೆಂಪುತಳಿಯ ಭತ್ತವನ್ನು ರೈತರು ಹೆಚ್ಚಾಗಿ ಬೆಳೆದು, ಸದುಪಯೋಗ ಪಡೆಯಲು ಸಲಹೆ ನೀಡಿದರು ಮತ್ತು ಅಡಿಕೆ ಬೆಳೆಯಲ್ಲಿ ಅಂತರಬೆಳೆಯಾಗಿ ಶುಂಠಿ, ಅರಿಸಿಣ, ಬಾಳೆ ಮತ್ತು ಮೆಣಸು ಬೆಳೆಗಳನ್ನು ಸಹ ಬೆಳೆದು ರೈತರು ಆರ್ಥಿಕವಾಗಿ ಸದೃಢರಾಗಬೇಕೆಂದು ಉತ್ತೇಜಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ.ಬಿ.ಎಂ.ದುಶ್ಯAತ ಕುಮಾರ್, ಸಂಶೋಧನಾ ನಿರ್ದೇಶಕರು, ಕೆ.ಶಿ.ನಾ.ಕೃ.ತೋ.ವಿ.ವಿ. ಇರುವಕ್ಕಿ, ಶಿವಮೊಗ್ಗ ಇವರು ರೈತರನ್ನು ಉದ್ದೇಶಿಸಿ ಎಂ.ಓ-೪(ಭದ್ರಾ) ಭತ್ತದ ತಳಿಯು ಕೇರಳದ ತಳಿಯಾಗಿದ್ದು, ಇದನ್ನು ಕರಾವಳಿ ಭಾಗದ ಜನರು ಹೆಚ್ಚಾಗಿ ಬೆಳೆಯುತ್ತಾರೆ. ಪ್ರತಿ ಹೇಕ್ಟೆರಿಗೆ ಸುಮಾರು ೬೦ ರಿಂದ ೬೫ ಕ್ವಿಂಟಾಲ್ ಇಳುವರಿ ಬರುತ್ತದೆ. ಇದರಲ್ಲಿ ಶೇ ೧೧ ರಿಂದ ೧೧.೫ ಪ್ರೋಟಿನ್, ಜಿಂಕ್, ಕಬ್ಬಿಣ ಮತ್ತು ಸತು ಹಾಗೂ ಇತರೆ ಪೋಷಕಾಂಶಗಳನ್ನು ಒಳಗೊಂಡಿರುವುದರಿAದ ಕೆಂಪುಅಕ್ಕಿಯನ್ನು ಶೇ ೭೦ ರಿಂದ ೮೦ ಜನರು ಬಳಸುತ್ತಾರೆ.
ಸಂಶೋಧನಾ ನಿರ್ದೇಶಕರು, ಕೆ.ಶಿ.ನಾ.ಕೃ.ತೋ.ವಿ.ವಿ. ಇರುವಕ್ಕಿ, ಶಿವಮೊಗ್ಗ ಇವರ ತಂಡ “ಸಹ್ಯಾದ್ರಿ ಸಿರಿ (ಅವಧಿ ೧೩೦ ರಿಂದ ೧೩೫ ದಿನ, ೬೦ ಕ್ವಿಂಟಾಲ್ ಇಳುವರಿ ಪ್ರತಿ ಹೇಕ್ಟರಿಗೆ) ಮತ್ತು ಸಹ್ಯಾದ್ರಿ ಜಲಮುಕ್ತಿ” (ಅವಧಿ ೧೪೦ ರಿಂದ ೧೪೫ ದಿನ, ೫೦ ಕ್ವಿಂಟಾಲ್ ಇಳುವರಿ ಪ್ರತಿ ಹೇಕ್ಟೆರಿಗೆ) ತಳಿಯನ್ನು ಅಭಿವೃದ್ದಿಪಡಿಸಿದೆ ಎಂಬ ಮಾಹಿತಿಯನ್ನು ನೀಡಿದರು.
ಡಾ.ಸುರೇಶ್ ನಾಯ್ಕ.ಕೆ.ಪಿ., ಕ್ಷೇತ್ರ ಅಧೀಕ್ಷಕರು, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಕೈಗೊಡಿರುವ ಭತ್ತದ ಬೀಜೋತ್ಪಾದನೆ, ಭತ್ತದ ಕ್ಷೇತ್ರೋತ್ಸವದ ಮಹತ್ವ, ಸುಧಾರಿತ ಬೇಸಾಯ ಕ್ರಮಗಳ ಮತ್ತು ಕ್ಷೇತ್ರದಲ್ಲಿ ಕೈಗೊಂಡಿರುವ ವಿವಿಧ ಬೆಳೆಗಳು ಬೀಜೋತ್ಪಾದನಾ ಬೆಳೆಗಳು ಬಗ್ಗೆ ಸಂಕ್ಷೀಪ್ತವಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಗತಿಪರ ರೈತರಾದ ಶ್ರೀ.ಜಗದೀಶ ನಾಯ್ಕ ಹೊನ್ನವಿಲೆ ಇವರು ತಮ್ಮ ಅನಿಸಿಕೆಯಲ್ಲಿ ಕೃ.ತೋ.ಸಂ.ಕೇAದ್ರ, ಹೊನ್ನವಿಲೆ, ಕೇಂದ್ರದಲ್ಲಿ ಕೈಗೊಂಡಿರುವ ಎಂ.ಓ-೪(ಭದ್ರಾ) ಭತ್ತದ ತಳಿಯ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು ಹಾಗೂ ನವಿಲೆಯಲ್ಲಿ ನಡೆದ ಕೃಷಿ ಮೇಳದಲ್ಲಿ ವಿವಿಧ ಬೆಳೆಗಳ ಹಾಗೂ ವಿವಿಧ ತಳಿಗಳ ಮಾಹಿತಿಯನ್ನು ತಿಳಿಸಿದರು. ಸಾವಯವ ಕೃಷಿಗೆ ರೈತರು ಒತ್ತು ನೀಡಬೇಕೆಂದು ಹಾಗೂ ಕೆ.ಶಿ.ನಾ.ಕೃ.ತೋ.ವಿ.ವಿ. ಮತ್ತು ಸಂಶೋಧನಾ ಕೇಂದ್ರಗಳ ವಿಜ್ಞಾನಿಗಳ ಜೊತೆ ಸಂಪರ್ಕವನ್ನು ಬೆಳೆಸಿ ಗದ್ದೆ, ತೋಟ ಹಾಗೂ ಹೊಲಗಳಲ್ಲಿ ಕಂಡುಬರುವ ಕೀಟಬಾಧೆ ಮತ್ತು ರೋಗಗಳಿಗೆ ಪರಿಹಾರ ಕಂಡುಕೊAಡು, ಆಧಿಕ ಇಳುವರಿ ಪಡೆಯಲು ತಿಳಿಸಿದರು.
ಶ್ರೀಮತಿ.ರಾಣಿ ಕುಮಾರ್., ಉಪಾಧ್ಯಕ್ಷರು, ಗ್ರಾಮ ಪಂಚಾಯಿತಿ, ಹಸೂಡಿ ಫಾರಂ, ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಡಾ.ಬಿ.ಎಂ.ದುಶ್ಯAತ ಕುಮಾರ್, ಸಂಶೋಧನಾ ನಿರ್ದೇಶಕರು, ಕೆ.ಶಿ.ನಾ.ಕೃ.ತೋ.ವಿ.ವಿ. ಇರುವಕ್ಕಿ, ಶಿವಮೊU,À್ಗ ಡಾ.ಪ್ರದೀಪ್.ಎಸ್.,ಸಹ ಸಂಶೋಧನಾ ನಿರ್ದೇಶಕರು, ವ.ಕೃ.ತೋ.ಸಂ. ಕೇಂದ್ರ., ನವಿಲೆ, ಶಿವಮೊಗ್ಗ, ಡಾ.ಸುರೇಶ್ ನಾಯ್ಕ.ಕೆ.ಪಿ. ಕ್ಷೇತ್ರ ಅಧೀಕ್ಷಕರು, ಶ್ರೀ.ದೊರೆಯಪ್ಪ, ಆಧ್ಯಕ್ಷರು, ಗ್ರಾಮ ಪಂಚಾಯಿತಿ, ಬಿದರೆ., ಶ್ರೀ.ಜಗದೀಶ ನಾಯ್ಕ ಪ್ರಗತಿಪರ ರೈತರು, ಹೊನ್ನವಿಲೆ, ಶ್ರೀ.ವೇದಮೂರ್ತಿ, ಕಾರ್ಯದರ್ಶಿ, ಕೃಷಿ ತಂತ್ರಜ್ಞರ ಸಂಸ್ಥೆ, ಶಿವಮೊಗ್ಗ., ಉಪಸ್ಥಿತರಿದ್ದರು.
ಈ ಕ್ಷೇತ್ರೋತ್ಸವದಲ್ಲಿ ೧೬೦ ಕ್ಕೂ ಹೆಚ್ಚು ರೈತರು ಹಾಗೂ ರೈತ ಮಹಿಳೆಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭತ್ತದ ತಳಿಗಳಾದ ಕೆ.ಹೆಚ್.ಪಿ-೨,೫,೯,೧೦ & ೧೧, ಜ್ಯೋತಿ, ಸಹ್ಯಾದ್ರಿ ಭರತ್, ಸಹ್ಯಾದ್ರಿ ಕೆಂಪುಮುಕ್ತಿ, ಸಹ್ಯಾದ್ರಿ ಜಲಮುಕ್ತಿ, ಸಹ್ಯಾದ್ರಿ ಮೇಘ, ಕೆ.ಕೆ.ಪಿ-೫ ತುಂಗಾ ತಳಿಗಳ ಪ್ರಾತ್ಯಕ್ಷಿಕೆಯನ್ನು ರೈತರ ಅನುಕೂಲಕ್ಕಾಗಿ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದ ತಾಂತ್ರಿಕ ಸಮಾವೇಶದಲಿ ಡಾ.ಸುರೇಶ್ ನಾಯ್ಕ.ಕೆ.ಪಿ.-ಭತ್ತದ ಕ್ಷೇತ್ರೋತ್ಸವದ ಮಹತ್ವ ಬಗ್ಗೆ, ಡಾ.ಶಿಲ್ಪಾ.ಹೆಚ್.ಡಿ. -ಭತ್ತದಲ್ಲಿ ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ, ಡಾ.ವಿದ್ಯಾಶ್ರೀ.ಎ.ಎಸ್.-ಭತ್ತದಲ್ಲಿ ಬೆಳೆಯಲ್ಲಿ ಕೀಟ ಮತ್ತು ರೋಗಬಾಧೆಯ ನಿರ್ವಹಣೆ ಕ್ರಮಗಳ ಬಗ್ಗೆ, ಡಾ.ದಿನೇಶ್.ಹೆಚ್.ಬಿ.-ಭತ್ತದಲ್ಲಿ ಬೀಜೋತ್ಪಾದನೆ ಮತ್ತು ಅದರ ಅನುಕೂಲಗಳ ಬಗ್ಗೆ, ಡಾ.ಹೊನ್ನಪ್ಪ.ಹೆಚ್.ಎಂ.-ಭತ್ತದ ಬೆಳೆಯಲ್ಲಿ ಸುಧಾರಿತ ಕಳೆ & ನೀರಿನ ನಿರ್ವಹಣಾ ಕ್ರಮಗಳ ಬಗ್ಗೆ ರೈತರಿಗೆ ಮಾಹಿತಿಯನ್ನು ನೀಡಿದರು.