“ಅಯೋಧ್ಯಾ ದೀಪ”
“ಶ್ರೀರಾಮನ ಕಥಾನಕ” ಶಿವಮೊಗ್ಗ ನಗರದಲ್ಲಿ ತಪ್ಪದೆ ಭಾಗವಹಿಸಿ..!!
ಅನವರತ ಸಂಸ್ಥೆಯು ಕಳೆದ ಎರಡು ವರ್ಷಗಳಿಂದ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಈ ಭಾರಿ ಸಿಹಿಮೊಗೆ ಸಂಭ್ರಮ-01 ಎಂಬ ವಿಶೇಷ ಶೀರ್ಷಿಕೆ ಅಡಿಯಲ್ಲಿ 27 ಬುಧವಾರ ಸಂಜೆ 6 ಗಂಟೆಗೆ ಶಿವಮೊಗ್ಗ ನಗರದ ಸೈನ್ಸ್ ಮೈದಾನದಲ್ಲಿ ಎರಡು ಆಯಾಮಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ವಿಶ್ವಾದ್ಯಂತ ನಮ್ಮ ನೆಲದ ಸಂಸ್ಕೃತಿಯನ್ನು ಪ್ರಸ್ತುತಪಡಿಸುತ್ತಾ, ತಮ್ಮ ಅಸಾಧಾರಣ ಪ್ರತಿಭೆ ಮತ್ತು ಯಕ್ಷಗಾನಕ್ಕೆ ನೀಡಿದ ಆಳವಾದ ಕೊಡುಗೆಗಳಿಗೆ ಜಾಗತಿಕವಾಗಿ ಖ್ಯಾತರಾಗಿ, ನಮ್ಮ ನಾಡು-ನುಡಿಯನ್ನು ಅಮೇರಿಕಾ, ಲಂಡನ್, ಸಿಂಗಾಪುರ,ದುಬೈ ಹೀಗೆ ಪ್ರಪಂಚದಾದ್ಯಂತದ 10 ಹಲವು ದೇಶಗಳಲ್ಲಿ ಪ್ರಸ್ತುತ ಪಡಿಸಿ, ರಾಷ್ಟ್ರ ಪ್ರಶಸ್ತಿ ಹಾಗೂ ಮೈಸೂರು ಕಲಾ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿ, ದಶಕಗಳಿಂದ ನಿರ್ಮಿಸಲಾದ ಖ್ಯಾತಿ ನಾಕ್ಷತ್ರಿಕ, ಗಾನ ಗಂಧರ್ವ, ಗಾನ ಕೋಗಿಲೆ, ಪಟ್ಲ ಸಿರಿ ಹೀಗೆ ಹತ್ತು ಹಲವು ಬಿರುದು ಪಡೆದು, ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಅಡಿಯಲ್ಲಿ ನೂರಾರು ಕಲಾವಿದರನ್ನು ಹಾಗು ಅವರ ಕುಟುಂಬಗಳನ್ನು ಪೋಷಿಸುತ್ತಾ, ತಮ್ಮ ಜೀವನವನ್ನೇ ಯಕ್ಷಗಾನಕ್ಕೆ ಮೀಸಲಿಟ್ಟಿರುವ ಯಕ್ಷದ್ರುವ, ಪಟ್ಲ ಸತೀಶ್ ಶೆಟ್ಟಿ ಅವರ ಸಾರಥ್ಯದಲ್ಲಿ ಶ್ರೀರಾಮನ ಕಥಾನಕ ಆಧಾರಿತ “ಅಯೋಧ್ಯಾ ದೀಪ” ಪ್ರಸಂಗವನ್ನು ಪ್ರಸ್ತುತ ಪಡಿಸಲಿದ್ದಾರೆ.
ಅಯೋಧ್ಯೆಯ ಇತಿಹಾಸ, ಸಂಸ್ಕೃತಿಯನ್ನು ಯಕ್ಷಗಾನದ ಮೂಲಕ ಕಣ್ತುಂಬಿಕೊಳ್ಳಲು ಸಮಸ್ತ ಶಿವಮೊಗ್ಗದ ನಾಗರೀಕರು ಈ ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮಕ್ಕೆ ಆಗಮಿಸಿ, ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಬೇಕಾಗಿ ವಿನಂತಿಸಿದ್ದಾರೆ.
ಇದರ ಜೊತೆಗೆ 27.11.2024ರ ಬೆಳಿಗ್ಗೆ 10 ಗಂಟೆಗೆ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಜನಪದ ನೃತ್ಯ, ಜನಪದ ಗಾಯನ, ಚಿತ್ರಕಲೆ ಹಾಗೂ ಛಾಯಾಗ್ರಹಣ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮಕ್ಕೆ ಶಿವಮೊಗ್ಗ ನಗರ ಶಾಸಕರು ಹಾಗೂ ಅನವರತ ಸಂಸ್ಥೆಯ ಗೌರವಾಧ್ಯಕ್ಷರಾದ ಎಸ್ಎನ್ ಚನ್ನಬಸಪ್ಪ ಅವರು, ವಿಧಾನಪರಿಷತ್ ಸದಸ್ಯರಾದ ಡಿ.ಎಸ್ ಅರುಣ್ ಅವರು ಹಾಗೂ ಶಿವಮೊಗ್ಗ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಕಛೇರಿಯ ಜಂಟಿ ನಿರ್ದೇಶಕರಾದ ಡಾ.ವಿಷ್ಣುಮೂರ್ತಿ ಕೆ.ಎ ಇವರುಗಳು ಆಗಮಿಸಲಿದ್ದಾರೆ.
ಈ ಕಾರ್ಯಕ್ರಮದ ಸಮಾರೋಪ ಸಮಾರಂಭವು ಹಾಗು ಬಹುಮಾನ ವಿತರಣಾ ಕಾರ್ಯಕ್ರಮವು ಸಂಜೆ 4 ಗಂಟೆಗೆ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದ್ದು, ಕಾರ್ಯಕ್ರಮಕ್ಕೆ ವಿಧಾನಪರಿಷತ್ ಮಾಜಿ ಸದಸ್ಯರಾದ ಆರ್.ಕೆ ಸಿದ್ರಾಮಣ್ಣ ಹಾಗೂ ಶಿವಮೊಗ್ಗ ನಗರ ಶಾಸಕರು, ಅನವರತ ಸಂಸ್ಥೆಯ ಗೌರವಾಧ್ಯಕ್ಷರಾದ ಎಸ್ಎನ್ ಚನ್ನಬಸಪ್ಪ ಅವರು ಉಪಸ್ಥಿತರಿರುತ್ತಾರೆ.
ಈಗಾಗಲೇ ಸ್ಪರ್ಧೆಗಳಿಗೆ ಶಿವಮೊಗ್ಗ ಜಿಲ್ಲೆಯಿಂದ ಅನೇಕ ಕಾಲೇಜಿನ ತಂಡಗಳು ನೋಂದಾಯಿಸಿಕೊಂಡಿದ್ದು, ಜನಪದ ನೃತ್ಯ ಸ್ಪರ್ಧೆಗೆ 13 ತಂಡಗಳು, ಜನಪದ ಗಾಯನ ಸ್ಪರ್ಧೆಗೆ 14 ತಂಡಗಳು, ಚಿತ್ರಕಲೆ ಸ್ಪರ್ಧೆಗೆ ವೈಯಕ್ತಿಕವಾಗಿ 45 ಮಂದಿ, ಛಾಯಾಗ್ರಹಣ ಸ್ಪರ್ಧೆಗೆ ವೈಯಕ್ತಿಕವಾಗಿ 21 ಮಂದಿ ಹೀಗೆ 250ಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರು ನೊಂದಾಯಿಸಿಕೊಂಡಿದ್ದಾರೆ.