ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಸಹ್ಯಾದ್ರಿ ಕನ್ನಡಸಿರಿ ಬಳಗ (ರಿ.)
ಜ್ವಾಲಾಮುಖಿ ಕನ್ನಡ ಸೇವಾ ಸಂಘ ಶಿವಮೊಗ್ಗ ಇವರ ವತಿಯಿಂದ ಗೋಪಿವೃತ್ತದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಸ್ಥಳೀಯ ಸಾಧಕರಿಗೊಂದು ಗೌರವ ಸಮರ್ಪಣೆ ಎಂಬ ಕಾರ್ಯಕ್ರಮದಲ್ಲಿ ನೃತ್ಯ ಸಾಧನೆ ಮತ್ತು ಸಮಾಜಮುಖಿ ಕೆಲಸವನ್ನು ಮೆಚ್ಚಿ ಸ್ಟೈಲ್ ಡಾನ್ಸ್ ಕ್ರಿವ್ ಸಂಸ್ಥೆಯ ಸಂಸ್ಥಾಪಕ ಶಶಿಕುಮಾರ್ ಎನ್ ಅವರಿಗೆ ೨೦೨೪ನೇ ಸಾಲಿನ “ಕನ್ನಡ ರಾಜ್ಯೋತ್ಸವ ಪ್ರಶಸ್ತಿ” ಮತ್ತು ” ಪುನೀತ ರತ್ನ ” ಎಂಬ ಬಿರುದನ್ನು ನೀಡಲಾಗಿದೆ.

ಈ ಕಾರ್ಯಕ್ರಮದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ,ಗೀತಾ ಶಿವರಾಜ್ ಕುಮಾರ್, ಕಾಂಗ್ರೇಸ್ ಮುಖಂಡರಾದ ಹೆಚ್ ಸಿ ಯೋಗೀಶ್, ಬಿಜೆಪಿ ಯುವ ಮುಖಂಡ ಕಿರಣ್ ಕುಮಾರ್, ಕನ್ನಡ ಪರ ಸಂಘಟನೆಗಳ ಮುಖಂಡರು ಸೇರಿದಂತೆ ಮತ್ತಿತರರಿದ್ದರು.