ಕ್ಷಯರೋಗದ ಕುರಿತು ಉದಾಸೀನ ಮಾಡಿದಲ್ಲಿ ಕೇವಲ ರೋಗಿಗೆ ಮಾತ್ರವಲ್ಲ, ಅವರ ಕುಟುಂಬ ಮತ್ತು ಸಮಾಜಕ್ಕೆ ಹಾನಿ. ಆದ್ದರಿಂದ ಶೀಘ್ರ ಪತ್ತೆ ಮತ್ತು ಚಿಕಿತ್ಸೆ ಪಡೆದುಕೊಳ್ಳುವುದು ಅತಿ ಮುಖ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಟರಾಜ್ ಹೇಳಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರ ಶಿವಮೊಗ್ಗ ಇವರ ಸಹಯೋಗದೊಂದಿಗೆ ಶನಿವಾರ ತುಂಗಾ ನಗರ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಕ್ಷಯರೋಗ ಮುಕ್ತ 100 ದಿನಗಳ ಅಭಿಯಾನದ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ಷಯರೋಗವನ್ನು ಉದಾಸೀನ ಮಾಡಿದರೆ ಸಮಾಜಕ್ಕೇ ಮಾರಕವಾಗುತ್ತದೆ. ಆದ್ದರಿಂದ ಲಕ್ಷಣಗಳು ಕಂದು ಬಂದ ತಕ್ಷಣೆ ಪರೀಕ್ಷೆ ಮೂಲಕ ಪತ್ತೆ ಹಚ್ಚಿ, ಚಿಕಿತ್ಸೆಗೆ ಒಳಪಡಬೇಕು. ಎಲ್ಲರೂ ಕೂಡ ಕ್ಷಯ ರೋಗದ ಲಕ್ಷಣಗಳ ಕುರಿತು ತಿಳಿದುಕೊಂಡು ಎಚ್ಚರಿಕೆಯಿಂದ ವಹಿಸಬೇಕು. ಒಂದು ವಾರಕ್ಕೂ ಹೆಚ್ಚಿನ ಕಾಲ ಜ್ವರ, ಶೀತ, ಕೆಮ್ಮು ಇದ್ದರೆ ಉದಾಸೀನ ಮಾಡಬಾರದು ಎಂದರು.


ಇಂದಿನಿAದ 100 ದಿನಗಳ ಕಾಲ ಕ್ಷಯರೋಗದ ಕುರಿತು ಜಾಗೃತಿ ಮೂಡಿಸುವ ಈ ಅಭಿಯಾನ ನಡೆಯಲಿದೆ. ಸಾರ್ವಜನಿಕರು, ರೋಗಿಗಳಿಗೆ, ಅವರ ಕುಟುಂಬಕ್ಕೆ ಸಹಾಯ ಮಾಡಿ ಕ್ಷಯ ನಿವಾರಣೆಗೆ ಪಣ ತೊಡೋಣ, ಸಮಾಜವನ್ನು ಟಿಬಿ ಮುಕ್ತಗೊಳಿಸೋಣ ಎಂದು ಕರೆ ನೀಡಿದರು.


ಡಬ್ಲ್ಯೂಹೆಚ್‌ಒ ಪ್ರತಿನಿಧಿ ಡಾ.ರಾಜೀವ್ ಮಾತನಾಡಿ, ಹೈರಿಸ್ಕ್ ಗುಂಪುಗಳನ್ನು ಭೇಟಿ ಮಾಡಿ, ಸಂಶಯ ಇರುವ ವ್ಯಕ್ತಿಗಳಿಗೆ ಸಿಬಿ ನ್ಯಾಟ್, ಕಫ ಪರೀಕ್ಷೆ ಮಾಡಿ, ಕ್ಷಯ ರೋಗ ಪತ್ತೆಯಾದಲ್ಲಿ ಚಿಕಿತ್ಸೆ ಕೊಡಿಸುವುದು. ಮತ್ತು ಸಿವೈಟಿಬಿ ಪರೀಕ್ಷೆ ಮುಖಾಂತರ ಸೋಂಕು ಇದೆಯಾ ಎಂದು ಪತ್ತೆ ಮಾಡಿ ನಿಯಂತ್ರಣ ಮಾಡುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಪತ್ತೆ ಮತ್ತು ಚಿಕಿತ್ಸೆ ಅತಿ ಮುಖ್ಯವಾಗಿದ್ದು ಎಲ್ಲರೂ ಸಹಕರಿಸಬೇಕು ಎಂದರು.


ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ನಾಗೇಶ್.ಬಿ.ಪಿ. ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಸರ್ಕಾರವು ಕ್ಷಯರೋಗ ಮುಕ್ತ ಭಾರತವನ್ನಾಗಿ ಮಾಡಲು ಗುರಿ ಹೊಂದಿದ್ದು ಇದರ ಅಂಗವಾಗಿ ಡಿ.7 ರಿಂದ 2024 ರ ಮಾರ್ಚ್ 24 ರವರೆಗೆ 100 ದಿನಗಳ ಕಾಲ ಕ್ಷಯರೋಗ ಕುರಿತು ಅರಿವು ಮೂಡಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರೋಗಿಗಳ ಶೀಘ್ರ ಪತ್ತೆ ಹಚ್ಚುವುದು, ಗುಣಪಡಿಸುವುದು ಹಾಗೂ ಸಾರ್ವಜನಿಕರಲ್ಲಿ ರೋಗ ಲಕ್ಷಣಗಳ ಬಗ್ಗೆ ಜಾಗೃತಿ ಮೂಡಿಸುವುದು, ಶೇ.80 ರಷ್ಟು ಖಾಯಿಲೆ ಹರಡುವುದನ್ನು ತಡೆಗಟ್ಟುವುದು, ಮರಣ ಪ್ರಮಾಣವನ್ನು ಶೇ.90 ರಷ್ಟು ಕಡಿಮೆ ಮಾಡುವುದು, ರೋಗಿಗಳ ಟಿ.ಬಿ.ಪರೀಕ್ಷೆ ಮತ್ತು ಚಿಕಿತ್ಸೆಗೆ ತಗಲುವ ವೆಚ್ಚವನ್ನು ಶೂನ್ಯ ಮಾಡುವುದು ಅಭಿಯಾನದ ಉದ್ದೇಶವಾಗಿದೆ.


ಜಾಥಾ ನಡೆಸುವುದು ಹಾಗೂ ನಿಕ್ಷಯ್ ಮಿತ್ರರನ್ನು ಹುಡುಕಿ ರೋಗಿಗಳಿಗೆ ಪೌಷ್ಟಿಕ ಆಹಾರ ಒದಗಿಸುವುದು. ಮತ್ತು ಧಾರ್ಮಿಕ ನಾಯಕರಿಂದ ಸಮಾಜದಲ್ಲಿ ಖಾಯಿಲೆ ಬಗ್ಗೆ ಅರಿವು ಮೂಡಿಸುವುದು. ಪ್ರತಿಜ್ಞೆ ಪಡೆಯುವುದು ಹಾಗೂ ಬಿತ್ತಿ ಪತ್ರಗಳ ಮುಖಾಂತರ ಪ್ರಚಾರ ಮಾಡುವುದು. ಹಬ್ಬದ ದಿನಗಳಲ್ಲಿ ಹೆಚ್ಚಿನ ಪ್ರಚಾರ ನಡೆಸುವುದು ಮತ್ತು ಮಾಧ್ಯಮಗಳ ಮೂಲಕ ಖಾಯಿಲೆ ಬಗ್ಗೆ ಹೆಚ್ಚಿನ ಪ್ರಚಾರ ನಡೆಸಲಾಗುವುದು.


ಕ್ಷಯರೋಗವು ಮೈಕೋಬ್ಯಾಕ್ಟೀರಿಯಂ ಟ್ಯುಬರ್‌ಕ್ಯುಲೋಸಿಸ್ ಎಂಬ ಸೂಕ್ಷö್ಮ ರೋಗಾಣುವಿನಿಂದ ಬರುತ್ತದೆ. ರೋಗಿಯು ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ತುಂತುರು ರೋಗಾಣುಗಳು ಗಾಳಿಯ ಮೂಲಕ ಆರೋಗ್ಯವಂತ ವ್ಯಕ್ತಿಯ ಶ್ವಾಸಕೋಶ ಸೇರಿ ಸೋಂಕು ಉಂಟು ಮಾಡುತ್ತದೆ.
ಜಿಲ್ಲೆಯ ಪ್ರಗತಿಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದು ಜಿಲ್ಲೆಯಲ್ಲಿ 140 ಪ್ರಕರಣಗಳಿದ್ದು, ಶೆ.92 ರೋಗಿಗಳನ್ನು ತಪಾಸಣೆಗೆ ಒಳಪಡಿಸಿ, ರೋಗಿಗಳ ಪತ್ತೆ ಹಚ್ಚುವಿಕೆ ಶೇ.102 ಇದ್ದು ಗುಣ ಹೊಂದುವವರ ಸಂಖ್ಯೆ ಶೇ.89 ರಷ್ಟಿದೆ. ಮರಣ ಹೊಂದಿರುವ ಸಂಖ್ಯೆ ಶೇ.6 ರಷ್ಟು ಇರುತ್ತದೆ.


ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ಕ್ಷಯರೋಗಿಗಳಿಗೆ ಸರ್ಕಾರದಿಂದ ಪ್ರತಿ ಮಾಹೆ ರೂ.500 ಪೌಷ್ಟಿಕ ಆಹಾರಕ್ಕಾಗಿ ಡಿಬಿಟಿ ಮುಖಾಂತರ ನೀಡಲಾಗುತ್ತಿದೆ. ಅಲ್ಲದೇ ನಿಕ್ಷಯ್ ಮಿತ್ರರಿಂದ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. 2023 ರಲ್ಲಿ ಜಿಲ್ಲೆಗೆ Pಕೇಂದ್ರ ಸರ್ಕಾರದಿಂದ ನೀಡುವ ಕಂಚಿನ ಪದಕ ದೊರೆತಿದೆ. ಈಲ್ಲೆಯಲ್ಲಿ 71 ಗ್ರಾ.ಪಂ ಗಳನ್ನು ಕ್ಷಯ ಮುಕ್ತ ಗ್ರಾಮ ಪಂಚಾಯಿತಿಗಾಗಿ ಆಯ್ಕೆ ಮಾಡಿದ್ದು ಚಟುವಟಿಕೆಗಳು ಚಾಲ್ತಿಯಲ್ಲಿ ಇದೆ ಎಂದ ಅವರು ರೋಗ ಪತ್ತೆ, ಚಿಕಿತ್ಸೆ ಮತ್ತು ನಿಯಂತ್ರಣದ ಕುರಿತು ಮಾಹಿತಿ ನೀಡಿದರು.


ಕಾರ್ಯಕ್ರಮದಲ್ಲಿ ಟಿಬಿ ಮುಕ್ತ ಭಾರತ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಹಾಗೂ ರುದ್ರಪ್ಪ ಜೋಗಿ ತಂಡದಿAದ ಕ್ಷಯ ರೋಗ ಕುರಿತು ಜಾಗೃತಿ ಮೂಡಿಸುವ ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಲಾಯಿತು.
ಕ್ಷಯ ರೋಗಿಗಳಿಗೆ ಉಚಿತ ಪೌಷ್ಟಿಕ ಆಹಾರ ನೀಡಿ ಸಹಕರಿಸಿದ ನಿಕ್ಷಯ್ ಮಿತ್ರರಾದ ರಾಘವೇಂದ್ರ ಭಟ್, ಕಿರಣ್, ರಮೇಶ್ ಇವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಟಿಬಿ ರೋಗದಿಂದ ಮುಕ್ತರಾಗಿ ಇತರೆ ರೋಗಿಗಳು ಮುಕ್ತರಾಗಲು ಉತ್ತೇಜಿಸುತ್ತಿರುವ ಪ್ರಶಾಂತ್ ರವರಿಗೆ ಟಿಬಿ ಚಾಂಪಿಯನ್ ಎಂದು ಸನ್ಮಾನಿಸಲಾಯಿತು. ಈ ವೇಳೆ ಅವರು ತಾವು ಟಿಬಿ ಮುಕ್ತರಾದ ಬಗ್ಗೆ ಅನುಭವ ಹಂಚಿಕೊAಡರು.


ಕಾರ್ಯಕ್ರಮದಲ್ಲಿ ಆರ್‌ಸಿಹೆಚ್‌ಒ ಡಾ.ಮಲ್ಲಪ್ಪ, ಡಿಎಸ್‌ಓ ಡಾ.ನಾಗರಾಜ್ ನಾಯ್ಕ್, ಎನ್‌ವಿಬಿಡಿಸಿ ಅಧಿಕಾರಿ ಡಾ.ಗುಡುದಪ್ಪ ಕುಸಬಿ, ಡಿಎಲ್‌ಓ ಡಾ.ಕಿರಣ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಲಿಂಗರಾಜ್,
ಟಿಹೆಚ್‌ಓ ಡಾ.ಚಂದ್ರಶೇಖರ್, ತುಂಗಾ ನಗರ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಭೀಮಪ್ಪ, ಡಾ.ಮೋಹನ್, ಡಾ.ಹರ್ಷವರ್ಧನ್ ಪಾಲ್ಗೊಂಡಿದ್ದರು.
ಆರೋಗ್ಯ ಇಲಾಖೆಯ ರೇಷ್ಮಾ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಅಖ್ತರ್ ವಂದಿಸಿದರು.

Leave a Reply

Your email address will not be published. Required fields are marked *