ದೇಶದ ಪ್ರಮುಖ ಕಾರ್ಮಿಕ ರೈತ ಕೃಷಿ ಕೂಲಿಗಾರರ ಸಂಘಟನೆಗಳು ಸರ್ಕಾರದ ನೀತಿಗಳ ವಿರುದ್ಧ ರಾಷ್ಟ್ರವ್ಯಾಪ್ತಿಯಾಗಿ ಜುಲೈ 25 ರಿಂದ ಆಗಸ್ಟ್ 8 ರವರೆಗೆ ಬೇಡಿಕೆಗಳ ಆಧಾರದಲ್ಲಿ ಆಗಸ್ಟ್ 9 ರಂದು ಎಲ್ಲಾ ಜಿಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ ಮನವಿ ಪತ್ರಗಳನ್ನು ಸಲ್ಲಿಸುತ್ತಾರೆ. * ಕೃಷಿರಂಗದಲ್ಲಿ ಸುಧಾರಣೆಗಳನ್ನೇ ಜಾರಿಗೆ ತರುವ ಹೆಸರಿನಲ್ಲಿ ಕೇಂದ್ರ ಸರ್ಕಾರ ಅಂಗೀಕರಿಸಿರುವ ಹೊಸ ಕೃಷಿ ಕಾನೂನುಗಳು ರೈತ ವಿರೋಧಿಯಾಗಿವೆ ಮಾತ್ರವಲ್ಲ ನಮ್ಮ ವ್ಯವಸಾಯ ರಂಗದಲ್ಲಿ ಕಬಳಿಸಲು ಹೊಂಚು ಹಾಕುತ್ತಿರುವ ಕಾರ್ಪೋರೇಟ್ ಕಂಪನಿಗಳ ಪರವಾಗಿದೆ. ಹೊಸ ಕೃಷಿ ಕಾನೂನುಗಳು ರೈತರಿಗೆ ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದಲ್ಲಿ ಯಾರಿಗೆ ಬೇಕೋ ಅವರಿಗೆ ಮಾರಾಟ ಮಾಡುವ ಸ್ವಾತಂತ್ರ್ಯ ನೀಡುತ್ತದೆ.ಇದರಿಂದ ರೈತರಿಗೆ ಒಳ್ಳೆ ಬೆಳೆ ಸಿಗುತ್ತದೆ ಎಂದು ಪ್ರಚಾರ ಮಾಡುತ್ತಾರೆ. *ಬೇಸಾಯದಲ್ಲಿ ಕೃಷಿಕೂಲಿಕಾರರು ಮುಖ್ಯ ಪಾತ್ರ ನಿರ್ವಹಿಸುತ್ತಾರೆ ಆದರೆ ಕೇಂದ್ರ ಸರ್ಕಾರ ಕೃಷಿ ಕೂಲಿಕಾರರನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ದೇಶದಲ್ಲಿ ಋಣಮುಕ್ತಿ ಕಾನೂನು ಇಲ್ಲದೇ ಇರುವುದರಿಂದ ಕೂಲಿಗಾರರು ಮಾಡಿದ ಸಾಲವನ್ನು ವಾಪಸ್ ಕೊಡಲಾಗದೆ ಆತ್ಮಹತ್ಯೆಯ ಹಾದಿ ತುಳಿಯುತ್ತಾರೆ.ರೈತರು ಬೆಳೆದ ದವಸ ಧಾನ್ಯಗಳನ್ನು ಸರ್ಕಾರವೇ ಕೊಂಡುಕೊಳ್ಳುವ ವ್ಯವಸ್ಥೆಯಿಲ್ಲದಿರುವುದರಿಂದ ಕ್ರಮೇಣ ಪಡಿತರ ಪದ್ಧತಿ ರದ್ದಾಗಿದೆ. * ಕೈಗಾರಿಕಾ ರಂಗದ ಖಾಸಗೀಕರಣ ಮತ್ತು ಕಾರ್ಪೊರೇಟೀಕರಣ : ದೇಶದಲ್ಲಿ ಉದಾರೀಕರಣದ ನೀತಿಗಳು ಜಾರಿಯಾದ ಬಳಿಕ ಕೈಗಾರಿಕಾರಂಗದಲ್ಲಿ ಖಾಸಗೀಕರಣ ಮತ್ತು ಕಾರ್ಪೊರೇಟೀಕರಣ ರಭಸದಿಂದ ಅನುಷ್ಠಾನಗೊಳಿಸಲಾಗುತ್ತಾ ಬರಲಾಯಿತು.ತಮ್ಮ ಸರ್ಕಾರದ ಅವಧಿಯಲ್ಲಿ ಖಾಸಗೀಕರಣದ ವೇಗ ಹೆಚ್ಚಾಗಿದೆ. * ದೇಶದ ಕಾರ್ಮಿಕರು ವಿಶೇಷವಾಗಿ ಅಸಂಘಟಿತ ವಲಯದ ಕಾರ್ಮಿಕರು ಕಳೆದ 2 ವರ್ಷಗಳ ಅವಧಿಯಲ್ಲಿ ಕೊರೊನಾ ಸಾಂಕ್ರಾಮಿಕಕ್ಕೆ ಬಾಧಿತರಾಗಿ ತೀವ್ರ ಸಂಕಷ್ಟಕ್ಕೆ ಒಳಗಾಗಿ ಕೋಟ್ಯಂತರ ಜನ ಕೆಲಸ ಕಳೆದುಕೊಂಡಿದ್ದಾರೆ. ಅವರು ನಿತ್ಯದ ಆದಾಯ ದಿಂದ ವಂಚಿತರಾಗಿದ್ದಾರೆ ಊಟಕ್ಕಿಲ್ಲದೆ, ವಾಪಸ್ ಊರಿಗೆ ಹೋಗಲು ಹೋಗಲು ವಾಹನ ವ್ಯವಸ್ಥೆ ಇಲ್ಲದೆ ನರಕಯಾತನೆ ಅನುಭವಿಸಿದ್ದಾರೆ. * ಹಿಂದಿನ ಕೇಂದ್ರ ಸರ್ಕಾರಗಳು ಆರಂಭ ಮಾಡಿದ ನವ ಉದಾರೀಕರಣ ನೀತಿಗಳನ್ನೇ ಇವತ್ತಿನ ಸರಕಾರ ತುಂಬಾ ವೇಗವಾಗಿ ಜಾರಿ ಮಾಡುತ್ತಿದೆ ಸರ್ಕಾರ ಬದಲಾದರೂ ಜನರ ನಿರೀಕ್ಷೆಗಳನ್ನು ಪೂರೈಸುವ ನಿಟ್ಟಿನಲ್ಲಿ ನೀತಿಗಳು ಬದಲಾಗಿಲ್ಲ. * ಬೇಡಿಕೆಗಳು: * ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ಸಂಗೀತಗಳು ಹಾಗೂ ಜನವಿರೋಧಿ ಕೃಷಿ ಕಾನೂನುಗಳು ಮತ್ತು ವಿದ್ಯುತ್ ತಿದ್ದುಪಡಿ ಮಸೂದೆ ಯನ್ನು ರದ್ದುಪಡಿಸಬೇಕು. *ರೈತರ ಎಲ್ಲ ಬೆಳೆಗಳಿಗೂ ಖಾತರಿ ಖರೀದಿಯೊಂದಿಗೆ ಸಮಗ್ರ ಉತ್ಪಾದನಾ ವೆಚ್ಚ ಶೇ 50% ಸರಕಾರ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಯಾಗಿ ದೊರೆಯುವಂತೆ ಕಾಯಿದೆ ಮಾಡಬೇಕು. * ರಾಜ್ಯ ಸರ್ಕಾರ ಶ್ರೀಮಂತರಿಗೆ ಅನುಕೂಲ ವಾಗುವಂತೆ ಭೂಸುಧಾರಣೆ ಕಾಯ್ದೆಗೆ ಮಾಡಿರುವ ತಿದ್ದುಪಡಿಯನ್ನು ಹಿಂಪಡೆಯಬೇಕೆಂದು ಭೂಮಿ ಇಲ್ಲದ ಬಡವರು ಸಾಗುವಳಿ ಮಾಡುತ್ತಿರುವ ಭೂಮಿಗೆ ಸಾಗುವಳಿ ಚೀಟಿ ನೀಡಿ ಸಕ್ರಮಗೊಳಿಸಬೇಕು ನಿವೇಶನರಹಿತರಿಗೆ ವಸತಿ ಹಂಚಿಕೆ ಮಾಡಲು ಸಮಗ್ರ ಯೋಜನೆ ಘೋಷಣೆ ಮಾಡಬೇಕು. * ರಾಜ್ಯದ ಭೂ ಸುಧಾರಣೆ ಕಾಯಿದೆ, ಎಪಿಎಂಸಿ ಕಾಯಿದೆ, ಜಾನುವಾರು ಅಂತ್ಯ ಕಾಯಿದೆಗಳ ಜನವಿರೋಧಿ ತಿದ್ದುಪಡಿಯನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಬೇಕು. * ಪೆಟ್ರೋಲ್ ಡಿಸೇಲ್ ಅಡುಗೆ ಅನಿಲ ಖ್ಯಾತ ತೈಲ ಇತ್ಯಾದಿ ಎಲ್ಲ ಅಗತ್ಯ ಸರಕುಗಳ ಬೆಲೆಯಲ್ಲಿ ಆಗಿರುವ ತೀವ್ರ ಏರಿಕೆಯನ್ನು ನಿವಾರಿಸಬೇಕು. * ಉದ್ಯೋಗ ಕಡಿತ ಅಥವಾ ವೇತನ ಕಡಿತ ಮಾಡಬಾರದು ಕೊರೋನಾ ಪಿಡುಗಿನ ಅವಧಿಯಲ್ಲಿ ಆದ ಉದ್ಯೋಗ ಹಾಗೂ ವೇತನ ನಷ್ಟಕ್ಕೆ ಪರಿಹಾರ ನೀಡಬೇಕು. * ಎಲ್ಲಾ ವಲಸೆ ಹಾಗೂ ಅಸಂಘಟಿತ ವಲಯಗಳ ಕಾರ್ಮಿಕರನ್ನು ನೋಂದಣಿ ಮಾಡಬೇಕು ಮತ್ತು ಪರಿಹಾರ ನೀಡಬೇಕು ದಿನಗೂಲಿ, ಗುತ್ತಿಗೆ,ಯೋಜನಾ ಕಾರ್ಮಿಕರು ಅಸಂಘಟಿತ ಕಾರ್ಮಿಕರು ಸೇರಿದಂತೆ ಎಲ್ಲ ಕಾರ್ಮಿಕರಿಗೆ ಕನಿಷ್ಠ ವೇತನ , ಸಾಮಾಜಿಕ ಸುರಕ್ಷೆ ಮತ್ತು ಪಿಂಚಣಿಯನ್ನು ಖಾತರಿಪಡಿಸಬೇಕು. * ಖಾಸಗೀಕರಣ ಹಾಗೂ ಸಾರ್ವಜನಿಕ ವಲಯಗಳ ಉದ್ದಿಮೆಗಳ ಸರ್ಕಾರಿ ಇಲಾಖೆಗಳ ಬಂಡವಾಳ ನಿಲ್ಲಿಸಬೇಕು ಕರಾಳ ಅಗತ್ಯ ರಕ್ಷಣಾ ಸೇವಾ ಸುಗ್ರೀವಾಜ್ಞೆಯಲ್ಲಿ ವಾಪಸ್ ಪಡೆಯಬೇಕು. ಸರ್ಕಾರವು ಈ ಬೇಡಿಕೆಗಳನ್ನು ಈಡೇರಿಸದೇ ಇದ್ದಲ್ಲಿ ಈ ದೇಶದ ಜನರು ಮತ್ತಷ್ಟು ತೀವ್ರವಾದ ಜನ ಚಳುವಳಿಗೆ ಮುಂದಾಗುವುದಲ್ಲದೆ ಬೇರೆ ಮಾರ್ಗ ಉಳಿದಿಲ್ಲ.

LIC policy ಗಾಗಿ ಸಂಪರ್ಕಿಸಿ 9538615354

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153