ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಆಚರಿಸಲಾಗುತ್ತಿರುವ ಅಪರಾಧ ತಡೆ ಮಾಸಾಚರಣೆ–2024 ರ ಅಂಗವಾಗಿ
ಶ್ರೀ ತಿರುಮಲೇಶ್ ಪಿಎಸ್ಐ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ರವರು ಶಿವಮೊಗ್ಗ ನಗರದ ಖಾಸಗಿ ಬಸ್ ನಿಲ್ದಾಣ ಹಾಗೂ KSRCT ಬಸ್ ನಿಲ್ದಾಣದ ಹತ್ತಿರ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು, ಸಾರ್ವಜನಿಕರು, ವಿಧ್ಯಾರ್ಥಿಗಳು, ಬಸ್ ಚಾಲಕರು ಹಾಗೂ ಆಟೋ ಚಾಲಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಈ ಕೆಳಕಂಡ ಮಾಹಿತಿ ನೀಡಿರುತ್ತಾರೆ.
1) 18 ವರ್ಷಕ್ಕಿಂತ ಕಡಿಮೆವಯಸ್ಸಿನವರು ವಾಹನ ಚಾಲನೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಆದ್ದರಿಂದ ಕಡ್ಡಾಯವಾಗಿ ಚಾಲನಾ ಪರವಾನಿಗೆಯನ್ನು ಪಡೆದ ನಂತರವೇ ವಾಹನವನ್ನು ಚಾಲನೆ ಮಾಡುವುದು.
2) ಮಧ್ಯ ಸೇವನೆ ಮಾಡಿ / ಯಾವುದೇ ಮಾದಕ ದ್ರವ್ಯಗಳ ಅಮಲಿನಲ್ಲಿ, ವಾಹನ ಚಾಲನೆ ಮಾಡಬೇಡಿ,
3) ವಾಹನಗಳಲ್ಲಿ ಮಾರ್ಪಡಿಸಿದ / ದೋಷಪೂರಿತ ಸೈಲೆನ್ಸರ್ ಗಳ ಬಳಕೆ ಮತ್ತು ಕರ್ಕಷ ಶಬ್ದವನ್ನುಂಟು ಮಾಡುವ ಹಾರ್ನ್ ಗಳ ಬಳಕೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ.
4) ಸುರಕ್ಷತೆಯ ದೃಷ್ಠಿಯಿಂದ ಕಡ್ಡಾಯವಾಗಿ ದ್ವಿ ಚಕ್ರ ವಾಹನದ ಚಾಲಕ ಮತ್ತು ಹಿಂಬದಿ ಸವಾರ ಇಬ್ಬರೂ ಹೆಲ್ಮೆಟ್ ಅನ್ನು ಧರಿಸಿ ಮತ್ತು ಕಾರು / ನಾಲ್ಕು ಚಕ್ರದ ವಾಹನ ಚಾಲಕ ಹಾಗೂ ಸವಾರರು ಸೀಟ್ ಬೆಲ್ಟ್ ಅನ್ನು ಧರಿಸಿ ವಾಹನ ಚಾಲನೆ ಮಾಡಿ,
5) ವಾಹನಗಳಿಗೆ ವಿಮೆ ಮಾಡಿಸುವುದು ಕಡ್ಡಾಯವಿದ್ದು, ವಿಮೆಯ ಚಾಲ್ತಿ ಅವಧಿ ಮುಕ್ತಾಯವಾಗಿದ್ದರೆ ತಕ್ಷಣವೇ ವಿಮೆಯನ್ನು ಮರು ನವೀಕರಿಸಿ, ಅಪಘಾತದಂತಹ ಸಂದರ್ಭದಲ್ಲಿ ಭರಿಸಲಾಗದ ಆರ್ಥಿಕ ಹೊರೆಯಿಂದ ಸುರಕ್ಷಿತವಾಗಿರಿ ಎಂದು ಮಾಹಿತಿ ತಿಳಿಸಿಕೊಟ್ಟಿರುತ್ತಾರೆ.
ಈ ಸಂದರ್ಭದಲ್ಲಿ ಸಾರ್ವಜನಿಕರು, ವಿಧ್ಯಾರ್ಥಿಗಳು, ಬಸ್ ಚಾಲಕರು ಹಾಗೂ ಆಟೋ ಚಾಲಕರು ಹಾಗೂ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.