ಡಿಸೆಂಬರ್ 12 ಮತ್ತು 13 ರಂದು
ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಮತ್ತು ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ವತಿಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲ ಬಾರಿಗೆ ಎಲೈಟ್(18 ವರ್ಷ ಮೇಲ್ಪಟ್ಟ) ರಾಜ್ಯ ಮಟ್ಟದ ಬಾಕ್ಸಿಂಗ್ ಪಂದ್ಯಾವಳಿ ನಡೆಯಲಿದೆ.
ಪಂದ್ಯಾವಳಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 100 ಕ್ರೀಡಾಪಟುಗಳು ಆಗಮಿಸುತ್ತಿದ್ದು ಪಂದ್ಯಾವಳಿಯಲ್ಲಿ 10 ವಿವಿಧ ತೂಕದ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿದ್ದು
ಇದರಲ್ಲಿ ಆಯ್ಕೆಯಾದ ಕ್ರೀಡಾಪಟುಗಳು ಬಾಕ್ಸಿಂಗ್ ಫೆಡರೇಷನ್ ಆಫ್ ಇಂಡಿಯಾ (ಭಾರತ ಸರ್ಕಾರದ ಮಾನ್ಯತೆ ಪಡೆದ ಸಂಸ್ಥೆ) ಆಯೋಜಿಸುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತಾರೆ.
ಇದು ಕ್ರೀಡಾಪಟುಗಳಿಗೆ ಬಹುಮುಖ್ಯವಾದ ಕ್ರೀಡೆಯಾಗಿದ್ದು
ಬಾಕ್ಸಿಂಗ್ ಭಾರತ ಸರ್ಕಾರದಲ್ಲಿ ಅತಿ ಪ್ರಾಮುಖ್ಯತೆಯುಳ್ಳ ಕ್ರೀಡಾಪಟ್ಟಿಯಲ್ಲಿ ಇದ್ದು ರಾಷ್ಟ್ರಮಟ್ಟದಲ್ಲಿ ಪದಕ ವಿಜೇತರಾದ ಕ್ರೀಡಾಪಟುಗಳಿಗೆ ಸ್ಕಾಲರ್ಶಿಪ್ ಕ್ರೀಡಾ ಕೋಟಾದಡಿ ಉದ್ಯೋಗ ಸರ್ಕಾರದ ಹಲವು ಸೌಲಭ್ಯಗಳು ದೊರೆಯುತ್ತದೆ
ಮತ್ತು ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಗುತ್ತದೆ ಹಾಗಾಗಿ ರಾಜ್ಯದ ವಿವಿಧ ಜಿಲ್ಲೆಗಳ ಕ್ರೀಡಾಪಟುಗಳು ಸಾಕಷ್ಟು ಅಭ್ಯಾಸ ಮಾಡಿ ಈ ಪಂದ್ಯಾವಳಿಗೆ ಬರುವುದರಿಂದ ಪಂದ್ಯಾವಳಿಗಳು ಸಾಕಷ್ಟು ರೋಮಾಂಚನವಾಗಿರುತ್ತದೆ
ಮತ್ತು ನಾಳೆ ಬೆಳಗ್ಗೆ 11 ಗಂಟೆಗೆ
ಪಂದ್ಯಾವಳಿ ಉದ್ಘಾಟನೆಯನ್ನು ಮಾಜಿ ಉಪ ಮುಖ್ಯಮಂತ್ರಿಗಳು ಆದ ಶ್ರೀ ಕೆಎಸ್ ಈಶ್ವರಪ್ಪನವರು
ಮಾಡಲಿದ್ದು ಕ್ರೀಡಾಕೂಟಕ್ಕೆ ಚಾಲನೆಯನ್ನು ಶ್ರೀ ಮಿಥುನ್ ಕುಮಾರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮುಖಂಡರಾದ ಶ್ರೀ ಎಚ್ ಸಿ ಯೋಗೇಶ್ ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಸಾಯಿ ಸತೀಶ್ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೇಖ್ಯ ನಾಯಕ್ ಮೆಟ್ರೋ ಹಾಸ್ಪಿಟಲ್ ಸಿಇಓ ಡಾಕ್ಟರ್ ತೇಜಸ್ವಿ ಸೇರಿದಂತೆ ಬಿಜೆಪಿ ಮುಖಂಡರಾದ ರಾಜೇಶ್ ಕಾಮತ್ ದಿವಾಕರ್ ಶೆಟ್ಟಿ ವಿಶ್ವನಾಥ್ ಅರುಣ್ ಬಾಬು ಭಾಗವಹಿಸಲಿದ್ದು
ಪಂದ್ಯಾವಳಿಗೆ ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾದ
ಕ್ವಾಲಿಫೈಡ್ ತೀರ್ಪುಗಾರರು ಆಗಮಿಸಿದ್ದಾರೆ.ಶಿವಮೊಗ್ಗ ವಿನೋದ
ಸಹ ಕಾರ್ಯದರ್ಶಿ
ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್
ಅಧ್ಯಕ್ಷರು
ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್