ಮಕ್ಕಳಲ್ಲಿ ಪಠ್ಯೇತರ ಚಟುವಟಿಕೆಗಳ ಜೊತೆಗೆ ದೇಶದ ಸಂಸ್ಕ್ರತಿ, ಪರಂಪರೆಯನ್ನು ಬೆಳೆಸಲು, ಪ್ರೋತ್ಸಾಹಿಸುವಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಶಿವಮೊಗ್ಗ ನಗರ ಶಾಸಕರಾದ ಎಸ್ ಎನ್ ಚೆನ್ನ ಬಸಪ್ಪ ಅವರು ಹೇಳಿದರು.

ಜಿಲ್ಲಾಡಳಿತ. ಜಿಲ್ಲಾ ಪಂಚಾಯತ್, ಉಪನಿರ್ದೇಶಕ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಮತ್ತು ರಾಷ್ಟ್ರೀಯ ಪದವಿಪೂರ್ವ ಕಾಲೇಜು ಇವರುಗಳು ಸಂಯುಕ್ತ ಆಶ್ರಯ ದಲ್ಲಿ ನಗರದ ರಾಷ್ಟ್ರೀಯ ಪದವಿಪೂರ್ವ ಕಾಲೇಜು ಪ್ರೌಢಶಾಲೆಯಲ್ಲಿ ಇಂದು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಲ್ಲಿ ಕೇವಲ ಪಠ್ಯ ಪ್ರವೃತ್ತಿಯನ್ನು ಬೆಳೆಸುವುದು ಮಾತ್ರ ಅಲ್ಲದೆ ಅವರಲ್ಲಿ ಪ್ರತಿಭೆಯನ್ನು ಹೊರತರಲು ಮತ್ತು ನಮ್ಮ ದೇಶದ ಸಂಸ್ಕ್ರತಿ, ಪರಂಪರೆ, ಪದ್ಧತಿಯ ಯೋಚನೆಯನ್ನು ಇಟ್ಟು ಕೊಂಡು ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಆಯೊಜಿಸಲಾಗಿದೆ. ಶಿಕ್ಷಕರು ಮಕ್ಕಳಲ್ಲಿ ಒಳ್ಳೆಯ ಕಲೆಯನ್ನು ಹುಡುಕಿ ತೆಗೆಯುವ ಕೆಲಸ ಮಾಡಬೇಕು.ಮಕ್ಕಳಲ್ಲಿ ಕೇವಲ ಒಳ್ಳೆಯ ವಿಚಾರವನ್ನು ಹೊರತೆಗೆದು ಅವರಿಗೆ ಉತ್ತೆಜನ ನೀಡಿದರೆ ಮಾತ್ತ ಉತ್ತಮ ಕಲಾವಿದರಾಗಲು ಸಾಧ್ಯ ಈ ನಿಟ್ಟಿನಲ್ಲಿ ಶಿಕ್ಷಣ ಮತ್ತು ಶಿಕ್ಷಕರ ಪಾತ್ರ ಮಹತ್ವವಾದದು ಎಂದು ಹೇಳಿದರು.

ಡಿ.ಎಸ್ ಅರುಣ್ ಮಾತನಾಡಿ ಸರ್ಕಾರ ವು ಮಕ್ಕಳ ನಾನಾ ರೀತಿಯ ಚಟುವಟಿಕೆಗಳು ಮತ್ತು ಕಲೆ ಪ್ರದರ್ಶಿಸಲು ಒಂದು ವೇದಿಕೆಯನ್ನು ಸೃಷ್ಟಿಸಿದೆ.‌ಹಿಂದಿನ ದಿನಗಳಲ್ಲಿ ಪರೀಕ್ಷೆ ಮತ್ತು ಶಿಕ್ಷಣಕ್ಕೆ ಮಾತ್ರ ಹೆಚ್ಚು ಮನ್ನಣೆ ಇತ್ತು ಆದರೆ ಇಂದು ಪಠೇತರ ಚಟುವಟಿಕೆಗಳಿಗೆ ಮಹತ್ವ ನೀಡಿದೆ.ವೈವಿಧ್ಯಮಯ ದೇಶ ನಮ್ಮದು, ಊರಿಂದ ಊರಿಗೆ ಸಂಸ್ಕೃತಿಯು ವಿಭಿನ್ನ ರೀತಿಯಲ್ಲಿ ಇದೆ. ಅದನ್ನು ಉಳಿಸಲು ಮಕ್ಕಳಿಗೆ ಸಂಸ್ಕಾರ ಮತ್ತು ಶಿಷ್ಠಾಚಾರ ನೀಡುವ ಮೂಲಕ ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ಉಳಿಸಲು ಸಾದ್ಯ ಎಂದು ಹೇಳಿದರು.

ಉಪನಿರ್ದೇಶಕರಾದ ಎಸ್ .ಆರ್ ಮಂಜುನಾಥ್ ಮಾತನಾಡಿ ಶಾಲೆಗಳಲ್ಲಿ ಓದುವಿನ ಜೊತೆಗೆ ಅವರಲ್ಲಿ ಕಲೆ ಹೊರಹಾಕಲು ಈ ರೀತಿಯ ಕಾರ್ಯಕ್ರಮ ಪ್ರಾರಂಭಿಸಿದರು. ಓದುವಿನ ಜೊತೆ ಕ್ರಿಡೆ, ಕಲೆ, ಸಂಸ್ಕೃತಿ ಗುರುತಿಸುವಿಕೆಯಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ. ಶಿಕ್ಷಕರು ಮಕ್ಕಳ ಕಲೆ ಗುರುತಿಸಿ ಪ್ರೊತ್ಸಾಹ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮ ದಲ್ಲಿ ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿಯಾದ ರಮೇಶ್, ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಎ.ಕೆ ನಾಗೇಂದ್ರ,ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಘವೇಂದ್ರ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮಪ್ಪ,ರಾಷ್ಟ್ರೀಯ ಪದವಿಪೂರ್ವ ಕಾಲೇಜು ಉಪ ಪ್ರಾಂಶುಪಾಲರು, ಶಿಕ್ಷರು, ಸರ್ಕಾರಿ ಮತ್ತು ಸರ್ಕಾರೇತರ ಶಿಕ್ಷಕರು, ಸಿಬ್ಬಂದಿಗಳು ಮತ್ತು ಪೋಷಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *