ಶ್ರೀ ನವೀನ್, ಬನವನಗರ, ತರೀಕೆರೆ ಭದ್ರಾವತಿಗೆ ಬಂದಿದ್ದು HONDA ACTIVA DLX ದ್ವಿಚಕ್ರ ವಾಹನವನ್ನು ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಭದ್ರಾವತಿ ಸಿದ್ಧಾಪುರ ಬೈಪಾಸ್ ನ ತಿಬ್ಬಾದೇವಿ ಇಂಜಿನಿಯರಿಂಗ್ ವರ್ಕ್ ಮುಂದೆ ನಿಲ್ಲಿಸಿದ್ದನ್ನ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಠಾಣಾ ಗುನ್ನೆ ಸಂಖ್ಯೆ 0104/2024 ಕಲಂ 303 (2) BNS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.

ಪ್ರಕರಣದಲ್ಲಿ ಕಳುವಾದ ದ್ವಿಚಕ್ರ ವಾಹನ ಹಾಗೂ ಆರೋಪಿತರ ಪತ್ತೆಗಾಗಿ, ಶ್ರೀ ಮಿಥುನ್ ಕುಮಾರ್ ಜಿ ಕೆ, ಐಪಿಎಸ್, ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಶ್ರೀ ಅನೀಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು -1 ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಕಾರಿಯಪ್ಪ ಎ. ಜಿ. ಹೆಚ್ಚುವರಿ ಪೊಲೀಸ್ ಅಧೀಕ್ಷಕರು -2, ಶಿವಮೊಗ್ಗ ಜಿಲ್ಲೆರವರ ಮಾರ್ಗದರ್ಶನದಲ್ಲಿ ಶ್ರೀ ನಾಗರಾಜ್ ಪೊಲೀಸ್ ಉಪಾಧೀಕ್ಷರು ಭಧ್ರಾವತಿ ಉಪವಿಭಾಗ ರವರ ಮೇಲ್ವಿಚಾರಣೆಯಲ್ಲಿ ಶ್ರೀಶೈಲ ಕುಮಾರ್ ಸಿಪಿಐ ಭದ್ರಾವತಿ ನಗರ ವೃತ್ತರವರ ನೇತೃತ್ವದಲ್ಲಿ ಶ್ರೀ ಟಿ ರಮೇಶ ಪಿ.ಎಸ್.ಐ ನ್ಯೂಟೌನ್ ಪೊಲೀಸ್ ಠಾಣೆ, ಟಿ.ಪಿ ಮಂಜಪ್ಪ ಎ.ಎಸ್ ಐ ಹಾಗೂ ಠಾಣಾ ಸಿಬ್ಬಂಧಿಗಳಾದ ಸಿ.ಹೆಚ್.ಸಿ ನವೀನ ಮತ್ತು ರಘು ಬಿ. ಎಂ. ರವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.

ಸದರಿ ತನಿಖಾ ತಂಡವು ದಿನಾಂಕಃ 11-12-2024 ರಂದು ಪ್ರಕರಣದ ಆರೋಪಿ ರಂಗನಾಥ ಆರ್, 32 ವರ್ಷ, ಹೆಬ್ಬಂಡಿ ತಾಂಡಾ, ಭದ್ರಾವತಿ ಈತನನ್ನು ದಸ್ತಗಿರಿ ಮಾಡಿ, ಆತನಿಂದ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯ 02 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 1,10,000/- ರೂಗಳ 02 ದ್ವಿ ಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ. ಸದರಿ ತನಿಖಾ ತಂಡದ ಉತ್ತಮವಾದ ಕರ್ತವ್ಯವನ್ನು ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

Leave a Reply

Your email address will not be published. Required fields are marked *