ಶ್ರೀ ಮಿಥುನ್ ಕುಮಾರ್ ಜಿ. ಕೆ, ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ನ ಇಲಾಖಾ ವಾಹನಗಳ ಪರಿವೀಕ್ಷಣೆ ನಡೆಸಿ, ದ್ವಿಚಕ್ರ ವಾಹನ, ನಾಲ್ಕು ಚಕ್ರದ ವಾಹನ, ಟ್ರಕ್, ಟಿ.ಟಿ ವಾಹನ ಟ್ಯಾಂಕರ್, ಹೆದ್ದಾರಿ ಗಸ್ತು ವಾಹನ ಮತ್ತು ಇ.ಆರ್.ಎಸ್ಎಸ್.-112 ವಾಹನಗಳು ಉತ್ತಮ ಸ್ಥಿತಿಯಲ್ಲಿ ಇರುವ ಬಗ್ಗೆ, ವಾಹನದಲ್ಲಿ ಟೂಲ್ ಕಿಟ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ತುರ್ತು ಸಂದರ್ಭದಲ್ಲಿ ಉಪಯೋಗಿಸಬೇಕಿರುವ ಪರಿಕರಗಳಾದ ಹಗ್ಗ, ಟಾರ್ಚ್, ಕಾಷನರಿ ಸೈನ್ ಬೋರ್ಡ್, ರಿಫ್ಲೆಕ್ಟಿವ್ ಜಾಕೇಟ್ ಗಳು, ಕೇನ್ ಶಿಲ್ಡ್, ಬಾಡಿ ಪ್ರೊಟೆಕ್ಟರ್ ಗಳು ವಾಹನದಲ್ಲಿ ಇರುವ ಬಗ್ಗೆ ಹಾಗೂ ವಾಹನಕ್ಕೆ ಅಳವಡಿಸಿರುವ ಪಬ್ಲಿಕ್ ಅಡ್ರೆಸ್ ಸಿಸ್ಟಂ, ಸೈರನ್ ಹಾಗೂ ನಿಸ್ತಂತು ಉಪಕರಣಗಳು ಉತ್ತಮ ಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ, ವಾಹನದ ಎಮಿಷನ್ ಪರೀಕ್ಷಾ ವರದಿ ಹಾಗೂ ವಾಹನಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಪರಿಶೀಲಿಸಿದರು.

ಮತ್ತು ಇಲಾಖಾ ವಾಹನಗಳನ್ನು ಹಂಚಿಕೆ ಮಾಡಿರುವ ಚಾಲಕರುಗಳಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ವಾಹನಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವಂತೆ, ಹಾಗೂ ಪೊಲೀಸ್ ಐಟಿಯಲ್ಲಿ ಲಾಗ್ ಬುಕ್ ಮತ್ತು ಇಂಡೆಂಟ್ ವಿವರವನ್ನು ಕಡ್ಡಾಯವಾಗಿ ನಮೂದು ಮಾಡುವಂತೆ ಸೂಚನೆಗಳನ್ನು ನೀಡಿದರು.ಇಲಾಖಾ ವನ್ನು ಉತ್ತಮವಾಗಿ ನಿರ್ವಹಣೆ ಮಾಡಿದ ಚಾಲಕರಿಗೆ ಪ್ರಶಂಸಿಸಿದರು.

ನಂತರ ಡಿಎಆರ್ ಶಿವಮೊಗ್ಗ ಘಟಕದ ಪರಿವೀಕ್ಷಣೆಯನ್ನು ಹಮ್ಮಿಕೊಂಡಿದ್ದು, ಡಿಎಆರ್ ಕಛೇರಿ ಆವರಣದಲ್ಲಿ ಗೌರವ ವಂದನೆಗಳನ್ನು ಸ್ವೀಕರಿಸಿ, ಡಿಎಆರ್ ನ ದಾಖಲಾತಿಗಳು, ಪೊಲೀಸ್ ಕ್ಯಾಂಟೀನ್, ಶಸ್ತ್ರಾಗಾರ, ಎ.ಎಸ್.ಸಿ ತಂಡ, ಡಾಗ್ ಸ್ಕ್ವಾಡ್ ಮತ್ತು ಎಂ.ಟಿ ವಿಭಾಗಗಳ ಪರಿವೀಕ್ಷಣೆ ನಡೆಸಿದರು ನಂತರ ಶಿವಮೊಗ್ಗ ಜಿಲ್ಲಾ ಡಿಎಆರ್ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳ ಕುಂದುಕೊರತೆಯನ್ನು ಆಲಿಸಿ, ಉತ್ತಮ ಕರ್ತವ್ಯ ನಿರ್ವಹಿಸುವ ಕುರಿತು ಸಲಹೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಎ.ಜಿ. ಕಾರ್ಯಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಶಿವಮೊಗ್ಗ ಜಿಲ್ಲೆ, ಶ್ರೀ ಪ್ರಶಾಮತ್ ಕುಮಾರ್ ಆರ್.ಪಿ.ಐ ಶಿವಮೊಗ್ಗ ಡಿಎಆರ್, ಯೋಗೇಶ್, ಆರ್.ಪಿ.ಐ ಶಿವಮೊಗ್ಗ ಡಿಎಆರ್ ಮತ್ತು ಡಿಎಆರ್ ಶಿವಮೊಗ್ಗದ ಅಧಿಕಾರಿ ಮತ್ತು ಸಿಬ್ಬಂಧಿಗಳು ಉಪ ಸ್ಥಿತರಿದ್ದರು.