
ಶಿವಮೊಗ್ಗ ನಗರದ ಶುಭ ಮಂಗಳ ಸಮುದಾಯ ಭವನದಲ್ಲಿ ಕೆ ಎಸ್ ಈಶ್ವರಪ್ಪ ಮತ್ತು ಕೆ ಇ ಕಾಂತೇಶ್ ನೇತೃತ್ವದಲ್ಲಿ ಸಾರ್ವಜನಿಕ ಪಡಿಪೂಜೆ ಹಾಗೂ ಶಕ್ತಿಪೂಜೆ ವಿಶೇಷವಾಗಿ ನಡೆಯಿತು. ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ಮಾಲೆ ಧರಿಸಿದ ಅಯ್ಯಪ್ಪ ಸ್ವಾಮಿ ಪಡಿಪೂಜೆ ಹಾಗೂ ಶಕ್ತಿಪೂಜೆ ಪಾಲ್ಗೊಂಡು ಸ್ವಾಮಿಗೆ ವಿಶೇಷ ಭಜನೆ ಮಾಡಿ ಪೂಜೆ ನಡೆಸಿದರು.ನಂತರ ಎಲ್ಲಾ ಅಯ್ಯಪ್ಪ ಮಲಾಧಾರಿಗಳಿಗೂ ಶಕ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಅಯ್ಯಪ್ಪ ಮಾಲಾಧಾರಿಗಳು ಪೂಜೆ ನಡೆಸಿದ ಕೆ ಎಸ್ ಈಶ್ವರಪ್ಪ ಮತ್ತು ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಶರಣು ಕೂಗಿದರು.

ಮಾಜಿ ಉಪ ಮುಖ್ಯಮಂತ್ರಿಯಾದ ಕೆ.ಎಸ್.ಈಶ್ವರಪ್ಪ ,ರಾಷ್ರೀಯ ಅಧ್ಯಕ್ಷರಾದ ಶ್ರೀ ಶೇಖರ್ ,ರಾಷ್ರೀಯ ಅನ್ನದಾನ ಸಮಿತಿ ಸದ್ಯಸರಾದ ಕೆ.ಈ.ಕಾಂತೇಶ್ ,ರಾಜ್ಯಧ್ಯಕ್ಷರಾದ ಡಾ॥ಜಯರಾಮ್, ರಾಜ್ಯ ಪ್ರರ್ಥಾನ ಕಾರ್ಯದರ್ಶಿಯಾದ ಜಯಪ್ರಕಾಶ್, ಜಿಲ್ಲಾಧ್ಯಕ್ಷರಾದ ಕೆ.ಎಸ್.ಸಂತೋಷ್ ಜಿಲ್ಲಾ ಪ್ರಮುಖರಾದ ಮಂಜುನಾಥ,ಶಂಕರ್,ಶಿವಕುಮಾರ್,ಸುರೇಶ್ ಬಾಳೆಗುಂದಿ,ಪ್ರದೀಪ್ ಶ್ರೀಕಾಂತ್ ಮುಂತಾದವರು ಉಪಸ್ಥಿತರಿದ್ದರು.