ಅಪರಾಧ ತಡೆ ಮಾಸಾಚರಣೆ – 2024ರ ಅಂಗವಾಗಿ 28ರಂದು ಶ್ರೀ ತಿರುಮಲೇಶ್ ಪಿಎಸ್ಐ, ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ರವರು, ಶಿವಮೊಗ್ಗ ನಗರದ ಅಕ್ಷರ ವಿಧ್ಯಾಸಂಸ್ಥೆಯಲ್ಲಿ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸದರಿ ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳ ಕುರಿತು ಈ ಕೆಳಕಂಡಂತೆ ಮಾತನಾಡಿರುತ್ತಾರೆ.

1) ಸಂಚಾರ ನಿಯಮವನ್ನು ಪಾಲನೆ ಮಾಡುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿರುತ್ತದೆ ಹಾಗೂ ರಸ್ತೆ ಸುರಕ್ಷತೆ ಮತ್ತು ಅಪಘಾತ ಮುಕ್ತ ಸಮಾಜ ನಿರ್ಮಾಣದಲ್ಲಿ ಪ್ರತೀ ನಾಗರೀಕನ ಪಾತ್ರವು ಪ್ರಮುಖವಾಗಿರುತ್ತದೆ ಹಾಗೂ ಸಂಚಾರ ನಿಯಮಗಳನ್ನು ಗೌರವಿಸುವ ಹಾಗೂ ಕಡ್ಡಾಯವಾಗಿ ಪಾಲನೆ ಮಾಡುವುದರಿಂದ ರಸ್ತೆ ಅಪಘಾತದಿಂದ ದೂರ ಇರಲು ಸಾಧ್ಯವಿರುತ್ತದೆ.

2) ಯಾರೇ ಆಗಲಿ ಹೆಲ್ ಮೆಟ್ ಇಲ್ಲದೇ ದ್ವಿ ಚಕ್ರ ವಾಹನಗಳನ್ನು ಚಾಲನೆ ಮಾಡಬಾರದು. ಒಂದು ವೇಳೆ ರಸ್ತೆ ಅಪಘಾತಗಳು ಸಂಭವಿಸಿದಾಗ ಹೆಲ್ ಮೆಟ್ ಧರಿಸದೇ ಇದ್ದಲ್ಲಿ, ತಲೆಗೆ ತೀರ್ವ ಸ್ವರೂಪದ ಪೆಟ್ಟಾಗಿ ಪ್ರನಪಾಯವಾಗುವ ಸಾಧ್ಯತೆಗಳಿರುತ್ತದೆ. ಆದ್ದರಿಂದ ದ್ವಿ ಚಕ್ರ ವಾಹನ ಸವಾರ ಹಾಗೂ ಹಿಂಬದಿ ಸವಾರ ಇಬ್ಬರೂ ಸಹಾ ಹೆಲ್ ಮೆಟ್ ಧರಿಸಿ. ನಿಮ್ಮ ಸುರಕ್ಷತೆ ನಿಮ್ಮ ಕೈಲಿ ಇರುತ್ತದೆ.

3) ಕಾರ್ ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯವಾಗಿರುತ್ತದೆ. ಕಾರು ಚಾಲಕ ಹಾಗೂ ಕಾರಿನಲ್ಲಿ ಕುಳಿತಿರುವ ಇತರರು ಸಹಾ ಸೀಲ್ಟ್ ಧರಿಸುವುದರಿಂದ ಅಪಘಾತಗಳು ಜರುಗಿದಾಗ ಪ್ರಾಣಾಪಾಯದಿಂದ ಪಾರಾಗ ಬಹುದು.

4) 18 ವರ್ಷ ತುಂಬದ ಮಕ್ಕಳಿಗೆ ವಾಹನ ಚಾಲನೆ ಮಾಡಲು ಅನುವು ಮಾಡಿಕೊಡುವುದು ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಇದರಿಂದ ಅವರ ಪೋಷಕರು / ವಾಹನದ ಮಾಲೀಕರು ಪರಿಣಾಮವನ್ನು ಅನುಭವಿಸುವಂತಾಗುತ್ತದೆ. ಯಾರೇ ಆಗಲಿ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದ್ದೇ ಆದಲ್ಲಿ, ಅಂತಹವರ ವಿರುದ್ಧ ಐಎಂವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ದಂಢ ವಿಧಿಸಿ ಕ್ರಮ ಜರುಗಿಸಲಾಗುತ್ತದೆ. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರು, ವಿಧ್ಯಾರ್ಥಿಗಳು ಹಾಗೂ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.