ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಕಂದಾಯ ಪಾವತಿಸಲು ದಿ: 06-01-2025 ರಿಂದ ಎಲ್ಲಾ ರಜಾ ದಿನಗಳಲ್ಲಿ ಹಾಗೂ ಪ್ರತಿದಿನ ಬೆಳಿಗ್ಗೆ 7 ರಿಂದ ಸಂಜೆ 5.30 ರವರೆಗೆ ಮಂಡಳಿಯ ಕ್ಯಾಷ್‌ಕೌಂಟರ್ ಮತ್ತು ನಗರದ ಸಾರ್ವಜನಿಕರ ಉಪಯೋಗಕ್ಕಾಗಿ ಪ್ರತಿದಿನ ಬೆಳಿಗ್ಗೆ 6 ರಿಂದ ರಾತ್ರಿ 8 ಗಂಟೆವರೆಗೆ ಕೆಳಕಂಡ ಸ್ಥಳಗಳಲ್ಲಿ ಕ್ಯಾಷ್‌ಕೌಂಟರ್ ತೆರೆಯಲಾಗುತ್ತದೆ.
ಗಾಂಧಿಪಾರ್ಕ್ ಆವರಣ, ಫ್ರೀಡಂ ಪಾರ್ಕ್ ಆವರಣ, ರಿವರ್‌ಸೈಡ್ ವಾಕಿಂಗ್ ಪಾಥ್ ಬೆಕ್ಕಿನಕಲ್ಮಠ ಹತ್ತಿರ, ಎಪಿಎಂಸಿ ಆವರಣ, ನೆಹರೂ ಕ್ರೀಡಾಂಗಣ, ಗುಡ್‌ಲಕ್ ಸರ್ಕಲ್, ಗುರುಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೂಳೇಬೈಲ್ ಮಾರಮ್ಮನ ದೇವಸ್ಥಾನ ಇಲ್ಲಿ ಕ್ಯಾಷ್ ಕೌಂಟರ್ ತೆರೆಯಲಾಗಿರುತ್ತದೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬಹುದು. ಹಾಗೂ ತಮ್ಮ ಬಡಾವಣೆ ವ್ಯಾಪ್ತಿಯ ನೀರಿನ ಸಂಬAಧ ದೂರುಗಳಿದ್ದಲ್ಲಿ ದಾಖಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08182-273000 ನ್ನು ಸಂಪರ್ಕಿಸಬಹುದೆAದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.