ಭಾವಸಾರ ವಿಷನ್ ಇಂಡಿಯಾ…
ಶಿವಮೊಗ್ಗ : ಮನುಷ್ಯ ಮನುಷ್ಯನಿಗೆ ಸಹಾಯ ಹಸ್ತ ಚಾಚುವುದು ನಮ್ಮೆಲ್ಲರ ಧರ್ಮವಾಗಿದ್ದು, ಪ್ರತಿಯೊಬ್ಬರೂ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ ಎಂದು ಮೆಟ್ರೋ ಆಸ್ಪತ್ರೆಯ ವೈದ್ಯರಾದ ಡಾ. ಶಂಕರ್ ನವಲೆ ಹೇಳಿದರು. ಭಾವಸಾರ ವಿಜನ್ ಇಂಡಿಯಾ ವತಿಯಿಂದ ನಗರದ ಹಕ್ಕಿಪಿಕ್ಕಿ ಕ್ಯಾಂಪ್ ನಿವಾಸಿಗಳಿಗೆ, ಚಳಿಗಾಲದ ಹಿನ್ನೆಲೆಯಲ್ಲಿ ಹೊದಿಕೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಭಾವಸಾರ ವಿಜನ್ ಇಂಡಿಯಾ ಸಂಸ್ಥೆಯೂ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಈ ವರ್ಷದ ನೂತನ ಸಮಿತಿಯ ಮೊದಲ ಕಾರ್ಯಕ್ರಮ ಹೃದಯಸ್ಪರ್ಶಿಯಾಗಿದೆ ಎಂದರು.
ಚಳಿಗಾಲದಲ್ಲಿ ದೇಹಕ್ಕೆ ವಿವಿಧ ರೀತಿಯ ತೊಂದರೆಗಳಾಗುತ್ತವೆ. ಆದ್ದರಿಂದ ಮುಂಜಾಗ್ರತೆ ತೆಗೆದುಕೊಳ್ಳುವುದು ಅಗತ್ಯವಾಗಿದೆ. ಶೀತ, ನೆಗಡಿ, ಜ್ವರ, ಅಜೀರ್ಣ, ಅಲರ್ಜಿಯಂತ ಸಮಸ್ಯೆಗಳು ಕಂಡುಬರುತ್ತದೆ. ಚಳಿಯ ತೀರ್ವತೆಯಿಂದ ರಕ್ತ ಸಂಚಾರದಲ್ಲಿ ತೊಂದರೆಯಾಗುವ ಸಂದರ್ಭವಿರುವುದು ಪಾರ್ಶ್ವವಾಯು, ಅಧಿಕ ಮಧುಮೇಹ, ಕಡಿಮೆ ರಕ್ತದೊತ್ತಡ, ಹೃದಯಾಘಾತಗಳಾಗುವ ಸಂಭವ ಹೆಚ್ಚಾಗಿರುತ್ತದೆ. ಸ್ವಚ್ಚತೆ ಕಾಪಾಡುವುದು, ಜಂಕ್‍ಫುಡ್‍ಗಳ ಸೇವನೆ ಮಾಡಬೇಡಿ. ಯೋಗ, ಧ್ಯಾನ, ವ್ಯಾಯಾಮ, ನಡಿಗೆಯಂತಹ ದೈಹಿಕ ಚಟುವಟಿಕೆಗಳು ಮಾಡಬೇಕು. ವಿಟಮಿನ್-ಡಿ ಹೊಂದಿರುವ ಸೂರ್ಯನ ಬೆಳೆಕು ಪಡೆಯಬೇಕು.
ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿರ್ವಹಿಸಬಹುದಾಗಿದೆ. ಮಧುಮೇಹ ಹೊಂದಿರುವವರು ತಪ್ಪದೇ ಔಷಧಿಗಳನ್ನು ತೆಗೆದುಕೊಳ್ಳಬೇಕು. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳಿ. ನಿಯಮಿತವಾಗಿ ನೀರು ಕುಡಿಯಿರಿ. ಚಳಿಯಲ್ಲಿ ಸುತ್ತಾಟ ಮಾಡುವುದು ಬೇಡ ಎಂದು ಅನೇಕ ಸಲಹೆಗಳನ್ನು ನೀಡಿದರು. ಮುಂದಿನ ದಿನಗಳಲ್ಲಿ ಬಿವಿಐ ಸಂಸ್ಥೆಯೂ ಮತ್ತಷ್ಟು ಸಮಾಜಮುಖಿ ಕಾರ್ಯಗಳು, ಉದಾತ್ತ ಸೇವೆಗಳ ಮೂಲಕ ಬಡವರ, ಶ್ರಮಿಕರ ಸಹಾಯ ಮಾಡಲಿ ಆಶಿಸಿದರು
ಕಾರ್ಯಕ್ರಮದಲ್ಲಿ ಬಿವಿಐ ಅಧ್ಯಕ್ಷೆ ನಂದಾ ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಬಿವಿಐ ರಾಷ್ಟ್ರೀಯ ಮಾಜಿ ಅಧ್ಯಕ್ಷ ಗಜೇಂದ್ರನಾಥ್ ಮಾಳೋದೆ, ರಾಷ್ಟ್ರೀಯ ಸದಸ್ಯರಾದ ರಮಾನಂದ್, ಉಪಾಧ್ಯಕ್ಷ ಸಚಿನ್, ಕಾರ್ಯದರ್ಶಿ ಸುನಿಲ್ ಗುಜ್ಜರ್, ಖಜಾಂಚಿ ಸ್ವಪ್ನ ಹರೀಶ್, ಲತಾ ಬೇದ್ರೆ, ಅರ್ಚನಾ, ಕೋಮಲ್ ಸುನಿಲ್, ಗೋವಾ ಮೋಹನ್ ಕೃಷ್ಣ ಸೇರಿದಂತೆ ಹಲವರಿದ್ದರು.