ಶಿವಮೊಗ್ಗ ಜಿಲ್ಲಾಡಳಿತ ಮತ್ತು ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಒಂದು ವಿಶೇಷ ಕ್ರೀಡಾ ತರಬೇತಿಯ ಕ್ರೀಡಾ ಸಂಕೀರ್ಣವನ್ನು ಶಿವಮೊಗ್ಗದಲ್ಲಿ ಮಾಡಲಿಚ್ಚಿಸಿರುವುದು ಸ್ವಾಗತಾರ್ಹ.ಆದರೆ ಈ ಯೋಜನೆಯನ್ನು ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ಕ್ಯಾಂಪಸ್ಸಿನ ಸುಮಾರು 25 ಎಕರೆ ಗೂ ಹೆಚ್ಚಿನ ಭೂಮಿಯನ್ನು ಮತ್ತು ಸದ್ಯ ಇರುವ ವಾಣಿಜ್ಯ ಕಾಲೇಜಿನ ಕಟ್ಟಡವನ್ನು ಕ್ರೀಡಾ ಹಾಸ್ಟೆಲ್ ಅನ್ನಾಗಿ ಬಳಸಿಕೊಂಡು ಈ ಯೋಜನೆಯನ್ನು ಮಾಡಲು ವಿಶ್ವವಿದ್ಯಾಲಯಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುವುದು ಖಂಡನೀಯ.ಸಹ್ಯಾದ್ರಿ ಕಾಲೇಜು ಸುಮಾರು 75 ಕ್ಕೂ ಹೆಚ್ಚು ವರ್ಷದ ಇತಿಹಾಸ ಹೊಂದಿರುವ ಕಾಲೇಜಾಗಿದ್ದು ಸದ್ಯ 6000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಜ್ಞಾನ ಕಲಾ ಮತ್ತು ವಾಣಿಜ್ಯ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.ಈ ಯೋಜನೆಗೆ ಸಹ್ಯಾದ್ರಿ ಕ್ರೀಡಾಂಗಣದ ಜಾಗವು ಸೇರಿದಂತೆ 25 ಎಕರೆ ಗೂ ಹೆಚ್ಚಿನ ಜಾಗ ಬೇಕಾಗಿರುವುದರಿಂದ ಮುಂದೆ ಸಹ್ಯಾದ್ರಿ ಕಾಲೇಜಿನ ವಿವಿಧ ಶೈಕ್ಷಣಿಕ ಅಭಿವೃದ್ಧಿ ಚಟುವಟಿಕೆಗಳಿಗೆ ಬೇಕಾದ ಜಾಗದ ಅಭಾವ ಆಗುವ ಸಂಭವವಿದೆ. ಈಗಾಗಲೇ ಇರುವ ವಿದ್ಯಾರ್ಥಿಗಳಿಗೆ ಇನ್ನೂ ಹಲವಾರು ತರಗತಿ ಕೊಠಡಿಗಳ ಅಭಾವವು ಸೇರಿದಂತೆ ಸರಿಯಾದ ಪ್ರಯೋಗಾಲಯಗಳು,ಈಗ ಇರುವ ಸ್ನಾತಕೋತ್ತರ ವಿಷಯಗಳ ತರಗತಿಗಳಿಗೆ ಕೊಠಡಿಗಳು ಸೇರಿದಂತೆ ಇನ್ನೂ ಹಲವಾರು ಕೊರತೆಗಳು ವಿದ್ಯಾರ್ಥಿಗಳನ್ನು ಕಾಡುತ್ತಿವೆ‌.ಇದಷ್ಟೇ ಅಲ್ಲದೇ ಇನ್ನೂ ವಿಜ್ಞಾನ ಮತ್ತು ಕಲಾ ವಿಭಾಗದಲ್ಲಿ ಹಲವಾರು ಸ್ನಾತಕೋತ್ತರ ವಿಷಯದ ವಿಭಾಗಗಳನ್ನು ಆರಂಭಿಸುವ ಅಗತ್ಯತೆ ಇರುವುದರಿಂದ ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಜಾಗದ ಅವಶ್ಯಕತೆ ಇದೆ.ಇದಷ್ಟೇ ಅಲ್ಲದೆ ಕಾಲೇಜಿಗೆ ಅವಶ್ಯಕತೆಯಿರುವ ಬೃಹತ್ ಸಭಾಂಗಣ, ಡಿಜಿಟಲ್ ಲೈಬ್ರರಿ ಅವಶ್ಯಕತೆ ಇನ್ನೂ ಇರುವುದರಿಂದ ಮುಂದಿನ ದಿನಗಳಲ್ಲಿ ಈ ಯೋಜನೆಗಳಿಗೆ ಸಹ ಕ್ಯಾಂಪಸ್ಸಿನ ದೊಡ್ಡಮಟ್ಟದ ಜಾಗ ಬೇಕಾಗಿದೆ.ಇದಷ್ಟೇ ಅಲ್ಲದೇ ಭವಿಷ್ಯದ ಹಲವಾರು ಅಭಿವೃದ್ಧಿ ಯೋಜನೆಗಳ ದೃಷ್ಟಿಯಿಂದ ಕ್ಯಾಂಪಸ್ ನ ಈಗ ಉಳಿದಿರುವ ಜಾಗ ಅಮೂಲ್ಯವಾಗಿದೆ. ಈ ಎಲ್ಲಾ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಈ ಯೋಜನೆಯನ್ನು ವಿರೋಧ ಮಾಡುತ್ತಿರುವುದರಿಂದ ತಾವುಗಳು ಶೀಘ್ರವೇ ಜಿಲ್ಲಾಡಳಿತದಿಂದ ವಿಶ್ವವಿದ್ಯಾಲಯಕ್ಕೆ ಬಂದಿರುವ ಪ್ರಸ್ತಾವನೆಯನ್ನು ತಿರಸ್ಕರಿಸಬೇಕೆಂದು ಮತ್ತು ಸಹ್ಯಾದ್ರಿ ಕ್ಯಾಂಪಸ್ ನಲ್ಲಿ ಈ ಯೋಜನೆಯನ್ನು ಮಾಡಲು ಹೊರಟಿರುವ ಜಿಲ್ಲಾಡಳಿತ ತನ್ನ ಯೋಚನೆ ಕೈ ಬಿಡಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಶಿವಮೊಗ್ಗ ಶಾಖೆಯು ತಮ್ಮನ್ನು ಆಗ್ರಹಿಸುತ್ತದೆ.

LIC policy ಗಾಗಿ ಸಂಪರ್ಕಿಸಿ 9538615354

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153