ನಿಮ್ಮ ಪ್ರತಿಭೆ ನಮ್ಮೂರ ಹೆಮ್ಮೆ -ARUNRAJ SHETTY
NSUI ಭಾರತ ರಾಷ್ಟ್ರೀಯ ವಿದ್ಯಾಥ್ರೀ ಒಕ್ಕೂಟದ ವತಿಯಿಂದ ಸ್ವಾಮಿ ವಿವೇಕಾನಂದ ರವರ ಜನ್ಮ ದಿನಾಚರಣೆ ಆಚರಿಸಿದರು.
ಶಿವಮೊಗ್ಗದಲ್ಲಿ ಕೆಲವು ವರ್ಷಗಳಿಂದ ಸಾವಿರಾರು ಮಕ್ಕಳಿಗೆ ವಿಶೇಷ ಡ್ಯಾನ್ಸ್ ತರಬೇತಿ ನೀಡುತ್ತಿರುವ ಅರುಣ್ ರಾಜ್ ಶೆಟ್ಟಿ ರವರಿಗೆ ನೃತ್ಯ ಕ್ಷೇತ್ರದ ಸಾಧನೆಗೆ ನಿಮ್ಮ ಪ್ರತಿಭೆ ನಮ್ಮೂರ ಹೆಮ್ಮೆ ಎಂಬ ಬಿರುದು ನೀಡಿ ಸನ್ಮಾನಿದರು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ನನಗೆ ನನ್ನ ಸಾಧನೆಯ ಹಾದಿಯಲ್ಲಿ ಜೊತೆ ನಿಂತು ಮತ್ತು ಪ್ರೋತ್ಸಾಹಿಸಿದ ಎಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದ ಎಂದು ತಿಳಿಸಿದರು.ಈ ಸಂದರ್ಭದಲ್ಲಿ NSUI ಮುಖಂಡರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.