ಶಿವಮೊಗ್ಗದ ಕಲ್ಲಗಂಗೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ವಿಶ್ವ ಕಂಡ ಶ್ರೇಷ್ಠ ಸಂತ ಶ್ರೀ ಸ್ವಾಮಿ ವಿವೇಕಾನಂದರ 163ನೇ ವರ್ಷದ ಜಯಂತಿಯನ್ನು ಅಂಗವಾಗಿ ಆಯೋಜಿಸಿದ್ದ “ವಿವೇಕ ಸ್ಪೂರ್ತಿ ಯುವ ಸಮ್ಮೇಳನ” ಕಾರ್ಯಕ್ರಮವನ್ನು ಸಂಸದ ಬಿ ವೈ ರಾಘವೇಂದ್ರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಯುವ ಶಕ್ತಿಯ ನಿರ್ವಿವಾದಿತ ಸಂಕೇತವಾಗಿ ಬೆಳೆದವರು ಸ್ವಾಮಿ ವಿವೇಕಾನಂದರು. ಯುವಕರಲ್ಲಿ ಹುರುಪು – ಹುಮ್ಮಸ್ಸು ತುಂಬಿ, ಅವರ ಸರ್ವೋನ್ನತಿಗೆ ಹೊಸ ಭಾಷ್ಯವನ್ನೇ ಬರೆದವರು ಎಂದರು.

ತೀಕ್ಷ್ಣ ಚಿಂತಕರಾಗಿ, ಯುಕ್ತಿ-ಶಕ್ತಿಯ ಸಂಚಾಲಕರಾಗಿ, ಪರಮ ಗುರುವಿನ ಆರಾಧಕರಾಗಿ, ಸಮಾಜ ಸುಧಾರಕರಾಗಿ, ರಾಷ್ಟ್ರಪ್ರೇಮ ಪ್ರಚೋದಕರಾಗಿ, ದಮನಿತರ ಆಶಾಕಿರಣವಾಗಿ, ಜನಮನದಲ್ಲಿ ಚಿರಸ್ಥಾಯಿಯಾಗಿ ನೆಲೆ ನಿಂತವರು ಶ್ರೀ ಸ್ವಾಮಿ ವಿವೇಕಾನಂದರು ಎಂದರು.

ಇಂತಹ ಮಹಾನ್ ತಪಸ್ವಿಯ ತತ್ವ ಸಿದ್ಧಾಂತ ಮತ್ತು ಆದರ್ಶಗಳನ್ನು ಅಳವಡಿಸಿಕೊಳ್ಳೋಣ, ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಲು ಹಾಗೂ ಉತ್ತಮ ಸಮಾಜ ಕಟ್ಟಲು ನಾವೆಲ್ಲರೂ ಬದ್ಧರಾಗೋಣ ಎಂದು ಆಶಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯ ನಾಯ್ಕ ಮುಂತಾದವರು ಉಪಸ್ಥಿರಿದ್ದರು.

Leave a Reply

Your email address will not be published. Required fields are marked *