“ಅಡಿಕೆ ಕ್ಯಾನ್ಸರ್ ಕಾರಕವಲ್ಲ ಬದಲಾಗಿ ನಮ್ಮ ಸಂಸ್ಕೃತಿ – ಸಂಪ್ರದಾಯ – ಆಚರಣೆಯ ಪ್ರತೀಕ”
ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ(ರಿ.)ದ ವತಿಯಿಂದ ಅಡಿಕೆ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘ(ಆಪ್ಸ್ ಕೋಸ್) ಹಾಗೂ ತೋಟಗಾರ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ(ತೋಟಗಾರ್ಸ್) ಇವರುಗಳ ಸಹಯೋಗದಲ್ಲಿ ಸಾಗರ ಪಟ್ಟಣದ ಸಂತೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಅಡಿಕೆ ಬೆಳೆಗಾರರ ಬೃಹತ್ ಸಮಾವೇಶನ್ನು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ದೇಶಸಿ ಮಾತನಾಡಿದ ಅವರು ದೇಶದಲ್ಲಿಯೇ ಅತಿ ಹೆಚ್ಚು ಅಡಿಕೆ ಬೆಳೆಯುವ ಜಿಲ್ಲೆಯಲ್ಲಿ ಮಲೆನಾಡ ಹೆಬ್ಬಾಗಿಲ ರಾಜಧಾನಿ ನಮ್ಮ ಶಿವಮೊಗ್ಗ ಕೂಡ ಒಂದಾಗಿದೆ. ಜಿಲ್ಲೆಯಲ್ಲಿ ಸುಮಾರು 1.28 ಲಕ್ಷ ಹೆಕ್ಟೇರ್ ಅಡಿಕೆ ಬೆಳೆ ಬೆಳೆಯಲಾಗುತ್ತಿದೆ. ಇದು ಜಿಲ್ಲೆಯ ಆರ್ಥಿಕ ಪ್ರಗತಿಗೆ ಅತಿ ಹೆಚ್ಚಿನ ವೇಗ ನೀಡುತ್ತಿದೆ ಎಂದರು.
ಅಡಿಕೆ ಕೇವಲ ಬೆಳೆಯಲ್ಲ ಅದು ನಮ್ಮ ಬಾಂಧವ್ಯ ಬೆಸೆಯುವು ಸಂಕೇತದ ಜೊತೆಗೆ ಸಂಸ್ಕೃತಿ – ಸಂಪ್ರದಾಯ – ಆಚರಣೆಗಳಲ್ಲಿ ಬಲವಾಗಿ ಬೇರೂರಿದೆ. ಇದರೊಂದಿಗೆ ಮಲೆನಾಡು ಭಾಗದ ಆರ್ಥಿಕತೆಯ ಅವಿಭಾಜ್ಯ ಅಂಗವಾಗಿ ಜಾಗತಿಕವಾಗಿ ಗುರುತಿಸಿಕೊಂಡಿದೆ.
ಇನ್ನೊಂದೆಡೆ ಶಿವಮೊಗ್ಗದ ನೆರೆಹೊರೆಯ ಜಿಲ್ಲೆಗಳಾದ ಚಿಕ್ಕಮಂಗಳೂರು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚಿನ ಅಡಿಕೆ ಬೆಳೆ ಬೆಳೆಯಲಾಗುತ್ತದೆ. ಈ ಜಿಲ್ಲೆಯ ರೈತರ ಕುಟುಂಬಗಳಿಗೆ ಅಡಿಕೆ ಬೆಳೆ ಪ್ರಮುಖ ಆಧಾರಸ್ತಂಭವಾಗಿದೆ.
ಆದರೆ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಇದರಿಂದ ಕ್ಯಾನ್ಸರ್ ಬರುವ ಸಂಭವನಿಯತೆ ಇದೇ ಎಂದು ತಪ್ಪು ಗ್ರಹಿಕೆ ಎಲ್ಲೆಡೆ ಹರಡಿಸಿದ್ದು, ಒಂದು ಅನುಭವಿ ತಂಡದಿಂದ ಕೂಲಂಕಷವಾಗಿ ತನಿಖೆ ನಡೆಸಿ ಲಕ್ಷಾಂತರ ಅಡಿಕೆ ಬೆಳೆಗಾರರ ಹಿತ ಕಾಪಾಡುವ ತುರ್ತು ಎದುರಾಗಿದೆ.
ಈ ನಿಟ್ಟಿನಲ್ಲಿ ಆಲೋಚನೆ ಮಾಡಿ ಅಡಿಕೆ ಬೆಳೆಯುವ ಪ್ರಾಂತ್ಯದ ರೈತರನ್ನು ಒಂದೆಡೆ ಸೇರಿಸಿ ಪ್ರಸ್ತುತ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ಎಳೆ ಎಳೆಯಾಗಿ ಮಾನ್ಯ ಕೇಂದ್ರ ಸಚಿವರ ಸಮ್ಮುಖದಲ್ಲಿ ತೆರೆದಿಟ್ಟು ಶಾಶ್ವತ ಪರಿಹಾರಕ್ಕೆ ಈ ಸಮಾವೇಶದ ಮೂಲಕ ಒತ್ತಾಯಿಸಿದ್ದು ಹೊಸ ಭರವಸೆ ಸಿಕ್ಕಂತಾಗಿದೆ.
ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವಲ್ಲಿ ಸದಾ ಮುಂದು. ಈ ದಿಶೆಯಲ್ಲಿ ನಾವೆಲ್ಲರೂ ಆಲೋಚಿಸಿದಾಗ ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಗಾರರಲ್ಲಿರುವ ಆತಂಕ ಸಂಪೂರ್ಣ ದೂರವಾಗಿ ಹೊಸ ಭರವಸೆಯ ಆಶಾ ಕಿರಣ ಶೀಘ್ರದಲ್ಲೇ ಜಾರಿಯಾಗಲಿದೆ ಎಂದು ಬಲವಾಗಿ ನಂಬಿದ್ದೇನೇ.
ಈ ಸಂದರ್ಭದಲ್ಲಿ ಸಂಸದ ಬಿ ವೈ ರಾಘವೇಂದ್ರ ಹೊರನಾಡು ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಭೀಮೇಶ್ವರ ಜೋಶಿ ಅವರು, ಹಿರಿಯರಾದ ಶ್ರೀ ಕಾಗೋಡು ತಿಮ್ಮಪ್ಪ ಅವರು, ಉಸ್ತುವಾರಿ ಸಚಿವರಾದ ಶ್ರೀ ಮಧು ಬಂಗಾರಪ್ಪ ಅವರು, ಸಂಸದರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಶಾಸಕರಾದ ಶ್ರೀ ಆರಗ ಜ್ಞಾನೇಂದ್ರ ಅವರು, ಶ್ರೀ ಗೋಪಾಲಕೃಷ್ಣ ಬೇಳೂರು ಅವರು, ಪ್ರಮುಖರಾದ ಶ್ರೀ ಹರತಾಳು ಹಾಲಪ್ಪ ಅವರು ಸೇರಿದಂತೆ ಅನೇಕ ಗಣ್ಯಾತಿ ಗಣ್ಯರು ಉಪಸ್ಥಿತರಿದ್ದರು.