ಶಿವಮೊಗ್ಗ : ಎಲ್ ಬಿ ಎಸ್ ನಗರದ 3 ತಿರುವು ನಿವಾಸಿ ಶ್ರೇಯಾ ಎ. ಅವರು ಮಂಡಿಸಿದ ಇಂಡಸ್ಟ್ರಿಯಲ್ ಕೆಮಿಸ್ಟ್ರಿ ವಿಷಯ ಕುರಿತ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ವು ಪಿಹೆಚ್‌ಡಿ ಪದವಿ ನೀಡಿ ಗೌರವಿಸಿದೆ.
ಶ್ರೇಯಾ ಅವರು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕರಾದ ಕೆ.ಬಿ. ಅಶೋಕ ನಾಯ್ಕ ಅವರ ಪುತ್ರಿಯಾಗಿದ್ದಾರೆ. ಶ್ರೇಯಾ ಅವರು ಕುವೆಂಪು ವಿ.ವಿ.ಯ ಇಂಡಸ್ಟ್ರಿಯಲ್ ಕೆಮಿಸ್ಟ್ರಿ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ.ಹೆಚ್.ಎಸ್.ಭೋಜ್ಯಾನಾಯ್ಕ ಅವರ ಮಾರ್ಗದರ್ಶನದಲ್ಲಿ ಶ್ರೇಯಾ ಎ. ರವರು ಮಹಾಪ್ರಬಂಧ ಮಂಡಿಸಿದ್ದರು ಎಂದು ವಿ.ವಿ. ಪ್ರಕಟಣೆಯಲ್ಲಿ ತಿಳಿಸಿದೆ.