ಶಿವಮೊಗ್ಗ ನಗರದ ಗುಂಡಪ್ಪ ಶೆಡ್ ಹಾಗೂ ಮಲೇಶ್ವರ ನಗರದ ನಿವಾಸಿಗಳ ಸಂಘದ ವತಿಯಿಂದ ಅಯೋಧ್ಯೆ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಆಗಿ ಒಂದು ವರ್ಷ ಕಳೆದಿದ್ದು ಇದರ ಅಂದವಾಗಿ ವಾರ್ಷಿಕೋತ್ಸವ ಆಚರಣೆಯನ್ನು ಭಗವತ್ ಧ್ವಜ ಹಾರಿಸುವುದರ ಮುಖಾಂತರ ಪ್ರಭು ಶ್ರೀರಾಮನ ಹಬ್ಬವನ್ನು ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದಂತ ಕೆ ಈ ಕಾಂತೇಶ್ ಧ್ವಜಾರೋಹಣವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳ ಸಂಘದ ಅಧ್ಯಕ್ಷರಾದ ಜೋಡಿಹಕ್ ಪ್ರಕಾಶ್ ಶಿವಾನಂದ್ ಛಾಯಾಗ್ರಹಕ ಮೋಹನ್ ಪರೋಪಕಾರಂ ಶ್ರೀಧರ್ ಅಚ್ಚುತ್ ರಾವ್ ಅಪ್ಪಣ್ಣ ಗಸ್ತಿ ನರಸಿಂಹಮೂರ್ತಿ ಗುರುಮೂರ್ತಿ ಜೋಯಿಸ್ ಕಡೆಮನೆ ಮಾರುತಿ ಹಾಗೂ ಸ್ಥಳೀಯ ಮಹಿಳಾ ಮಣಿಗಳು ಕಾರ್ಯಕ್ರಮದಲ್ಲಿ ಉಪಸ್ಥರಿದ್ದರು.