ಶ್ರೀ ಮಿಥುನ್ ಕುಮಾರ್ ಜಿ. ಕೆ, ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಮತ್ತು ಶ್ರೀ ಕಾರಿಯಪ್ಪ ಎ ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ರವರ ಮಾರ್ಗದರ್ಶನದಲ್ಲಿ, ಶ್ರೀ ಬಾಬು ಆಂಜನಪ್ಪ, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ-ಎ ಉಪ ವಿಭಾಗ ಮತ್ತು ಶ್ರೀ ಸಂಜೀವ್ ಕುಮಾರ್. ಟಿ ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಬಿ ಉಪ ವಿಭಾಗರವರ ಮೇಲ್ವಿಚಾರಣೆಯಲ್ಲಿ, ಶಿವಮೊಗ್ಗ ನಗರದ ಪೊಲೀಸ್ ನಿರೀಕ್ಷಕರು ಹಾಗೂ ಪೊಲೀಸ್ ಉಪ ನಿರೀಕ್ಷಕರವರ ನೇತೃತ್ವದಲ್ಲಿ ಸಿಬ್ಬಂದಿಗಳ ತಂಡವು ಆಯಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿರುವ ಲಾಡ್ಜ್ ಗಳಿಗೆ ಭೇಟಿ ನೀಡಿ, ಲಾಡ್ಜ್ ಗಳಿಗೆ ಬಂದು ತಂಗಿರುವ ಗ್ರಾಹಕರ ಮಾಹಿತಿಯನ್ನು ರಿಜಿಸ್ಟರ್ ನಲ್ಲಿ ನಮೂದು ಮಾಡಿರುವದನ್ನು ಮತ್ತು ಲಾಡ್ಜ್ ಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿರುವ ಬಗ್ಗೆ ಹಾಗೂ ಅವುಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಸುತ್ತಿರುವುದನ್ನು ಮತ್ತು ಕಳೆದ 15 ದಿನಗಳಲ್ಲಿ ಲಾಡ್ಜ್ ಗಳಲ್ಲಿ ಬಂದು ತಂಗಿದ್ದ ಗ್ರಾಹಕರ ಮಾಹಿತಿಯನ್ನು ಪರಿಶೀಲನೆ ಮಾಡಿರುತ್ತಾರೆ.

ಹಾಗೂ ಲಾಡ್ಜ್ ಗಳ ವ್ಯವಸ್ಥಾಪಕರಿಗೆ ಲಾಡ್ಜ್ ಗಳಿಗೆ ಬರುವ ಗ್ರಾಹಕರುಗಳ ಹೆಸರು, ವಿಳಾಸ ಹಾಗೂ ಮೊಬೈಲ್ ನಂಬರ್ ಸೇರಿದತೆ ಸಂಪೂರ್ಣ ಮಾಹಿತಿಯನ್ನು ಪಡೆದು ರಿಜಿಸ್ಟರ್ ನಲ್ಲಿ ನಮೂದು ಮಾಡಲು, ಗ್ರಾಹಕರು ನೀಡುವ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿ ಅವರದ್ದೇ ಮೊಬೈಲ್ ನಂಬರ್ ಎಂದು ಖಚಿತ ಪಡಿಸಿಕೊಳ್ಳಲು, ಗ್ರಾಹಕರ ಐಡಿ ಕಾರ್ಡ್ ನ ಜೆರಾಕ್ಸ್ ಪ್ರತಿಯನ್ನು ಪಡೆಯಲು, ಲಾಡ್ಜ್ ಗೆ ಬರುವ ಗ್ರಾಹಕರ ತಂಗುವ ಉದ್ದೇಶವನ್ನು ಕೇಳಿ ಪಡೆದು ರಿಜಿಸ್ಟರ್ ನಲ್ಲಿ ನೋಂದಾಯಿಸಲು ಮತ್ತು ಗ್ರಾಹಕರುಗಳ ಬಗ್ಗೆ ಯಾವುದೇ ಅನುಮಾನ ಕಂಡು ಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸೂಚನೆಗಳನ್ನು ಸಹಾ ನೀಡಿರುತ್ತಾರೆ.