ದುಬೈ ನಲ್ಲಿ ಫೆಬ್ರವರಿ 5ರಿಂದ 14ನೇ ಅವರಿಗೆ ನಡೆಯಲಿರುವ 16ನೇ ಪಾಜ್ಜಾ ಅಂತರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾರತೀಯ ತಂಡದ ಕೋಚ್ ಆಗಿ ಶ್ರೀ ಆದಿತ್ಯ ಶೆಟ್ಟಿ ಜಿಕೆ ರವರು ಆಯ್ಕೆಯಾಗಿದ್ದಾರೆ.
ಇವರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬೆಂಗಳೂರುನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬಂಟರ ಯಾನೆ ನಾಡವರ ಸಂಘ ಶಿವಮೊಗ್ಗದ ಮಾಜಿ ಅಧ್ಯಕ್ಷರಾದ ಎಸ್ ಕೃಷ್ಣ ಶೆಟ್ಟಿ ರವರ ಪ್ರಥಮ ಪುತ್ರರಾಗಿದ್ದಾರೆ. ಇವರಿಗೆ ಶಿವಮೊಗ್ಗ ಬಂಟರ ಯಾನೆ ನಾಡವರ ಸಂಘದಿಂದ ಶುಭಾಶಯ ಕೋರಿದ್ದಾರೆ.