ಶಿವಮೊಗ್ಗ : ಶ್ರೀರಾಮ ಸೇವಾ ಭಾವಸಾರರ ಸೊಸೈಟಿ ಕೇವಲ ಷೇರು ನೀಡಲಷ್ಟೇ ಸೀಮಿತವಾಗದೆ, ಆರ್ಥಿಕವಾಗಿ ಹಿಂದುಳಿದವರಿಗೆ, ಮಹಿಳೆಯರಿಗೆ ಸಾಲ ನೀಡುವ ಮೂಲಕ ಆರ್ಥಿಕ ಶಕ್ತಿಯಾಗಿ ಬೆಳೆಯಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕಿವಿಮಾತು ಹೇಳಿದರು. ಶ್ರೀ ರಾಮಸೇವಾ ಭಾವಸಾರ ಕ್ಷತ್ರಿಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಯ ನೂತನ ಕೇಂದ್ರ ಕಚೇರಿಯ ಶುಭಾರಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸೊಸೈಟಿ ಬೆಳೆಯಲು ಆರ್ಥಿಕ ಶಕ್ತಿ ಜೊತೆಗೆ ಯುವ ಶಕ್ತಿ ಬಳಸಿಕೊಳ್ಳಿ ಎಂದರು
ಆರ್ಥಿಕವಾಗಿ ಹಿಂದುಳಿದ ಮತ್ತು ಸ್ವಾಭಿಮಾನಿಗಳಾಗಿರುವ ಭಾವಸಾರರು, ಸಮಾಜದಲ್ಲಿ ಮತ್ತಷ್ಟು ಮುನ್ನೆಲೆಗೆ ಬರಬೇಕಿದೆ. ಈ ನಿಟ್ಟಿನಲ್ಲಿ ಅಗತ್ಯವಿರುವವರ ಪರ ಕಾಳಜಿ, ಮನೆ ಬಾಗಿಲಿಗೆ ಸಾಲ ತಲುಪಿಸುವ ಬದ್ಧತೆಯಿಂದಾಗಿ ಸೊಸೈಟಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಾ ಜನರ ನಂಬಿಕೆ ಉಳಿಸಿಕೊಂಡಿದೆ. ಜನರು ವಾಣಿಜ್ಯ ಬ್ಯಾಂಕ್‌ಗಳ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿದ್ದು, ಇದನ್ನು ಸೊಸೈಟಿ ಲಾಭ ಪಡೆದುಕೊಳ್ಳಲು ಅವಕಾಶವಿದೆ. ಭಾವಸಾರ ಸೊಸೈಟಿ ಮತ್ತಷ್ಟು ಅಭಿವೃದ್ಧಿ ಕಾಣಲಿ ಎಂದು ಆಶಿಸಿದರು. ಇದೇ ವೇಳೆ ನಮ್ಮ ತಂದೆ ಬಂಗಾರಪ್ಪನವರ ಜೊತೆಗೆ ಭಾವಸಾರ ಸಮಾಜದವರ ಒಡನಾಟ ಬಹಳವಿತ್ತು ಎಂದು ನೆನೆದರು.
ಈ ವೇಳೆ ಸೊಸೈಟಿಯ ಭದ್ರತಾ ಕೊಠಡಿಯನ್ನು ಶಾಸಕ ಚನ್ನಬಸಪ್ಪ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸೊಸೈಟಿ ಅಧ್ಯಕ್ಷರಾದ ಸಂತೋಷ ಸಾಕ್ರೆ, ಉಪಾಧ್ಯಕ್ಷರಾದ ವಿನಯ್ ತಾಂದಲೆ, ವಿಧಾನ ಪರಿಷತ್ತಿನ ಸದಸ್ಯರಾದ ಬಲ್ಕಿಶ್ ಬಾನು, ಮಾಜಿ ವಿಧಾನ ಪರಿಷತ್ ನ ಸದಸ್ಯರಾದಂತಹ ಪ್ರಸನ್ನ ಕುಮಾರ್, DCC ಬ್ಯಾಂಕ್ ನ ಉಪಾಧ್ಯಕ್ಷರಾದ ಮರಿಯಪ್ಪ, ಭಾವಸಾರ ಯುವ ಪರಿಷತ್ ರಾಜ್ಯ ಅಧ್ಯಕ್ಷ ಅನಂತ್ ಕುಮಾರ್ ಕಾಟೋಕರ್, ಭಾವಸಾರ ಕ್ಷತ್ರಿಯ ಮಹಾಜನ ಸಮಾಜದ ಅಧ್ಯಕ್ಷ ಗಜೇಂದ್ರನಾಥ್, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಜ್ಞಾನೇಶ್ವರ್, ಪ್ರಭು, ಸೇರಿದಂತೆ ಇತರರು ಉಪಸ್ಥಿತರಿದ್ದರು.