ಶಿವಮೊಗ್ಗ ನಗರದಲ್ಲಿ ಮಾದಕ ದ್ರವ್ಯಗಳ ಮಾರಾಟದ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಶಾಶ್ವತಿ ಮಹಿಳಾ ವೇದಿಕೆ ವತಿಯಿಂದ ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್ ರವರಿಗೆ  ಮನವಿ ಸಲ್ಲಿಸಲಾಯಿತು.

ಮಾದಕ ವಸ್ತುಗಳ ದುಶ್ಚಟಕ್ಕೆ ವಿದ್ಯಾರ್ಥಿಗಳು , ಜನ ಸಾಮಾನ್ಯರು ಬಲಿಯಾಗುತ್ತಿದ್ದಾರೆ, ಈ ಮಾದಕ ದ್ರವ್ಯಗಳು ಇತ್ತೀಚೆಗೆ ಜಿಲ್ಲೆ ಮತ್ತು ಪ್ರಮುಖ ಪಟ್ಟಣಗಳಲ್ಲಿ ಸುಲಭವಾಗಿ ದಕ್ಕುತ್ತಿವೆ, ವಿಶೇಷವಾಗಿ ಗಲ್ಲಿ ಗಲ್ಲಿಗಳಲ್ಲೂ ಎಗ್ಗಿಲ್ಲದೆ ಮಾರಾಟವಾಗುತ್ತಿದ್ದು, ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿವೆ ಎಂದು ಮನವಿ ದಾರರು ತಿಳಿಸಿದರು.

ವಿಶೇಷವಾಗಿ ಪ್ರೌಢಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳು ಸುಲಭವಾಗಿ ಸಿಗುವ ಮಾದಕ ದ್ರವ್ಯಗಳಿಗೆ ದಾಸರಾಗುತ್ತಿದ್ದಾರೆ, ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಪೊಲೀಸ್ ಇಲಾಖೆ ತಕ್ಷಣವೇ ಮಾದಕ ದ್ರವ್ಯಗಳ ತಡೆಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಮನವಿ ನೀಡಿದ ಸಂದರ್ಭದಲ್ಲಿ ಶಾಶ್ವತಿ ಮಹಿಳಾ ವೇದಿಕೆಯ ಅಧ್ಯಕ್ಷೆ ಡಾ. ಶಾಂತ ಸುರೇಂದ್ರ, ಪ್ರಮುಖರಾದ ಚಂದ್ರಮತಿ ಹೆಗ್ಗಡೆ, ವಿಜಯಲಕ್ಷ್ಮೀ ಸಿ. ಪಾಟೀಲ್, ಸ್ಟೇಲಾ ಮಾರ್ಟಿನ್, ಅರ್ಚನಾ ನಿರಂಜನ್, ನಂದಿನಿ ಶೆಟ್ಟಿ, ಮೀನಾ , ಶಿಲ್ಪಾ, ಲಲಿತಮ್ಮ, ಸುಗಂಧಿನಿ, ಲೋಲಾ, ಸುಮಾ ಪ್ರಕಾಶ್, ಉಮಾ, ಅನಿತಾಸಿರಿಲ್, ಪದ್ಮಶ್ರೀ, ಸಮಿನಾಕೌಸರ್, ಚೈತ್ರಾ, ದೀಪಾ, ಮಂಜುಳಾ ವಿ ಕೋಟಿ, ಪ್ರಶೀಲಾ, ರೇಣುಕಮ್ಮ, ಜ್ಯೋತಿ ರಿಚರ್ಡ್, ಸಂಧ್ಯಾ, ಮಾಲಾ, ಶಾಂತಾ, ಚಂದ್ರಿಕಾ, ಶಮಿನ್‌ಭಾನು, ದೀಪಾ, ದೀಪಾಮಂಜುನಾಥ್ ಮುಂತಾದವರು ಉಪಸ್ಥಿರಿದ್ದರು.

Leave a Reply

Your email address will not be published. Required fields are marked *