ಗಾಂಧೀಜಿಯವರು ಭಾರತವನ್ನೇ ಪರಿವರ್ತನೆ ಮಾಡಿದ ಮಹಾತ್ಮ ಎಂದು ಗಾಂಧಿ ಎಸ್ ಬಿ ವಾಸುದೇವ ರವರು ಹೇಳಿದರು ಅವರು ಬಹುಮುಖಿ ಯು 47,ನೇ ಕಾರ್ಯಕ್ರಮ, ಪ್ರೆಂಡ್ಸ್ ಸೆಂಟರ್ ನಲ್ಲಿ ಮಾತನಾಡುತ್ತಿದ್ದರು.
ಗಾಂಧಿಯವರು ಒರಿಸ್ಸಾದಲ್ಲಿ ಪ್ರಯಾಣ ಮಾಡುತ್ತಿದ್ದಾಗ ಒಬ್ಬ ದಲಿತ ವ್ಯಕ್ತಿ ಬಾಯಲ್ಲಿ ಹುಲ್ಲು ಕಚ್ಚಿಕೊಂಡು ಗಾಂಧಿ ಯವರ ಕಾಲಿಗೆ ಬಿದ್ದ ಹುಲ್ಲು ಏಕೆ ಕಚ್ಚಿಕೊಂಡು ಇದ್ದಾನೆ ಎಂದು ಪ್ರಶ್ನಿಸಿದಾಗ ದಲಿತರು ಮೇಲುವರ್ಗದವರ ಕಾಲಿಗೆ ಬೀಳುವಾಗ ಈ ರೀತಿ ಮಾಡಲೇಬೇಕಿತ್ತು.ಆಗ ದಲಿತರ ಸಮಸ್ಯೆ ಅರಿತು ಅವರ ಉದ್ದಾರಕ್ಕೆ ಗಾಂಧೀಜಿಯವರು ಪಣ ತೊಟ್ಟು ಮುಂದೆ ಹರಿಜನ ಉದ್ಧಾರ ಕೈಗೊಂಡರು.
ದಲಿತರ ನಂತರ ಮಹಿಳೆಯರ ಉದ್ಧಾರ ಕೈಗೊಂಡರು ಮಹಿಳೆಯರು ಮುಂದೆ ಸಾವಿರ ಗಟ್ಟಲೆ ಭಾಗವಹಿಸಿ ಗಾಂಧಿ ಹೋರಾಟಕ್ಕೆ ಬೆಂಬಲ ನೀಡಿದರು.ಗಾಂಧೀಜಿ ಕಾಯಾ ವಾಚಾ ಮನಸಾ ಅಹಿಂಸಾತ್ಮಕ ಹೋರಾಟ ಮಾಡಿದರು.ಧರ್ಮಗಳ ನಡುವಿನ ಯುದ್ಧದಿಂದ ಭರತಖಂಡ ಅಭಿವೃದ್ಧಿಯಾಗುವುದಿಲ್ಲ, ಎಂದಿದ್ದರು.
ಪ್ರಿಟೋರಿಯಾದಲ್ಲಿ ಗಾಂಧೀಜಿಯವರನ್ನು ಕೈ ಹಿಡಿದು ಎಳೆದು ಹಾಕಿದ್ದರು .ಆದರೆ ಇಂದು ಗಾಂಧಿಯ ಆಳೆತ್ತರದ ಪ್ರತಿಮೆ ಅಲ್ಲಿ ನಿರ್ಮಿಸಲಾಗಿದೆ.ಗಾಂಧಿ ವಿರೋಧಿಯಾಗಿದ್ದ ಚರ್ಚಿಲ್, ಗಾಂಧಿ ಕೊಲೆಯಾದಾಗ ಭಾರತೀಯರು ತಪ್ಪು ಮಾಡಿದ್ದಾರೆ.ಇದು ವಿಶ್ವದ ದುರಂತ ಘಟನೆ ಎಂದಿದ್ದರು.ಆದರೆ ಭಾರತದಲ್ಲಿ ದುರಾತ್ಮರು ಇಂದೂ ಕೂಡ ಗಾಂಧೀಜಿಯನ್ನು ದ್ವೇಷಿಸುತ್ತಾರೆ.ಆದರೆ ಶಿವಮೊಗ್ಗದಲ್ಲಿ ಗಾಂಧಿಯನ್ನು ಅನುಸರಿಸಿದ ನಾಗಪ್ಪ ಶೆಟ್ಟರು ತಮ್ಮ ತಂದೆ ಗಾಂಧಿ ಬಸಪ್ಪನವರು ಗಾಂಧಿ ಮಾರ್ಗದಲ್ಲಿ ನಡೆದವರು ಜೀವಿತದ ಕೊನೆಯವರೆಗೂ ಹಾಗೇ ಬದುಕಿದ್ದರು ಎಂದು ಕೆಲವು ಘಟನೆಗಳನ್ನು ಉದಾಹರಿಸಿದರು.
ಸಮಾಜವಾದಿಗಳು ತ್ಯಾಗ ಜೀವಿಗಳು
ಪುಟ್ಟಯ್ಯ ಪೆರ್ಡೂರು ಮಾತನಾಡಿ ಸಮಾಜವಾದ ಅಂದರೆ ನಿಮ್ಮಲ್ಲಿ 4 ಹಸುಗಳಿದ್ದರೆ ಹಸುಗಳು ಇಲ್ಲದೇ ಇರುವವನಿಗೆ ಒಂದಾದರೂ ಕೊಡು ಎನ್ನುವುದೇ ಸಮಾಜವಾದ ವಾಗಿದೆ.ಅವರು ತ್ಯಾಗ ಜೀವಿಗಳು ಎಂದರು.
ಕರ್ನಾಟಕದಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯ ಗಾಂಧಿ ಜೊತೆ ಇದ್ದು ಸಮಾಜವಾದಿ ತತ್ವ ಅನುಸರಿಸಿದರು.
ಕರ್ನಾಟಕದ ನೂರಾರು ಸಮಾಜವಾದಿಗಳು ಸರ್ವಸ್ವವನ್ನೂ ಕಳೆದುಕೊಂಡು ಹೋರಾಟದಲ್ಲಿ ತೊಡಗಿದ್ದರು.
ಸ್ವಾತಂತ್ರ್ಯ ನಂತರದಲ್ಲಿ ಕಾಗೋಡು ಹೋರಾಟದಿಂದಾಗಿ ಸಮಾಜವಾದಿ ಪಕ್ಷ ಜನಪ್ರಿಯವಾಯಿತು.ಶಾಂತವೇರಿ ಗೋಪಾಲಗೌಡ, ಹೆಚ್.ಗಣಪತಿಯಪ್ಪ, ಗುಬ್ಬಿಗ ಸದಾಶಿವರಾವ್, ಜಾರ್ಜ್ ಫರ್ನಾಂಡಿಸ್ ಉಳ್ಳವರ ವಿರುದ್ಧ ಹೋರಾಟ ಮಾಡಿದರು.
ಗೋಪಾಲಗೌಡರು ಸಾಗರ ಕ್ಷೇತ್ರದಿಂದ ಮೊದಲಬಾರಿಗೆ ಗೆಲ್ಲುತ್ತಾರೆ.ಮತ ನೀಡುವವರು 1 ರೂಪಾಯಿ ಕೊಟ್ಟು ಮತನೀಡಿ ಎಂದು ಕೇಳಿದ್ದರಿಂದ ಚುನಾವಣೆಗೆ ಠೇವಣಿ ಹಣ 250 ರೂಪಾಯಿ ಬಂತು.2ನೇ ಬಾರಿ ಚುನಾವಣೆಯಲ್ಲಿ ಸೋಲುತ್ತಾರೆ 3ನೇ ಬಾರಿ ತೀರ್ಥಹಳ್ಳಿ ಯಿಂದ ಗೆಲ್ಲುತ್ತಾರೆ 4ನೇಬಾರಿ ಗೆದ್ದರೂ ಕೂಡ ಪೂರ್ಣ ಅವಧಿ ಮುಗಿಸದೆ ತೀರಿಸಿಕೊಳ್ಳುತ್ತಾರೆ.ಕಾಯಿಲೆ ಬಂದಾಗ ಔಷದಿ ಕೊಳ್ಳಲು ಹಣ ಇಲ್ಲದೆ ಸೊರಬದಲ್ಲಿ ಆಯುರ್ವೇದ ಔಷಧಿ ಪಡೆದರು ಆದರೆ ಅದು ಫಲಕಾರಿಯಾಗದೆ ತೀರಿಕೊಂಡರು. ಮುಖ್ಯಮಂತ್ರಿಯಾಗಲು ಅವಕಾಶ ಇದ್ದರೂ ಅವರು ತಿರಸ್ಕರಿಸಿದರು ಎಂದು ತಿಳಿಸಿ ಸಮಾಜವಾದದ ಮಹತ್ವ ಹೇಳಿದರು.
ಬಹುಮುಖಿಯ ಕಾಂತೇಶ್ ಕದರಮಂಡಲಗಿ ಸ್ವಾಗತಿಸಿದರು,ಡಾ.ನಾಗಭೂಷಣ್ ವಂದಿಸಿದರು ಡಾ.ಕೆ.ಜಿ.ವೆಂಕಟೇಶ್ ನಿರೂಪಣೆ ಮಾಡಿದರು.