ತೀರ್ಥಹಳ್ಳಿ ತಾಲ್ಲೂಕಿನ ನುಡಿ ದೇವಿಯೆಂದೆ ಸುಪ್ರಸಿದ್ಧವಾದ ಶ್ರೀ ಕ್ಷೇತ್ರ ಹೆಗಲತ್ತಿ ಶ್ರೀನಾಗಯಕ್ಷೆ ದೇವಿ ಹಾಗೂ ನಾಗ, ನವಗ್ರಹ ದೇವರ ಸೇವಾ ಸಮಿತಿ ವತಿಯಿಂದ 11 ನೇ ವರ್ಷದ ವಾರ್ಷಿಕೋತ್ಸವು ಕಲ್ಪನಾ ಸಂತೋಷ್ ನೇತೃತ್ವದಲ್ಲಿ ನಡೆಯಿತು.

ಭೂಮಿತಾಯಿಯ ಶಾಂತಿಗಾಗಿ ಗೋರಕ್ಷಣೆಗಾಗಿ ಆಗಮಿಸಿದ ಮಾಳೂರು ಸೀಮೆ ಶ್ರೀ ಗುತ್ಯಮ್ಮ ಶ್ರೀಕ್ಷೇತ್ರ ಗುತ್ತಿಯಡೆಹಳ್ಳಿ, ಸೋಮವಾರಸಂತೆ ಶ್ರೀ ಗುತ್ಯಮ್ಮ ಶ್ರೀಕ್ಷೇತ್ರ ಸೋಮವಾರಸಂತೆ, ಶ್ರಿಗಾಳಿಮಾರಮ್ಮ ಶ್ರೀಕ್ಷೇತ್ರ ಮಾಳೂರು ಸೀಮೆ, ಶ್ರೀ ಚಾಮುಂಡೇಶ್ವರಿ ಅಮ್ಮನವರು ಶ್ರೀಕ್ಷೇತ್ರ ಅಲಬಳ್ಳಿ, ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು ಶ್ರೀ ಗುತ್ಯಮ್ಮ ದುರ್ಗಮ್ಮ ಅಮ್ಮ ನವರು ಮಂಡಗದ್ದೆ ಸೀಮೆ, ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು ಶ್ರೀಕ್ಷೇತ್ರ ಮೇಗರವಳ್ಳಿ, ಶ್ರೀ ಕುಟ್ಟಗಾರು ಶ್ರೀ ಗುತ್ತಿಯಮ್ಮ ಕುಟ್ಟಗಾರು, ಶ್ರೀ ಕುಮಾರಸ್ವಾಮಿ ದೇವರು ಕಿಗಡಿ ದೇವರ ಪಲ್ಲಕ್ಕೆ ದೇವರ ಸಮಾಗಮ ಹಾಗೂ ಗಣಪತಿ ಹವನ ,ಶತ ಚಂಡಿ ಹವನ ಹಾಗೂ ಶ್ರೀ ನಾಗಯಕ್ಷೆ ಮೂಲ ಮಂತ್ರ ಹವನ,ಆಶ್ಲೇಷ ಬಲಿ,ನವಗ್ರಹ ಹೋಮ,ಸುದರ್ಶನ ಹವನವು ಪರಮ ಪೂಜ್ಯ ಶ್ರೀ ಮಾರುತಿ ಗುರೂಜಿ ರವರು ಹಾಗೂ ಪಾತ್ರಿಗಳಾದ ಶ್ರೀ ಕಲ್ಲನಮ್ಮ ನವರ ದಿವ್ಯ ಉಪಸ್ಥಿತಿಯಲ್ಲಿ ನಡೆದಿದ್ದು ಸಮಸ್ತ ಭಕ್ತರು ಆಗಮಿಸಿ ಪ್ರತಿ ಮನೆಯಿಂದ ಮಡಲಕ್ಕಿ ಯೊಂದಿಗೆ ಆಗಮಿಸಿ ಪಲ್ಲಕ್ಕಿ ಉತ್ಸವವನ್ನು ಕಣ್ಣು ತುಂಬಿಕೊಂಡ ಸಾವಿರಾರು ಭಕ್ತರು ತೀರ್ಥ ಪ್ರಸಾದ ಸ್ವೀಕರಿಸಿದರು .

ಈ ಸಂದರ್ಭದಲ್ಲಿ ಸಿಂಗನಬಿದರೆ ಪಂಚಾಯಿತಿಯ ಸರ್ವರೂ ಹಾಗೂ ಸಮಸ್ತ ಭಕ್ತರ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿರಿದ್ದರು.