
ಶಿವಮೊಗ್ಗ ನಗರದ ಅಶೊಕ ವೃತ್ತ, ನ್ಯೂ ಮಂಡ್ಲಿ, ರಾಜೀವ್ ಗಾಂಧಿ ಬಡಾವಣೆ, ನವರತ್ನ ಪೆಟ್ರೋಲ್ ಬಂಕ್, ವಿನೋಬನಗರ 60 ಅಡಿ ರಸ್ತೆ, ಲಕ್ಷ್ಮಿ ಟಾಕೀಸ್, ರಾಗಿಗುಡ್ಡ, ಕುಂಸಿ ಟೌನ್, ಭದ್ರಾವತಿ ನಗರದ ನಂದಿನಿ ಬೇಕರಿ ವೃತ್ತ, ಮೋಹಿನ್ ಮೊಹಲ್ಲಾ, ಬಾರಂದೂರು, ಹನುಮಂತನಗರ, ಭದ್ರಾವತಿ ಎಂ ಸರ್ಕಲ್, ಹೊಳೆಹೊನ್ನೂರು ಹಕ್ಕಿ ಪಿಕ್ಕಿ ಕ್ಯಾಂಪ್, ತೀರ್ಥಹಳ್ಳಿ ಟೌನ್ ಸಿದ್ದೇಶ್ವರ ಬಡಾವಣೆ, ಬೆಜ್ಜುವಳ್ಳಿ, ಆಗುಂಬೆ, ಸಾಗರ ಟೌನ್ ಪೊಲೀಸ್ ಭವನ, ಶಿಕಾರಿಪುರ ಟೌನ್ ಬಸ್ ನಿಲ್ದಾಣ, ಸೊಬರ ಟೌನ್, ಆನವಟ್ಟಿ ಹೊಸಹಳ್ಳಿ ವೃತ್ತದಲ್ಲಿ , ಶಿವಮೊಗ್ಗ ಎ, ಶಿವಮೊಗ್ಗ ಬಿ, ಭದ್ರಾವತಿ, ಸಾಗರ, ಶಿಕಾರಿಪುರ ಹಾಗೂ ತೀರ್ಥಹಳ್ಳಿ ಉಪ ವಿಭಾಗದ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಆಯಾ ಠಾಣೆಗಳ ಠಾಣಾಧಿಕಾರಿಗಳು ಬ್ರೀಫಿಂಗ್ ಮಾಡಿ ನಿರ್ವಹಿಸಬೇಕಾದ ಕರ್ತವ್ಯಗಳು, ಸುಧಾರಿತ ಗಸ್ತು ವ್ಯವಸ್ಥೆ ಹಾಗೂ ಮೇಲಾಧಿಕಾರಿಗಳ ಸೂಚನೆಗಳ ಬಗ್ಗೆ ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ ಸಂಬಂದಪಟ್ಟ ಪೊಲೀಸ್ ನಿರೀಕ್ಷಕರು / ವೃತ್ತ ನಿರೀಕ್ಷಕರುಗಳು ಉಪಸ್ಥಿತರಿದ್ದರು ಹಾಗೂ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕುಂದುಕೊರತೆಯನ್ನು ಆಲಿಸಲಾಗಿರುತ್ತದೆ.