ತೀರ್ಥಹಳ್ಳಿಯ ಬಿ. ಜೆ. ಪಿ. ಮಹಿಳಾ ಮೋಚ೯ದ ಕಾಯ೯ಕಾರಿಣಿ ಸಭೆಯು ಇ೦ದು ಪಟ್ಟಣದ ಸಾಧನಾಕಾಯಾ೯ಲಯದಲ್ಲಿ ಹಮ್ಮಿಕೊಳ್ಳಲಾಯಿತು. ಸಭೆಯ ಅಧ್ಯಕ್ಷತೆಯನ್ನು ಮಹಿಳಾ ಮೋಚ೯ದ ಅದ್ಯಕ್ಷರಾದ ಶ್ರೀಮತಿ ಸವಿತಾ ಉಮೇಶ್ ರವರು ವಹಿಸಿಕೊಂಡರು. ಉದ್ಘಾಟನೆಯನ್ನು ಮಂಡಲದ ಅಧ್ಯಕ್ಷರಾದ ರಾಘವೇಂದ್ರ ಬಾಳೇಬೈಲುರವರು ನಡೆಸಿಕೊಟ್ಟರು. ಜಿಲ್ಲಾ ಮಹಿಳಾ ಮೋಚ೯ದ ಅದ್ಯಕ್ಷರಾದ ವಿದ್ಯಾ ಲಕ್ಮೀಪತಿಯವರು ಬೈಠಕ್ ನಡೆಸಿಕೊಟ್ಟರು. ಸಂಘಟನೆಯ ಸಲುವಾಗಿ ಶಕ್ತಿಕೇ೦ದ್ರ ಪಂಚಾಯತ್ ಮತ್ತು ಬೂತ್ ಮಟ್ಟದಲ್ಲಿ ಮಾಡಬೇಕಾದ ಸಂಘಟನೆಯ ಬಗ್ಗೆ ತಿಳಿಸಿದರು. ಉದ್ಘಾಟನೆ ಮಾಡಿದ ಮಂಡಲದ ಅಧ್ಯಕ್ಷರು ಮಹಿಳಾ ಮೋಚ೯ದ ಕಾಯ೯ಕ್ರಮ ವೈಖರಿಯ ಬಗ್ಗೆ ಸಂತಸ ವ್ಯಕ್ತಪಡಿಸಿದರು. ದೇಶ ಕಟ್ಟುವ ನಿಟ್ಟಿನಲ್ಲಿ ಮಹಿಳೆಯರಿಗೂ ಸಮನಾದ ಜವಾಬ್ದಾರಿ ಇದೇ ಎಂದರು. ಕೈಮಗ್ಗ ದಿನಾಚರಣೆ ಅಂಗವಾಗಿ ಪಕ್ಷದ ಹಿರಿಯರಾದ ಡಾ.ಕಮ್ಮರವರಿಗೇ ಮಗ್ಗದ ಸೀರೆ ಕೊಡಲಾಯಿತು. ಜಿಲ್ಲಾ ಮಹಿಳಾ ಮೋಚ೯ದ ಪ್ರದಾನ ಕಾರ್ಯದರ್ಶಿ ಗೀತಾ ಶೆಟ್ಟಿ ಮಹಿಳಾ ಮೋಚ೯ ಮುಂದೆ ಮಾಡಬೇಕಾದ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಕಾಯ೯ಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನವೀನ್ ಹೆದ್ದೂರುರವರು ಸಮಯೋಚಿತವಾಗಿ ಮಾತನಾಡಿದರು. ಸಮಾರೋಪ ಬಾಷಣವನ್ನು ಪಕ್ಷದ ಹಿರಿಯರಾದ ನಾಗರಾಜ ಶೆಟ್ಟಿ ನಡೆಸಿಕೊಟ್ಟರು. ಅವರುಹಿಂದೆ ಪಕ್ಷ ಸಂಘಟಿಸಿದ ಅನುಭವವನ್ನು ಹಂಚಿಕೊಂಡರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153