🚩ತ್ರಿಪದಿ ಬ್ರಹ್ಮ ಸಂತ ಸರ್ವಜ್ಞರ ಜಯಂತಿಯ ಶುಭಾಶಯಗಳು🚩
ಕುಂಬಾರ ಬೀದಿಯ ಮಡಿಕೆ ಕೈಗಾರಿಕಾ ಸಹಕಾರ ಸಂಘದ ಆವರಣದಲ್ಲಿ ಸಂತ ಶ್ರೇಷ್ಠ, ಮಾನವ ಶ್ರೇಷ್ಠ, ಸರ್ವಕಾಲಕ್ಕೂ ಸಲ್ಲುವ ದಾರ್ಶನಿಕರಾದ *ಸರ್ವಜ್ಞ* ರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಮುಖ್ಯ ದಿಕ್ಸೂಚಿ ಭಾಷಣಕಾರರಾಗಿ ವೆಟರ್ನರಿ ಆಸ್ಪತ್ರೆ ಉಪನ್ಯಾಸಕರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಬೌದ್ಧಿಕರವರಾದ ಶ್ರೀ ನಾಗಭೂಷಣ ಜೀ ರವರು ಸರ್ವಜ್ಞ ರ ಬಗ್ಗೆ, ಅವರ ತ್ರಿಪದಿಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಸಾಮಾಜಿಕ ಸದ್ಭಾವ ಕಾರ್ಯ ಟೋಳಿಯ ಪ್ರಮುಖರಾದ ವಿಜಯೇಂದ್ರ ಸುಳಿಕೇರಿರವರು, ನಿರಂಜನರವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬಿಜೆಪಿ 30ನೇ ವಾರ್ಡ್ ಅಧ್ಯಕ್ಷರಾದ ಶ್ರೀ ಎಂ ಬಿ ಪ್ರಕಾಶ್, ಶಕ್ತಿ ಕೇಂದ್ರ ಪ್ರಮುಖ್ ಶ್ರೀನಿವಾಸ್ ಸಿಂಗ್ ರವರು, 22ನೇ ವಾರ್ಡಿನ ಅಧ್ಯಕ್ಷರಾದ ಮಂಜುನಾಥ ಕುಂಬಾರರವರು, ಶ್ರೀ ಕುಂಭೇಶ್ವರ ಮಡಿಕೆ ಕೈಗಾರಿಕಾ ಸಹಕಾರ ಸಂಘದ ಮಾಜಿ ಅಧ್ಯಕ್ಷರು ಹಾಲಿ ನಿರ್ದೇಶಕರಾದ HE ತಿಪ್ಪೇಶ್ ರವರು, ನಿರ್ದೇಶಕರಾದ ಬಾವಿಮನೆ ಈಶ್ವರಪ್ಪನವರು, ಪ್ರೇಮಮ್ಮರವರು ಹಾಗೂ ಕುಂಭೇಶ್ವರ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾದ ತಿಪ್ಪೇಸ್ವಾಮಿರವರು, ನಿರ್ದೇಶಕರಾದ ಚಂದ್ರಶೇಖರ ಬಿ.ಎಂ, S ಷಣ್ಮುಖರವರು, ಕುಮಾರಸ್ವಾಮಿರವರು ಹಾಗೂ ಮಾತೆಯರು, ಬಂದು ಮಿತ್ರರು ಭಾಗವಹಿಸಿ ಸರ್ವಜ್ಞರ ಜಯಂತಿಯನ್ನು ಯಶಸ್ವಿಗೊಳಿಸಿದರು.