ಪುನೀತ್ ಡಿ, ಅರವಿಂದ ನಗರ ಶಿವಮೊಗ್ಗ ಇವರು ಐ-ಕಾರ್ನರ್ ಶಿವಮೊಗ್ಗ ಹಾಗೂ ಇತರರ ವಿರುದ್ದ ಸೇವಾ ನ್ಯೂನ್ಯತೆ ಕುರಿತು ದಾಖಲಿಸಿದ್ದ ದೂರನ್ನು ಪುರಸ್ಕರಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಅರ್ಜಿದಾರರಿಗೆ ಸೂಕ್ತ ಪರಿಹಾರ ನೀಡಲು ಆದೇಶಿಸಿದೆ.
ಅರ್ಜಿದಾರರಾದ ಪುನೀತ್ ಡಿ, ಅರವಿಂದ ನಗರ ಶಿವಮೊಗ್ಗ ಇವರು ವಕೀಲರ ಮೂಲಕ 1ನೇ ಎದುರುದಾರ ಮಾಲೀಕರು/ವ್ಯವಸ್ಥಾಪಕರು, ಐಕಾರ್ನರ್, ಕಾರ್ತಿಕ್ ಟೆಕ್ ವರ್ಲ್ಡ್ ಶಾಪ್ ಶಿವಮೊಗ್ಗ, 2ನೇ ಎದುರುದಾರ ಕಸ್ಟಮರ್ ಕಂಪ್ಲೇAಟ್ ಮ್ಯಾನೇಜರ್ ಅಂಡ್ ಇನ್ಫೋರ್ಟರ್, ಯುಬಿಸಿಟಿ ಬೆಂಗಳೂರು ಮತ್ತು ಸರ್ವೀಸ್ ಮ್ಯಾನೇಜರ್, ಅಂಪಲ್ ಟಕ್ನೋಲಜಿಸ್ ಪ್ರೆöÊ.ಲಿ(ಐ-ಕೇರ್), ಮಲ್ಲೇಶ್ವರಂ, ಬೆಂಗಳೂರು ಇವರ ವಿರುದ್ದ ದೂರನ್ನು ಸಲ್ಲಿಸಿ 1ನೇ ಎದುರುದಾರರಿಂದ ದಿ: 28-092021 ರಂದು ಐಫೋನ್ 13.128 ಜಿಬಿ ಮಿಡ್‌ನೈಟ್ ಆಪಲ್ ಮೊಬೈಲನ್ನು ರೂ.79,900 ಪಾವತಿಸಿ ಖರೀದಿಸಿದ್ದು, ತುಂಬಾ ಜಾಗರೂಕತೆಯಿಂದ ಫೋನ್ ಉಪಯೋಗಿಸಿಕೊಂಡು ಬರಲಾಗಿತ್ತು. 2-3 ತಿಂಗಳುಗಳ ಹಿಂದೆ ಮೊಬೈಲ್‌ನ ಡಿಸ್‌ಪ್ಲೇನಲ್ಲಿ ಬಣ್ಣ ಬಣ್ಣದ ಗೆರೆಗಳು ಕಾಣಿಸಿಕೊಂಡಿದ್ದು, ಇದರ ಬಗ್ಗೆ 1ನೇ ಎದುರುದಾರರ ಬಳಿ ತಿಳಿಸಿದರೆ ಫೋನಿನ ಐಓಎಸ್ ಸಾಫ್ಟ್ವೇರ್ ಅಪ್‌ಡೇಟ್ ನಿಂದಾಗಿ ಡಿಸ್‌ಪ್ಲೇ ಹಾಗಳಾಗಿದೆ, 3ನೇ ಎದುರುದಾರರಾದ ಸರ್ವಿಸ್ ಸೆಂಟರ್‌ನ್ನು ಭೇಟಿ ಮಾಡಲು ತಿಳಿಸಿರುತ್ತಾರೆ.


3ನೇ ಎದುರುದಾರರು ಸಹ ಡಿಸ್‌ಪ್ಲೇ ಹಾಗಳಾಗಿದ್ದು ಸರಿಪಡಿಸಲು ರೂ.26,492 ಗಳಾಗುತ್ತದೆ ಎಂದು ಹೇಳಿರುತ್ತಾರೆ. ತಮ್ಮ ಕಂಪನಿಯ ಐಓಎಸ್ ಸಾಫ್ಟ್ವೇರ್ ಅಪ್‌ಡೇಟ್ ಮಾಡಿದಾಗ ಡಿಸ್‌ಪ್ಲೇ ಹಾಳಾಗಿರುವುದರಿಂದ ನಿಮ್ಮ ಖರ್ಚಿನಲ್ಲಿ ಸರಿಪಡಿಸಿ ಎಂದು ಕೇಳಿಕೊಂಡಾಗ ವಿನಾಕಾರಣ ಇಲ್ಲ ಸಲ್ಲದ ಕಾರಣಗಳನ್ನು ಹೇಳಿ ದೂರುದಾರರನ್ನು ಅಲೆಯುವಂತೆ ಮಾಡಿರುತ್ತಾರೆ.
ನಂತರ ದೂರುದಾರರು ವಕೀಲರ ಮೂಲಕ 1 ರಿಂದ 3 ನೇ ಎದುರುದಾರರಿಗೆ ನೋಟಿಸ್ ಜಾರಿಗೊಳಿಸಿ, ಯಾವುದೇ ಪ್ರತ್ಯುತ್ತರ ನೀಡಿರುವುದಿಲ್ಲ ಹಾಗೂ ಡಿಸ್‌ಪ್ಲೇ ಸರಿಮಾಡಿಕೊಡದೇ ಸೇವಾ ನ್ಯೂನತೆ ಮಾಡಿರುತ್ತಾರೆಂದು ಆಯೋಗದ ಮುಂದೆ ದೂರು ಸಲ್ಲಿಸುತ್ತಾರೆ.
ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣ ಪತ್ರ, ದಾಖಲೆಗಳು ಮತ್ತು ವಾದ-ವಿವಾದಗಳನ್ನು ಆಲಿಸಿದ ಆಯೋಗವು ಎದುರುದಾರರು ಸೇವಾ ನ್ಯೂನತೆ ಎಸಗಿದ್ದಾರೆಂದು ತೀರ್ಮಾನಿಸಿ, ದೂರನ್ನು ಪುರಸ್ಕರಿಸಿ 1 ರಿಂದ 3ನೇ ಎದುರುದಾರರು ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ದೂರುದಾರರಿಂದ ಯಾವುದೇ ರೀತಿಯ ಹಣವನ್ನು ಸ್ವೀಕರಿಸದೇ ಆದೇಶವಾದ 45 ದಿಗನಳ ಒಳಗಾಗಿ ಹೊಸ ಡಿಸ್‌ಪ್ಲೇ ಅಳವಡಿಸಿಕೊಡಬೇಕು ಮತ್ತು ಇತರೆ ಸೂಕ್ತ ರಿಪೇರಿ ಮಾಡಿ ಸರಿಪಡಿಸಿಕೊಡಬೇಕು.

ತಪ್ಪಿದಲ್ಲಿ ಎದುರದಾರರ ಜಿಎಸ್‌ಟಿ ಮೊತ್ತವನ್ನು ಕಡಿತಗೊಳಿಸಿ ಮೊಬೈಲ್ ಮೊತ್ತ ರೂ.79,900 ಗಳನ್ನು ಪಾವತಿಸಬೇಕು. ಮಾನಸಿಕ ಹಾನಿಗೆ ರೂ.5000 ಪರಿಹಾರ ಹಾಗೂ ರೂ.5000 ವ್ಯಾಜ್ಯ ಖರ್ಚು ವೆಚ್ಚದ ಬಾಬ್ತಾಗಿ ಪಾವತಿಸಬೇಕು. ತಪ್ಪಿದಲ್ಲಿ ಸದರಿ ಮೊತ್ತಗಳನ್ನು ಪೂರ್ತಿ ಸಂದಾಯ ಮಾಡುವವರೆಗೆ ಶೇ.10 ಬಡ್ಡಿ ಸಹಿತವಾಗಿ ಪಾವತಿಸಬೇಕೆಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಸದಸ್ಯರಾದ ಸವಿತಾ ಬಿ ಪಟ್ಟಣಶೆಟ್ಟಿ, ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಫೆ.14 ರಂದು ಆದೇಶಿಸಿದೆ.

Leave a Reply

Your email address will not be published. Required fields are marked *