
ಶಿವಮೊಗ್ಗ ನಗರದಲ್ಲಿ ಇಂದಿನಿಂದ ನೀರು ಸರಬರಾಜುವಿನಲ್ಲಿ ವ್ಯತ್ಯಾಸವಾಗುವ ಸಾಧ್ಯತೆಯಿದೆ. ರಾಜ್ಯಾದ್ಯಂತ ನೀರು ಗಂಟಿಗಳು ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಮುಂದಾಗಿದ್ದಾರೆ.ರಾಜ್ಯದಲ್ಲಿರುವ ಪಾಲಿಕೆಯ ಹೊರಗುತ್ತಿಗೆ ನೌಕರರ ಸಂಘ ಬೇಡಿಕೆ ಈಡೇರಿಸುವ ವರೆಗೆ ಪ್ರತಿಭಟನೆಗೆ ಕರೆ ನೀಡಿದ ಹಿನ್ನಲೆಯಲ್ಲಿ ನಗರದಲ್ಲಿ ನೀರಿನ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ.
ಶಿವಮೊಗ್ಗದಲ್ಲಿ ನಗರ ಸಭೆಯಿದ್ದಾಗ ಇದ್ದ 116 ಹೊರಗುತ್ತಿಗೆ ನೀರುಗಂಟಿಗಳಿದ್ದರು. ಆಗಿನಿಂದ ಈಗ 24×7 ಯೋಜನೆ ಜಾರಿಯಾದರೂ ಈ ನೀರುಗಂಟಿಗಳು ಹೊರಗುತ್ತಿಗೆಯಲ್ಲಿ ಮುಂದುವರೆದಿದ್ದಾರೆ.
ಇವರನ್ನ ಸರ್ಕಾರದ ನೇರಪಾವತಿ ಮತ್ತು ನೇರನೇಮಕಾತಿ ಅಡಿ ತಾರದೆ ಇವರ ಕೆಲಸದ ಭದ್ರತೆಗಳು ಲೆಡ್ಜರ್ ಗಳಲ್ಲಿ ಉಳಿದಿದೆ. ನ್ತಾಯಾಲಯವು ಸಮಾನ ಕೆಲಸಕ್ಕೆ ಸಮಾನ ವೇತನದ ಅಡಿ 8 ದಿನಗಳ ಕಾಲ ಗಡುವು ನೀಡಿ 2023 ರಲ್ಲೇ ನೀರುಗಂಡಿಗಳ ಸೇವಭದ್ರತೆಯ ಪರವಾಗಿ ಆದೇಶ ನೀಡಿತ್ತು.
ಆದರೆ ಸರ್ಕಾರ ಕ್ರಮಕೈಗೊಂಡಿರಲಿಲ್ಲ. ಯಾವಾಗ ಹೊರಗುತ್ತಿಗೆ ನೌಕರರ ಸಂಘ ಮೇಲ್ಮನವಿ ಸಲ್ಲಿಸಿದಾಗ ಕನಿಷ್ಠ ವೇತನ ನೀಡಿ ನೇರನೇಮಕಾತಿಯನ್ನ ಮಾಡಿಕೊಳ್ಳದೆ ಯಥಾಸ್ಥಿಯನ್ನ ಸರ್ಕಾರ ಮುಂದುವರೆಸಿದಿದೆ. ಕಾರಣ ರಾಜ್ಯಾದಂತ ನೀರುಗಂಟಿಗಳ ಪ್ರತಿಭಟನೆ ನಡೆಯಲಿದ್ದು ಶಿವಮೊಗ್ಗದಲ್ಲೂ ಪ್ರತಿಭಟನೆಯ ಬಿಸಿ ಮುಂದುವರೆಯಲಿದೆ.