ಸಾರ್ವಜನಿಕರ ಹಿತ ದೃಷ್ಠಿಯಿಂದ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ, ರಾತ್ರಿ ವೇಳೆಯಲ್ಲಿ ಗೂಡ್ಸ್ ವಾಹನಗಳು, ಟ್ರಾಕ್ಟರ್ ಮತ್ತು ಭಾರಿ ವಾಹನಗಳ ಗೋಚರತೆಯನ್ನು ಹೆಚ್ಚಿಸುವ ಹಿನ್ನೆಲೆಯಲ್ಲಿ, ಶಿವಮೊಗ್ಗ ಜಿಲ್ಲೆಯಾದ್ಯಂತ ವಾಹನಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್ ಗಳನ್ನು ಅಂಟಿಸುವ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಈ ದಿನಾಂಕಃ 28-02-2025 ರಂದು ಸಂಜೆ ಶ್ರೀ ಮಿಥುನ್ ಕುಮಾರ್ ಜಿ ಕೆ, ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಶಿವಮೊಗ್ಗ ಟೌನ್ ನ ಸಿಮ್ಸ್ ಎದುರು ಬಿ ಹೆಚ್ ರಸ್ತೆಯಲ್ಲಿ 20 ಟ್ರಾಕ್ಟರ್ ಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್ ಗಳನ್ನು ಅಂಟಿಸಿ ಸಾರ್ವಜನಿಕರ ಕುರಿತು ಮಾತನಾಡಿ ಶಿವಮೊಗ್ಗ ಜಿಲ್ಲೆಯಾದ್ಯಂತ ವರದಿಯಾಗುವ ಮಾರಣಾಂತಿಕ ರಸ್ತೆ ಅಫಘಾತಗಳನ್ನು ಪರಿಶೀಲಿಸಿ ನೋಡಲಾಗಿ, ರಾತ್ರಿ ವೇಳೆ ಚಾಲಕರಿಗೆ ಮುಂದೆ ಹೋಗುತ್ತಿರುವ ವಾಹನವು ಸ್ಪಷ್ಟವಾಗಿ ಕಾಣದೆ ಹಿಂದಿನಿಂದ ಅಪಘಾತವಾಗಿ ಮೃತ ಪಟ್ಟಿರುವುದು ಕಂಡು ಬಂದಿರುತ್ತದೆ.

ಆದ್ದರಿಂದ ನೀವು ಕಡ್ಡಾಯವಾಗಿ ನಿಮ್ಮ ವಾಹನಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್ ಗಳನ್ನು ಅಂಟಿಸಿ, ಹೊಸ ಅಪರಾಧಿಕ ಕಾಯ್ದೆಗಳ ಅನ್ವಯ ರಸ್ತೆ ಅಪಘಾತ ಪ್ರಕರಣಗಳಿಗೆ ಶಿಕ್ಷೆ ಪ್ರಮಾಣವನ್ನು ಹೆಚ್ಚಿಸಿದ್ದು, ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣದ ಆರೋಪಿ ಚಾಲಕನಿಗೆ ಕನಿಷ್ಠ 05 ವರ್ಷ ಕಾರಾವಾಸ ಶಿಕ್ಷೆ ಮತ್ತು Hit and Run ಪ್ರಕರಣದಲ್ಲಿ ಕನಿಷ್ಠ 10 ವರ್ಷ ಕಾರಾವಾಸ ಶಿಕ್ಷೆ ವಿಧಿಸಲಾಗುತ್ತದೆ. ಆದ್ದರಿಂದ ವೇಗದ ಮಿತಿಯಲ್ಲಿಯೇ ವಾಹನವನ್ನು ಚಲಾಯಿಸಿ ಮತ್ತು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲನೆ ಮಾಡಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ಸಂತೋಷ್ ಕುಮಾರ್, ಸಿಪಿಐ ಶಿವಮೊಗ್ಗ ಸಂಚಾರ ವೃತ್ತ, ಶ್ರೀ ತಿರುಮಲೇಶ್, ಪಿಎಸ್ಐ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ, ಶ್ರೀಮತಿ ಭಾರತಿ ಪಿಎಸ್ಐ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ, ಶ್ರೀಮತಿ ಸ್ವಪ್ನ ಪಿಎಸ್ಐ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *