
ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಭಾನುವಾರ ‘ಜೆಸಿಐ ಶಿವಮೊಗ್ಗ ಭಾವನ’ ಹಾಗೂ ಜೆಸಿಐ ‘ಶಿವಮೊಗ್ಗ ಚಿರಂತನ’ ಸಂಸ್ಥೆಗಳ ಸಹಭಾಗಿತ್ವದಲ್ಲಿ ಆಯೋಜಿಸಿದ್ದ “ಪರಿಣಾಮಕಾರಿ ಸಾರ್ವಜನಿಕ ಭಾಷಣ ಕಲೆ” ಯ ಒಂದು ದಿನದ ಕಾರ್ಯಾಗಾರವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.
ಮುಖ್ಯ ತರಬೇತುಗಾರರಾಗಿ ವಲಯ ಉಪಾಧ್ಯಕ್ಷರಾದ ಜೇಸಿ ಪ್ರಮೋದ್ ಶಾಸ್ತ್ರಿ ಹಾಗೂ ವಲಯ ಅಧಿಕಾರಿಗಳಾದ ಜೇಸಿ ಮೋಹನ್ ಕಲ್ಪತರು ಯನ್ನು ನಡೆಸಿಕೊಟ್ಟರು. ಹಲವಾರು ಜೇಸಿ ಸದಸ್ಯರುಗಳು, ನಾಗರೀಕರು ಈ ತರಬೇತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ತಮ್ಮ ಬೌದ್ಧಿಕ ಮಟ್ಟವನ್ನು ಹೆಚ್ಚಿಸಿಕೊಳ್ಳುವುದರೊಂದಿಗೆ ಉತ್ತಮ ಭಾಷಣಕಾರರಾಗುವುದು ಹೇಗೆ ಎಂಬ ವಿಷಯದಲ್ಲಿ ಬಹಳಷ್ಟು ಮಾಹಿತಿಯನ್ನು ಪಡೆದರು.
ಜೆಸಿಐ ಶಿವಮೊಗ್ಗ ಚಿರಂತನದ ಅಧ್ಯಕ್ಷರಾದ ರುದ್ರೇಶ್ ಕೋರಿ, ಕಾರ್ಯದರ್ಶಿಯಾದ ಜೆಸಿ ವೈಷ್ಣವಿ ಹಾಗೂ ಜೆಸಿಐ ಶಿವಮೊಗ್ಗ ಭಾವನಾದ ಅಧ್ಯಕ್ಷರಾದ ಜೇಸಿ ರೇಖಾ ರಂಗನಾಥ್ ಹಾಗೂ ಕಾರ್ಯದರ್ಶಿಯಾದ ಜೆಸಿ ಚೈತ್ರ ಸಜ್ಜನ್ ಮತ್ತು ಅನೇಕ ಜೆಸಿ ಸದಸ್ಯರುಗಳು, ಅಧಿಕಾರಿಗಳು ಉಪಸ್ಥಿತರಿದ್ದರು. ಇಂತಹ ತರಬೇತಿ ಕಾರ್ಯಕ್ರಮಗಳು ನಿರಂತರವಾಗಿ ಆಯೋಜನೆಯಾಗಬೇಕು. ಜೇಸಿಐ ಸದಸ್ಯರು, ನಾಗರೀಕರು ಇದರ ಉಪಯೋಗ ಪಡೆದುಕೊಳ್ಳಬೇಕು. ಇದರಿಂದ ಬಹಳಷ್ಟು ಮಾಹಿತಿ ಮತ್ತು ಸಾಧಿಸುವ ಛಲ ವೃದ್ಧಿಯಾಗುತ್ತದೆ ಎಂಬ ಅಭಿಪ್ರಾಯವನ್ನು ಜೆಸಿಐ ಭಾವನಾದ ಉಪಾಧ್ಯಕ್ಷೆ ಜೇಸಿ ಸುಭಿಕ್ಷ ಎಂ. ಭಾರದ್ವಾಜ್ ರವರು ವ್ಯಕ್ತಪಡಿಸಿದ್ದಾರೆ.