ಸಂಕಷ್ಟದ 2 ವರ್ಷಗಳಲ್ಲಿ ಆಸ್ತಿ ತೆರಿಗೆ ಹೆಚ್ಚಳ ರಿಯಾಯಿತಿ ನೀಡಿದ ಸರ್ಕಾರ ಕೋವಿಡ್ ಸಂಕಷ್ಟದ 2020-21 ನೇ ಸಾಲಿನಲ್ಲಿ ಶೇಕಡಾ 15 ರಷ್ಟು ಹೆಚ್ಚಳ , 2021-22 ಕ್ಕೆ ವಿಪರೀತ ತೆರಿಗೆ ಹೆಚ್ಚಳ, ಮಾನವೀಯತೆಯ ಆಧಾರದ ಮೇಲೆ ಆಂಧ್ರ ,ತೆಲಂಗಾಣ, ಗುಜರಾತ್ ಮುಂತಾದ ಸರ್ಕಾರಗಳಂತೆ ತೆರಿಗೆ ವಿನಾಯಿತಿಯನ್ನು ನಮ್ಮ ರಾಜ್ಯ ಸರ್ಕಾರವು ಯಾಕೆ ನೀಡುತ್ತಿಲ್ಲ. 2005-06 ರ ಎಸ್ ,ಆರ್ ದರದಿಂದ ನಿರ್ಧರಿಸುವ ಆಸ್ತಿ ಮೌಲ್ಯದ ಶೇಕಡಾ 50 ರ ಮೇಲೆ ತೆರಿಗೆ ವಿಧಿಸಿ ನಂತರ ಪ್ರತಿ 3ವರ್ಷಗಳಿಗೊಮ್ಮೆ ಶೇಕಡಾ 15 ರಷ್ಟು ತೆರಿಗೆ ಹೆಚ್ಚಳ ಮಾಡಲಾಗುತ್ತಿತ್ತು. ಖಾಲಿ ನಿವೇಶನಗಳಿಗೆ ಚದುರ ಅಡಿ ಆಧಾರವಾಗಿ 3 ಸ್ಲಾಬ್ ಗಳಲ್ಲಿ ತೆರಿಗೆ ಹಾಕಲಾಗುತ್ತಿತ್ತು. ಸಂಕಷ್ಟದ ವರ್ಷ 2021-22 ರಲ್ಲಿ 2005-06 ರ ಎಸ್, ಆರ್ ದರದ ಬದಲಿಗೆ 2018-19ರ ಎಸ್, ಆರ್ ದರ ಆಧರಿಸಿ ಆಸ್ತಿ ತೆರಿಗೆ ವಿಧಿಸುತ್ತಿರುವುದು ಹಾಗೂ ಮನೆ ಸುತ್ತ ಖಾಲಿ ಇರುವ ಜಾಗಕ್ಕೂ ತೆರಿಗೆ ವಿಧಿಸದಿರುವುದು ಆಸ್ತಿ ತೆರಿಗೆ ಹೆಚ್ಚಳಕ್ಕೆ ಕಾರಣ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153