
ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ ಬ್ರಹ್ಮಾವರದ ಹೋಟೆಲ್ ಆಶ್ರಯದಲ್ಲಿ 24ನೇ ಕನ್ ಕೋರ್ಸ್ ವಿಶೇಷ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಶಿವಮೊಗ್ಗ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷರು ನಾಗರಿಕ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ಡಾ ಸತೀಶ್ ಕುಮಾರ್ ಶೆಟ್ಟಿ ರವರಿಗೆ RESPONSIBLE AND ACTIVE CITIZEN NATIONAL AWARD ಲಭಿಸಿದೆ.
ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ವತಿಯಿಂದ ಪ್ರಶಸ್ತಿ ಪುರಸ್ಕೃತರಾದ ಡಾ ಸತೀಶ್ ಕುಮಾರ್ ಶೆಟ್ಟಿ ರವರಿಗೆ ಅಭಿನಂದಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ದಯಾನಂದ್ ಕಾರ್ಯದರ್ಶಿ ಪ್ರಭಾಕರ್ ಖಜಾಂಚಿ ಮಡಿವಾಳ ಬಸವರಾಜ್ ಮೃತ್ಯುಂಜಯ ಹಿರೇಮಠ ರಂಗಪ್ಪ ತಿಪ್ಪೇಸ್ವಾಮಿ ಪ್ರಕಾಶ್ ಬಾಬು ಬಾಲಕೃಷ್ಣ ರಾವ್ ಸುರೇಶ್ ಗುರುರಾಜ್ ಭಾಗ್ಯ ತಾರಾದೇವಿ ಮುಂತಾದವರು ಉಪಸ್ಥಿರಿದ್ದರು.