ನಮ್ಮ ಪಕ್ಕದ ಕುತಂತ್ರಿ ದೇಶ ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂಗಳ ಹಾಗೂ ಹಿಂದು ದೇವಾಲಯಗಳ ಮೇಲೆ ನಿರಂತರ ದೌರ್ಜನ್ಯ ಎಸಗುತ್ತಿರುವ ಪಾಪಿ ಪಾಕಿಸ್ತಾನ ಇತ್ತೀಚೆಗೆ ಗಣಪತಿ ದೇವಾಲಯದ ಮೇಲೆ ನೂರಾರು ದುಷ್ಕರ್ಮಿಗಳು ಮುತ್ತಿಗೆ ಹಾಕಿ ದೇವಸ್ಥಾನವನ್ನು ಧ್ವಂಸ ಮಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕಾ ಹಾಗೂ ಟಿ.ವಿ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುತ್ತದೆ.ಇವತ್ತಿನ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಆರ್ಥಿಕವಾಗಿ ಬೀದಿಗೆ ಬಿದ್ದಿದ್ದು ನೆರೆಯ ನಯವಂಚಕ ಚೀನಾ ನಮ್ಮ ದೇಶದ ಮೇಲೆ ಪಾಕಿಸ್ತಾನವನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ ಎಂದು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ರಾಜಕೀಯ ವಿಶ್ಲೇಷಕರು ಮತ್ತು ತಜ್ಞರು ಪತ್ರಿಕೆಗಳಲ್ಲಿ ಹಾಗೂ ಟಿವಿಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಪಾಪಿ ಪಾಕಿಸ್ತಾನವು 75ನೇ ಸ್ವಾತಂತ್ರೋತ್ಸವದಲ್ಲಿರುವ ಭಾರತ ದೇಶದಲ್ಲಿ ನಮ್ಮ ನಮ್ಮಲ್ಲಿ ಭಾವೈಕ್ಯತೆ ಹಾಗೂ ಸಾಮರಸ್ಯವನ್ನು ಕೆಡಿಸುವ ಕೆಲಸವನ್ನು ಪಾಕಿಸ್ತಾನ ಹಾಗೂ ಚೀನಾ ಎರಡೂ ದೇಶಗಳು ಮಾಡುತ್ತಿವೆ.ಭಾರತ ದೇಶವು ವಿವಿಧತೆಯಲ್ಲಿ ಏಕತೆಯನ್ನುಬ ಒಳಗೊಂಡಿರುವ ಎಲ್ಲಾ ಧರ್ಮ ಜಾತಿಗಳನ್ನು ಪ್ರೀತಿಸುವ ಗೌರವಿಸುವ ಪ್ರಪಂಚದ ಏಕೈಕ ರಾಷ್ಟ್ರ ನಮ್ಮದು ಎಂದು ಹೇಳುವಲ್ಲಿ ಭಾರತೀಯರಾದ ನಮಗೆ ಹೆಮ್ಮೆ ಇದೆ ಭಾರತದಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತ ಜೈನ ಪಾರ್ಸಿ ಎಲ್ಲಾ ಧರ್ಮದವರೂ ಸಹೋದರರಂತೆ ಭಾವೈಕ್ಯತೆಯಿಂದ ಮೇಲು ಕೀಳು ಎನ್ನದೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಎಲ್ಲರಿಗೂ ಸಮಬಾಳು ಸಮಪಾಲು ಎನ್ನುವಂತಹ ವಿಚಾರ 12ನೇ ಶತಮಾನದ ವಿಶ್ವಗುರು ಬಸವಣ್ಣರಿಂದ ಈಗಿನ ವಿಶ್ವದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರೂಪಿಸಿದ ಅತ್ಯುತ್ತಮ ಸಂವಿಧಾನ ಇದೆ ಇಡೀ ಜಗತ್ತಿಗೆ ಶಾಂತಿ ಸಂದೇಶವನ್ನು ಸಾರಿದ ಮಹಾತ್ಮ ಗಾಂಧೀಜಿಯವರ ಚಿಂತನೆಗಳು ವ್ಯಕ್ತಿಯೊಬ್ಬ ಭಾರತೀಯರ ರಕ್ತದ ಕಣಕಣದಲ್ಲಿ ಶತ್ರುದೇಶಗಳ ಯಾವುದೇ ಕುತಂತ್ರ ಇಲ್ಲಿ ನಡೆಯುವುದಿಲ್ಲ ಅದೇ ರೀತಿ ನಮ್ಮ ದೇಶದಲ್ಲಿ ಬಿಹಾರ ರಾಜ್ಯದ ಒಂದು ಕುಗ್ರಾಮದಲ್ಲಿ 150 ವರ್ಷದಿಂದ ಹಿಂದೂಗಳು ಮಸೀದಿ ನಿರ್ವಹಣೆ ಮಾಡುತ್ತಿದ್ದು 150 ವರ್ಷದ ಹಿಂದೆ ಆ ಗ್ರಾಮದಲ್ಲಿ ಮುಸ್ಲಿಮರು ಇದ್ದರೂ ನಂತರದ ದಿನದಲ್ಲಿ ಬರಗಾಲ ಹಾಗೂ ಸಿಡುಬು ಕೋಲಾರಗಳಂತಹ ಮಾರಕ ರೋಗ ವ್ಯಾಧಿಗಳಿಂದ ಮುಸ್ಲಮರನ್ನು ಆ ಗ್ರಾಮದಲ್ಲಿ ಇರುವುದಿಲ್ಲ. ಆದರೂ ಕೂಡ ಅಲ್ಲಿನ ಗ್ರಾಮಸ್ಥರ ಇಲ್ಲಿ ತನಕ ಮಸೀದಿಯನ್ನು ಸುರಕ್ಷಿತವಾಗಿ ಕಾಪಾಡಿಕೊಂಡು ಬಂದಿರುತ್ತಾರೆ ಅದೇ ರೀತಿ ನಮ್ಮ ಕರ್ನಾಟಕದಲ್ಲಿ ಮೊಹರಂ ಮತ್ತು ಗಣೇಶ ಹಬ್ಬಗಳಲ್ಲಿ ಹಿಂದೂ ಮುಸ್ಲಿಂ ಧರ್ಮದವರು ಭಾವೆಕ್ಯತೆಯಿಂದ ಸೋದರರಂತೆ ಜತೆಗೂಡಿ ಹಬ್ಬ ಆಚರಿಸಿಕೊಂಡು ಬಂದಿರುತ್ತೇವೆ ಇಂತಹ ಸಾವಿರಾರು ಉದಾಹರಣೆಗಳು ನಮ್ಮ ದೇಶದಲ್ಲಿವೆ ಆದ್ದರಿಂದ ಪಾಕಿಸ್ತಾನ ಮತ್ತು ಚೀನಾ ದೇಶದವರಿಗೆ ವಿಶ್ವ ಜಾಗತಿಕ ಮಟ್ಟದಲ್ಲಿ ಕೇಂದ್ರ ಸರ್ಕಾರ ವಿಶ್ವಸಂಸ್ಥೆಯ ಮೂಲಕ ಪಾಕಿಸ್ತಾನಕ್ಕೆ ಎಚ್ಚರಿಕೆಯನ್ನೂ ನೀಡಬೇಕು ಹಾಗೆಯೇ ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳಿಗೆ ಹಾಗೂ 357 ಹಿಂದೂ ದೇವಸ್ಥಾನಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ತಿಳಿಸುತ್ತಾರೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ