ಭಾರತ ಸರ್ಕಾರ ,ಯುವ ವ್ಯವಾರ ಮತ್ತು ಕ್ರೀಡಾ ಸಚಿವಾಲಯ ಶಿವಮೊಗ್ಗ ,ಮೈ ಭಾರತ್ ಶಿವಮೊಗ್ಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಶಿವಮೊಗ್ಗ ಹಾಗೂ ಇನ್ನೋವೇಟರ್ ಯೂಥ್ ಕ್ಲಬ್ ಶಿವಮೊಗ್ಗ ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟ 2024-25 ನೆಹರು ಕ್ರೀಡಾಂಗಣದಲ್ಲಿ ನಡೆಯಿತು.

ಈ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಗುಂಪು ಸ್ಪರ್ಧೆಯಲ್ಲಿ ಪುರುಷರಿಗೆ ವಾಲಿಬಾಲ್ ಹಾಗೂ ಮಹಿಳೆಯರಿಗೆ ಖೋ ಖೋ ಮತ್ತು ವೈಯಕ್ತಿಕ ಸ್ಪರ್ಧೆಯಲ್ಲಿ ಗುಂಡು ಎಸೆತ ಮತ್ತು 100 ಮೀಟರ್ ಓಟದ ಸ್ಪರ್ಧೆ ಹಾಗೂ ಬ್ಯಾಟ್ಮಿಟನ್ ಕ್ರೀಡೆಗಳನ್ನು ಆಯೋಜನೆ ಮಾಡಲಾಗಿತ್ತು.

ತಾಲ್ಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ವಿಜೇತರಾದವರು ಜಿಲ್ಲಾ ಮಟ್ಟದಲ್ಲಿ ಭಾಗವಸಿದ್ದರು. ಕಾರ್ಯಕ್ರಮಕ್ಕೆ ಶಿವಮೊಗ್ಗ ನಗರದ ಶಾಸಕರಾದ ಚನ್ನಬಸಪ್ಪ ರವರು ಆಗಮಿಸಿ ಕ್ರೀಡಾಪಟುಗಳಿಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಎ ಎಸ್ ಪಿ ಅನಿಲ್ ಕುಮಾರ್ ,ಎಸ್ ಭೂಮರೆಡ್ಡಿ ಹಾಗೂ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಗಳಾದ ಉಲ್ಲಾಸ್ ಕೆ ಟಿ ಕೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರೇಖ್ಯಾನಾಯಕ್ ,ನೆಹರು ಯುವ ಕೇಂದ್ರದ ಸಲಹಾ ಸಮಿತಿ ಸದಸ್ಯರಾದ ಇಮ್ರಾನ್, ಇನ್ನೋವೇಟರ್ ಯೂತ್ ಕ್ಲಬ್ ಶೇಕ್ ಅಸೇನ್ ಕಾರ್ಯದರ್ಶಿಗಳಾದ ವೇಣುಗೋಪಾಲ್ ಹಾಗೂ ಸದಸ್ಯರಾದ ಕಿರಣ. ಹೇಮಂತ್ ಮುಂತಾದವರು ಉಪಸ್ಥಿತರಿದ್ದರು.ವಿಜೇತರಿಗೆ ಪ್ರಮಾಣ ಪತ್ರ ,ಪಾರಿತೋಷಿಕ ಕೊಡಲಾಯಿತು.