ಶ್ರೀ ಪರಮೇಶ್ವರ ಎಂ ಎಸ್, 65 ವರ್ಷ, ದೊಡ್ಡಮನೆ ಮತ್ತಿ ಕೈ ಗ್ರಾಮ ನಗರ ರವರು ತಮ್ಮ ಸಂಬಂಧಿಕರ ಮನೆಗೆ ಕಾರ್ಯಕ್ರಮಕ್ಕೆಂದು ತೆರಳಿದ್ದು, ಕಾರ್ಯಕ್ರಮ ಮುಗಿಸಿ ವಾಪಸ್ ಮನೆಗೆ ಬಂದು ನೋಡಿದಾಗ ಕಳ್ಳರು ಮನೆಯ ಬಲ ಭಾಗದ ಮರದ ಬಾಗಿಲನ್ನು ತೆಗೆದು ಒಳ ಪ್ರವೇಶಿಸಿ ಮನೆಯ ಬೆಡ್ರೂಮಿನ ಕಪಾಟಿನಲ್ಲಿದ್ದ ಸುಮಾರು 12 ಗ್ರಾಂ ತೂಕದ ಚಿನ್ನದ ಸರ ಹಾಗೂ ರೂ 15,000/- ನಗದು ಹಣ ವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ನೀಡಿದ ದೂರಿನ ಮೇರೆಗೆ ನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0009/2025 ಕಲಂ 331 (3), 305,(a) BNS ಕಾಯ್ದೆ ರೀತಿಯ ಪ್ರಕರಣ ದಾಖಲಿಸಿ ಕೊಳ್ಳಲಾಗಿರುತ್ತದೆ.

ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆಗಾಗಿ ಶ್ರೀ ಮಿಥುನ್ ಕುಮಾರ್ ಜಿ. ಕೆ. ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಶ್ರೀ ಅನಿಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು -1 ಶಿವಮೊಗ್ಗ ಜಿಲ್ಲೆ, ಶ್ರೀ ಕಾರಿಯಪ್ಪ ಎ. ಜಿ. ಹೆಚ್ಚುವರಿ ಪೋಲಿಸ್ ಅಧೀಕ್ಷಕರು -2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಶ್ರೀ ಅರವಿಂದ್ ಎನ್ ಕಲಗುಚ್ಚಿ ಪೋಲಿಸ್ ಉಪಾದೀಕ್ಷಕರು ತೀರ್ಥಹಳ್ಳಿ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ ಶ್ರೀ ಗುರಣ್ಣ ಹೆಬ್ಬಾರ್ ಪೊಲೀಸ್ ವೃತ್ತ ನಿರೀಕ್ಷಕರು ಹೊಸನಗರ ವೃತ್ತ ರವರ ನೇತೃತ್ವದಲ್ಲಿ ಶ್ರೀ ಶಿವಾನಂದ ವೈ. ಕೆ. ಪಿಎಸ್ಐ ನಗರ ಪೊಲೀಸ್ ಠಾಣೆ, ಕುಮಾರ್ ಟಿ ಎ ಎಸ್ ಐ, ಶ್ರೀ ಶೇಕ್ ಅಮೀರ್ ಜಾನ್ ಎಎಸ್ಐ ಹಾಗೂ ಸಿಬ್ಬಂದಿಗಳಾದ ಹೆಚ್. ಸಿ. ಶ್ರೀ ಕಿರಣ್, ಶ್ರೀ ವಿಶ್ವನಾಥ್, ಶ್ರೀ ಪ್ರವೀಣ್ ಕುಮಾರ್, ಶ್ರೀ ವಿಶ್ವನಾಥ್, ಸಿಪಿಸಿ ರವರಾದ ಶ್ರೀ ರವಿಚಂದ್ರ, ಶ್ರೀ ಸುಜಯ್ ಕುಮಾರ್, ಶ್ರೀ ಪ್ರಜ್ವಲ್ ಡಿ ಎಸ್ ಮತ್ತು ಸಚಿನ್ ರವರನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ ಸದರಿ ತನಿಖಾ ತಂಡವು ದಿನಾಂಕ 20-03-2025 ರಂದು ಪ್ರಕರಣದ ಆರೋಪಿತನಾದ ಕೆ ಆರ್ ಶರತ್ ಕುಮಾರ್, 26 ವರ್ಷ, ಜೀಪ್ ಚಾಲಕ ವೃತ್ತಿ, ಕಟ್ಟಿನಹೊಳೆ ಗ್ರಾಮ, ಮತ್ತಿ ಕೈ, ಹೊಸನಗರ ಈತನನ್ನು ದಸ್ತಗಿರಿ ಮಾಡಿ ಸದರಿ ಆರೋಪಿತನಿಂದ ಮೇಲ್ಕಂಡ ಪ್ರಕರಣಕ್ಕೆ ಸಂಬಂಧಿಸಿದ ಅಂದಾಜು ಮೌಲ್ಯ 1,00,000/- ರೂಗಳ 12 ಗ್ರಾಂ ಚಿನ್ನದ ಸರ ಹಾಗೂ ಅಂದಾಜು 65,000/- ರೂ ಮೌಲ್ಯದ ಕಳ್ಳತನಕ್ಕೆ ಬಳಸಿದ ಒಂದು ದ್ವಿಚಕ್ರವಾಹನ ವನ್ನು ಅಮಾನತ್ತು ಪಡಿಸಿಕೊಂಡು ಆರೋಪಿತನನ್ನು ಘನ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೋಲಿಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಪ್ರಶಂಶಿಸಿ ಅಭಿನಂದಿಸಿರುತ್ತಾರೆ.