ನಗರದ ಕ್ರೀಡಾಸಕ್ತರ ಮನವಿಗೆ ಸ್ಪಂದಿಸಿದ ಮಧು ಬಂಗಾರಪ್ಪ,: ಕ್ರೀಡಾ ಇಲಾಖೆಯ ಆಯುಕ್ತರ ಭೇಟಿ ಸ್ಥಳ ಪರಿಶೀಲನೆ .

ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್, ಮಧು ಬಂಗಾರಪ್ಪನವರು ಇತ್ತೀಚಿಗೆ ನೆಹರು ಕ್ರೀಡಾಂಗಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶಿವಮೊಗ್ಗ ನಗರದ ಕ್ರೀಡಾಪಟುಗಳು ಹಾಗೂ ಕ್ರೀಡಾಸಕ್ತರು ನಗರದ ಕ್ರೀಡಾ ಚಟುವಟಿಕೆಗೆ ಇನ್ನು ಹೆಚ್ಚಿನ ಅನುಕೂಲ ಕಲ್ಪಿಸುವಂತೆ ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದರು.ಅದರಂತೆ ಇಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಆಯುಕ್ತರಾದ ಆರ್, ಚೇತನ್ ರವರು ಶಿವಮೊಗ್ಗ ಜಿಲ್ಲಾಧಿಕಾರಿಗಳಾದ ಗುರುದúತ್ತ ಹೆಗಡೆಯವರೊಂದಿಗೆ ನಗರದ ನೆಹರು ಕ್ರೀಡಾಂಗಣ, ಗೋಪಾಲಗೌಡ ಬಡಾವಣೆಯ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಹಾಗೂ ಗೋಪಾಲಗೌಡ ಬಡಾವಣೆಯ ,"ಡಿ ಬ್ಲಾಕ್ ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶ್ರೀ ಎಸ್ ಬಂಗಾರಪ್ಪ ಇಂಡೋರ್ ಶಟಲ್ ಕೋರ್ಟ್ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಎಸ್, ಬಂಗಾರಪ್ಪನವರ ಹೆಸರಿನಲ್ಲಿ ನಿರ್ಮಿಸಲಾಗುತ್ತಿರುವ ಇಂಡೋರ್ ಶಟಲ್ ಕೋರ್ಟ್ ಅನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಿಸ ಬೇಕಾಗಿದ್ದು ಈಗ ಮಂಜೂರಾಗಿರುವ ಒಂದು ಕೋಟಿ ಹಣ ಕೊರತೆಯಾಗುವುದರಿಂದ ಹೆಚ್ಚುವರಿ ಇನ್ನೂ ಒಂದು ಕೋಟಿ ಹಣವನ್ನು ತಾವೇ ಇಲಾಖೆಯಿಂದ ಭರಿಸಲು ಸಮ್ಮತಿಸಿದ್ದು ಉತ್ತಮ ಕಾರ್ಯಯೋಜನೆಯನ್ನು ರೂಪಿಸುವಂತೆ ಜಿಲ್ಲಾಧಿಕಾರಿಯವರಿಗೆ ಹಾಗೂ ಕ್ರೀಡಾ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.

ಹಾಗೂ ಗೋಪಾಲ್ ಗೌಡ ಬಡಾವಣೆಯ ಸ್ಪೋರ್ಟ್ಸ್
ಕಾಂಪ್ಲೆಕ್ಸ್ ನಲ್ಲಿ ತುರ್ತಾಗಿ ಲಾಂಗ್ ಟೆನ್ನಿಸ್ ಗ್ರೌಂಡ್ ಗೆ ಮೇಲ್ಚಾವಣಿ, ನೂತನವಾಗಿ ಟೇಬಲ್ ಟೆನ್ನಿಸ್ ನಿರ್ಮಾಣ, ಸ್ಕೇಟಿಂಗ್ ಗ್ರೌಂಡ್ ರಿನ್ನೋವೇಶನ್, ಬೇಬಿ ಸ್ವಿಮ್ಮಿಂಗ್ ಪೂಲ್ ಅತ್ಯಾಧುನಿಕವಾಗಿ ನಿರ್ಮಾಣ, ಕುಸ್ತಿ ಅಕಾಡಮಿ ಹಾಗೂ ವಾಲಿಬಾಲ್ ಹಾಸ್ಟೆಲ್ ಗೆ ಸಿಎ ಸೈಟ್ ಖರೀದಿ ಹಾಗೂ ಇನ್ನಿತರ ಕಾಮಗಾರಿಗಳನ್ನು ಕೈಗೊಳ್ಳಲು ತುರ್ತು ಕ್ರಮ ಕೈಗೊಳ್ಳಲು ಸೂಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆಯವರು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಸಂಯೋಜಕ ಜಿ.ಡಿ ಮಂಜುನಾಥ್ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರೇಖ್ಯನಾಯ್ಕ್ ಸಿದ್ಧಿ ವಿನಾಯಕ ಕ್ರೀಡಾ ಹಾಗೂ ಸಾಂಸ್ಕೃತಿಕ ವೇದಿಕೆಯ ಟಿ.ಡಿ ಗಿತೇಂದ್ರಗೌಡ ಜಿ. ಎಸ್. ಶಿವಕುಮಾರ್ ಸಿದ್ಧಿ ಬುದ್ಧಿ ಗಣಪತಿ ದೇವಸ್ಥಾನದ ಅಧ್ಯಕ್ಷರಾದ ಬ್ಯಾಂಕ್ ಸುರೇಶ್ ಶೆಟ್ಟಿ ಹಾಗೂ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *