ಶರವತಿ ಮುಳುಗಡೆ ಸಂತ್ರಸ್ತರ ಪುನರ್ವಸತಿಗೆಂದು ಅರಣ್ಯ ಜಮೀನು ಡಿ ರಿಸರ್ವ್ ಸಂಬAಧ ಜಂಟಿ ಸ್ಥಳ ಪರಿಶೀಲನೆಗೆ ಬಂದ ವೇಳೆ ನಿಯೋಜಿತ ಸಿಬ್ಬಂದಿಗಳಿಗೆ ಅಗತ್ಯ ಮಾಹಿತಿ/ದಾಖಲೆ ಒದಗಿಸುವಂತೆ ಶಿವಮೊಗ್ಗ ತಹಶೀಲ್ದಾರ್ ರಾಜೀವ್ ವಿ ಎಸ್ ತಿಳಿಸಿದ್ದಾರೆ.


ಮಾನ್ಯ ಜಿಲ್ಲಾಧಿಕಾರಿಳ ಪತ್ರದನ್ವಯ ಶರಾವತಿ ಮುಳಗಡೆ ಸಂತ್ರಸ್ತರ ಪುನರ್ವಸತಿಗೆಂದು ಅರಣ್ಯ ಜಮೀನು ಬಿಡುಗಡೆಗಾಗಿ ಅನುಮತಿ ಕೋರಿ ಕೇಂದ್ರ ಸರ್ಕಾರ ಹಾಗೂ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಪ್ರಕರಣಕ್ಕೆ ಸಂಬAಧಿಸಿದAತೆ ಜಿಲ್ಲೆಯಲ್ಲಿ ಜಂಟಿ ತನಿಖೆ ಮತ್ತು ಸರ್ವೇ ವರದಿಗೆ ಸೂಚಿಸಿದ್ದು, ಈ ಪೈಕಿ ಶಿವಮೊಗ್ಗ ತಾಲ್ಲೂಕಿನ ಕೆಳಕಂಡ ಗ್ರಾಮ ಹಾಗೂ ಸರ್ವೇ ನಂ ಗಳು ಒಳಗೊಂಡಿರುತ್ತವೆ.


ಚೋರಡಿ ಸ.ನಂ 117, ಕೋಣೆಹೊಸೂರು 23, 22, ತುಪ್ಪೂರು 45, 44, 19, ಕುಂಸಿ 201, ಸಿಂಗನಹಳ್ಳಿ 61, ಕೊರಗಿ 30, ಶಾಂತಿಕೆರೆ 1, ವಡೇರಕೊಪ್ಪ 1, ಶೆಟ್ಟಿಕೆರೆ 1, ಮಂಜರಿಕೊಪ್ಪ 26, 27, 28, 37, 7, ಅನುಪಿನಕಟ್ಟೆ 127, ಹನುಮಂತಾಪುರ 6, ಸೂಡೂರು 16, ದೊಡ್ಡಮತ್ಲಿ 16, ಆಡಿನಕೊಟ್ಟಿಗೆ 17, ಕೂಡಿ 31, 32, 33, 34, ತಾವರೆಕೊಪ್ಪ 24, ಪುರದಾಳು 1, ಮಲೆಶಂಕರ ಎಸ್ ಎಫ್ 1, ಶೆಟ್ಟಿಹಳ್ಳಿ 24, ಚೇತ್ರಶೆಟ್ಟಿಹಳ್ಳಿ 1, 7, 8, 24, 8 ಈ ಗ್ರಾಮಗಳ ಬಾಬ್ತು ಶರಾವತಿ ಪನರ್ ವಸತಿ ಸೌಲಭ್ಯ ಕಲ್ಪಿಸುವ ಕುರಿತು ಅರಣ್ಯ ಭೂಮಿಯನ್ನು ಡಿ ರಿಸರ್ವ್ ಮಾಡುವ ಪ್ರಸ್ತಾವನೆಗೆ ಸಂಬAಧಿಸಿದAತೆ ರಾಜಸ್ವ ನಿರೀಕ್ಷಕರ ನೇತೃತ್ವದಲ್ಲಿ ಗ್ರಾಮ ಆಡಳಿತಾಧಿಕಾರಿಗಳು, ಭೂಮಾಪಕರುಗಳು, ಉಪ ವಲಯ ಅರಣ್ಯಾಧಿಕಾರಿಗಳನ್ನೊಳಗೊಂಡ ತಂಡವು ಜಂಟಿ ಸ್ಥಳ ಪರಿಶೀಲನಾ ಕಾರ್ಯವನ್ನು ನಡೆಸುವುದು.


ಈ ವೇಳೆ ಪ್ರಸ್ತಾವನೆಯಲ್ಲಿನ ದಾಖಲೆ, ಸ್ಕೆಚ್, ಜಿಪಿಎಸ್ ದತ್ತಾಂಶಗಳನ್ನು ಆಧರಿಸಿ ಪ್ರಸ್ತಾಪಿತ ಬ್ಲಾಕ್ ಹಾಗೂ ಸ.ನಂ ನಲ್ಲಿರುವ ಬ್ಲಾಕ್‌ನ ಗಡಿ ಹಾಗೂ ವಿಸ್ತೀರ್ಣವನ್ನು ಭೂಮಾಪಕರುಗಳು ಮೋಜಣಿ ಮಾಡಿ ಡಿಜಿಪಿಎಸ್ ದತ್ತಾಂಶಗಳನ್ನು ಸಂಗ್ರಹಿಸಿ ನಂತರ ಬ್ಲಾಕ್ ಗಡಿಯ ಒಳಗಿರುವ ಪ್ರದೇಶದಲ್ಲಿನ ಭೂ ಅನುಭೋಗದಾರರು/ಇವರ ಪರವಾಗಿ ವಾರಸುದಾರರು ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಆಡಳಿತಾಧಿಕಾರಿಗಳವರ ಸಮ್ಮುಖದಲ್ಲಿ ಸ್ಥಳದಲ್ಲಿ ಹಾಜರಾಗಿ ಭೂ ಅನುಭೋಗದಾರರು ಅನುಭೋಗದಲ್ಲಿರುವ ಪ್ರದೇಶವನ್ನು ತೋರಿಸಿದ ಆಧಾರದ ಮೇಲೆ ಸದರಿಯವರ ಅನುಭೋಗದಲ್ಲಿರುವ ಪ್ರದೇಶದ ಹಾಗೂ ವಿಸ್ತೀರ್ಣವನ್ನು ಮೋಜಣಿ ಮಾಡಿಕೊಂಡು ಡಿಜಿಪಿಎಸ್ ದತ್ತಾಂಶಗಳು ಹಾಗೂ ವಿಸ್ತೀರ್ಣದ ವಿವರಗಳನ್ನು ಸಂಗ್ರಹಿಸಿಕೊAಡು ನಿಯಮಾನುಸಾರ ಕ್ರಮ ವಹಿಸಲಾಗುವುದು. ಈ ಸಂದರ್ಭದಲ್ಲಿ ನಿಯೋಜಿತ ಸಿಬ್ಬಂದಿಗಳಿಗೆ ಅಗತ್ಯ ಮಾಹಿತಿ/ದಾಖಲೆ ಒದಗಿಸಬೇಕೆಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *