“ವಿಶ್ವಗುರು ಸಂಕಲ್ಪ ಹಾಗೂ ವಸುದೈವ ಕುಟುಂಬ ಸಾಕಾರವೇ ಬಿಜೆಪಿಯ ಗುರಿ”
ಭಾರತೀಯ ಜನತಾ ಪಕ್ಷದ 46ನೇ ವರ್ಷದ “ಸಂಸ್ಥಾಪನ ದಿನ” ದ ಅಂಗವಾಗಿ ಹಾಗೂ “ಶ್ರೀ ರಾಮನವಮಿ” ನಿಮಿತ್ತ ಬಿಜೆಪಿ ಶಿವಮೊಗ್ಗ ಜಿಲ್ಲಾ ಕಚೇರಿಯಲ್ಲಿ ಸಂಸ್ಥಾಪನ ದಿನ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸದ ಬಿ ವೈ ರಾಘವೇಂದ್ರ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿ, ರಾಷ್ಟ್ರೀಯ ವಿಚಾರ ಧಾರೆಗಳನ್ನು ಎತ್ತಿ ಹಿಡಿಯುವ ಧ್ಯೇಯ ಸಂಕಲ್ಪದೊಂದಿಗೆ ಹಿರಿಯರ ಪರಿಶ್ರಮದಿಂದ ಸ್ಥಾಪಿಸಿದ ಪಕ್ಷದ ಮಹನೀಯರ ಚಿತ್ರಪಟಕ್ಕೆ ಪುಷ್ಪ ನಮನ ಸಲ್ಲಿಸಿ ಪಕ್ಷ ಕಟ್ಟುವಲ್ಲಿ ಹಿರಿಯರ ಪರಿಶ್ರಮದ ಹಿನ್ನೆಲೆಯನ್ನು ನೆನಪು ಮಾಡಿಕೊಂಡು ನಂತರ ಕಚೇರಿ ಆವರಣದಲ್ಲಿ ಸ್ಥಾಪಿಸಿದ್ದ ಪ್ರಭು ಶ್ರೀ ರಾಮನ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಭಕ್ತಿಯಿಂದ ನಮಿಸಲಾಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಜಗದೀಶ್ ಅವರು, ಶಾಸಕರುಗಳಾದ ಶ್ರೀ ಚನ್ನಬಸಪ್ಪ ಅವರು, ಶ್ರೀ ಅರುಣ್ ಅವರು, ಶ್ರೀ ಧನಂಜಯ ಸರ್ಜಿ ಅವರು, ನಗರ ಅಧ್ಯಕ್ಷರಾದ ಶ್ರೀ ಮೋಹನ್ ರೆಡ್ಡಿ ಅವರು, ಮುಖಂಡರಾದ ಶ್ರೀ ಜ್ಯೋತಿ ಪ್ರಕಾಶ್ ಅವರು, ಶ್ರೀ ಸುರೇಶ್ ಅವರು, ಶ್ರೀ ಜ್ಞಾನೇಶ್ವರ್ ಅವರು ಸೇರಿದಂತೆ ಅನೇಕ ಹಿರಿಯರು ಮುಖಂಡರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.