ಜಿಲ್ಲಾಧಿಕಾರಿಗಳ ಕಚೇರಿ ಮುಂದಿನ ಈದ್ಗಾ ಮೈದಾನ ಮಾಲಿಕತ್ವದ ವಿಷಯ ಕೊನೆಗೂ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಸುಖಾಂತ್ಯ ಕಂಡಿದೆ.ಮಾಲಿಕತ್ವ ವಿಷಯ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಲು ಸೂಚಿಸಿದ್ದು, ಉಳಿದಂತೆ ಈ ಹಿಂದಿನಂತೆ ಪಾರ್ಕಿಂಗ್ ಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಎದುರಿನ ಮೈದಾನದ ವಿಷಯದಲ್ಲಿ ಏ.1 ರಂದು ಬೇಲಿ ನಿರ್ಮಿಸಿರುವುದನ್ನ ವಿರೋಧಿಸಿ ಹಿಂದೂ ಸಂಘಟನೆಗಳು ದಿಡೀರ್ ಪ್ರತಿಭಟನೆ ನಡೆಸಿತು. ದಿಡೀರ್ ಪ್ರತಿಭಟನೆಯ ಹಿನ್ನಲೆಯಲ್ಲಿ ಸಂಜೆಯವರೆಗೆ ಅಕ್ರಮ ಬೇಲಿ ತೆರವಿಗೆ ಜಿಲ್ಲಾಡಳಿತ ಕಾಲಾವಕಾಶ ಕೇಳಿತ್ತು.
ಸಂಜೆಯ ನಂತರ ಅಕ್ರಮ ಬೇಲಿ ತೆರವುಗೊಳಿಸಿದರೂ ಸಹ ಬ್ಯಾರಿಕೇಡ್ ನಿರ್ಮಿಸಿದ್ದರು. ಇದರ ಬೆನ್ಬಲ್ಲೇ ಮುಸ್ಲೀಂ ಸಂಘಟನೆಗಳು ಪ್ರತಿಭಟಿಸಿ ಈ ಜಾಗ ನಮ್ಮದು ಎಂದು ಪ್ರತಿಭಟಿಸಿ ಮನವಿ ಸಲ್ಲಿಸಿತ್ತು. ಈ ಮನವಿಯ ಬೆನ್ನಲ್ಲೇ ಮಾಜಿ ಡಿಸಿಎಂ ಈಶ್ವರಪ್ಪನವರ ನೇತೃತ್ವದಲ್ಲಿ ಮೈದಾನ ಒಂದು ಸಮುದಾಯಕ್ಕೆ ಸೇರಿದ್ದಲ್ಲ ಅದು ಆಟದ ಮೈದಾನ ಎಂದು ಪ್ರತಿಭಟನೆ ನಡೆಸಿದ್ದರು.
ಶಾಸಕ ಚೆನ್ನಬಸಪ್ಪ ನೇತೃತ್ವದಲ್ಲಿ ಡಿಸಿಯೊಂದಿಗೆ ಸಭೆ ನಡೆಸಿ ಬ್ಯಾರಿಕೇಡ್ ತೆರವಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ನಂತರ ಏ.9 ರ ನಂತರ ಪ್ರತಿಭಟಿಸುವಿದಾಗಿ ಭಾರತೀಯ ಜನತಾ ಪಕ್ಷ ಪ್ರತಿಭಟಿಸುವುದಾಗಿ ಹೇಳಿದ್ದರು.
ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ರವರ ನೇತೃತ್ವದಲ್ಲಿ ಮೈದಾನ ಸುಖಾಂತ್ಯಗೊಂಡಿದ್ದು ಎಲ್ಲಾ ಸಮುದಾಯದ ಜನರೊಂದಿಗೆ ಸಭೆ ನಡೆಸಿ ಪಾರ್ಕಿಂಗ್ ಗೆ ಅವಕಾಶ ಕಲ್ಪಿಸಿರುವುದಾಗಿ ತಿಳಿಸಿದ್ದಾರೆ.ನಾಳೆ ಏಪ್ರಿಲ್ 10ರಂದು 10ಗಂಟೆಯ ನಂತರ ವಾಹನ ಪಾರ್ಕಿಂಗ್ ಗೆ ಅವಕಾಶ ಕಲ್ಪಿಸಲಾಗಿದೆ ಎಂದರು. ಸುರಕ್ಷತೆ ದೃಷ್ಟಿಯಿಂದ ಈಗಾಗಲೇ 14 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದರು. ಈ ಸಮಯದಲ್ಲಿ ಸಹಕಾರ ನೀಡಿದ ಮಾಧ್ಯಮ ಮಿತ್ರರಿಗೆ ಧನ್ಯವಾದಗಳು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದರು.